ಮೈಸೂರು, ನ.3-ರಾಜ್ಯದಲ್ಲೇ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಒಂದಾದ ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಪುರು ಷರ ಸ್ನಾತಕ ಪೂರ್ವ ವಿದ್ಯಾರ್ಥಿನಿಲಯದ ಕಟ್ಟಡ ದಿನೇ ದಿನೆ ಶಿಥಿಲಗೊಳ್ಳುತ್ತಿದೆ. ಮಳೆ ನೀರಿನಿಂದಾಗಿ ಕೊಠಡಿಗಳ ಮೇಲ್ಛಾವಣಿಯ ಗಾರೆ ಉದುರಲಾರಂಭಿಸಿದೆ. ವೈದ್ಯಕೀಯ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ.
ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ (ಮುಡಾ ಎದುರು) ಮೈಸೂರು ಮೆಡಿ ಕಲ್ ಕಾಲೇಜಿನ ಪುರುಷರ ವಿದ್ಯಾರ್ಥಿ ನಿಲಯದಲ್ಲಿ ಮೆರಿಟ್ ಆಧಾರದ ಮೇಲೆ ವಿವಿಧೆಡೆಯಿಂದ ವೈದ್ಯಕೀಯ ಶಿಕ್ಷಣಕ್ಕಾಗಿ ಆಯ್ಕೆಯಾದವರು ವಾಸ್ತವ್ಯವಿದ್ದಾರೆ. 5 ದಶಕದಿಂದ ಲಕ್ಷಾಂತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದ ವಿದ್ಯಾರ್ಥಿ ನಿಲಯ, 2-3 ವರ್ಷದಿಂದ ಶಿಥಿಲಗೊಂ ಡಿದ್ದು, ವಿದ್ಯಾರ್ಥಿಗಳಲ್ಲಿ ಭಯ ಉಂಟು ಮಾಡುತ್ತಿದೆ. ಅಲ್ಲದೆ ಕಾಲೇಜಿನ ಆಡಳಿತ ವರ್ಗವನ್ನೂ ಚಿಂತೆಗೀಡು ಮಾಡಿದೆ.
ಹಲವು ಕೊಠಡಿಗಳಲ್ಲಿ ಸಮಸ್ಯೆ: ಸೋಮ ವಾರ ಸಂಜೆ ವಿದ್ಯಾರ್ಥಿಗಳು ಓದಿನಲ್ಲಿ ಮಗ್ನ ರಾಗಿದ್ದ ವೇಳೆಯೇ 3-4 ಕೊಠಡಿಗಳ ಮೇಲ್ಛಾ ವಣಿಯಿಂದ ಗಾರೆ ಚೂರು ಉದುರಿದೆ. ವಿದ್ಯಾರ್ಥಿಗಳು ತಕ್ಷಣ ಕೊಠಡಿಯಿಂದ ಹೊರ ಬಂದು ಅಪಾಯದಿಂದ ಪಾರಾಗಿದ್ದಾರೆ. ಹಿಂದೆಯೂ ಗಾರೆ ಉದುರಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.
58 ವರ್ಷ, 140 ಕೊಠಡಿ: 140 ಕೊಠಡಿ ಗಳ ವಿದ್ಯಾರ್ಥಿನಿಲಯವನ್ನು 1962ರಲ್ಲಿ ಕಟ್ಟಲಾಗಿದೆ. ಅದರಲ್ಲಿ ಗ್ರಂಥಾಲಯ, ಸಿಬ್ಬಂದಿ ಗಳ ಕೊಠಡಿಗಳಿವೆ. ವಿವಿಧ ಉಪಯೋಗ ಕ್ಕಾಗಿ 20 ಕೊಠಡಿ ಬಳಸಿಕೊಳ್ಳಲಾಗಿದೆ. ಅದರಲ್ಲಿ ಶೌಚಾಲಯದ ಸಮೀಪವಿರುವ 3 ಕೊಠಡಿ ಬಳಕೆಗೆ ಯೋಗ್ಯವಲ್ಲ ಎಂದು ನಿರ್ಧರಿಸಲಾಗಿದೆ. ಸದ್ಯ 400 ವಿದ್ಯಾರ್ಥಿ ಗಳು ವಾಸವಿದ್ದಾರೆ.
ಈ ವರ್ಷ ಅವಕಾಶವಿಲ್ಲ: ಈ ವಿದ್ಯಾರ್ಥಿ ನಿಲಯಕ್ಕೆ ಪ್ರತಿವರ್ಷ 70-80 ಎಂಬಿಬಿಎಸ್ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಾರೆ. ಈ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಬೇರೆÀಡೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.
ಕಟ್ಟಡ ಪರಿಶೀಲನೆ: ವಿದ್ಯಾರ್ಥಿನಿಲಯದ 2ನೇ ಮಹಡಿಯ ಕೆಲ ಕೊಠಡಿಗಳಲ್ಲಿ ಮೇಲ್ಛಾವಣಿ ಗಾರೆ ಉದುರಿದ್ದರಿಂದ ಕಾಲೇ ಜಿನ ಡೀನ್ ಮತ್ತು ನಿರ್ದೇಶಕ ಡಾ.ನಂಜ ರಾಜ್ ನೇತೃತ್ವದಲ್ಲಿ ಸಭೆ ನಡೆದಿದೆ. ವಾರ್ಡನ್ ಕೆ.ಟಿ.ಚಂದ್ರಶೇಖರ್ ಕೊಠಡಿಗಳ ದುಃಸ್ಥಿತಿ ವಿವರಿಸಿದ್ದಾರೆ. ಸಭೆಯಲ್ಲಿದ್ದ ಲೋಕೋಪ ಯೋಗಿ ಇಲಾಖೆ ಇಂಜಿನಿಯರ್‍ಗೆ ಕಟ್ಟಡದ ದೃಢತೆ, ಬಾಳಿಕೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಪಾರಂ ಪರಿಕ ಶೈಲಿಯಲ್ಲಿ ನಿರ್ಮಿಸಿದ ಕಟ್ಟಡ ದುರಸ್ತಿ ಮಾಡಿ ವಿದ್ಯಾರ್ಥಿನಿಲಯ ಮುಂದುವರೆಸ ಬೇಕೋ ಅಥವಾ ಕಟ್ಟಡ ನೆಲಸಮಗೊಳಿಸ ಬೇಕೋ ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ನೆಲಸಮ ಮಾಡುವುದಿದ್ದರೆ ವಿದ್ಯಾರ್ಥಿ ಗಳನ್ನು ಶೀಘ್ರವೇ ಬೇರೆಡೆಗೆ ಸ್ಥಳಾಂತರಿ ಸಲಾಗುತ್ತದೆ. ಕಟ್ಟಡ ಶಿಥಿಲಗೊಳ್ಳುತ್ತಿರು ವುದರಿಂದ ಮುಂದಿನ ವರ್ಷದಿಂದ ವಿದ್ಯಾರ್ಥಿ ಗಳನ್ನು ಪಿಕೆಟಿಬಿ ಆಸ್ಪತ್ರೆ ಹಿಂಭಾಗದ ಕಟ್ಟ ಡಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಎಂ.ಟಿ.ಯೋಗೇಶ್‍ಕುಮಾರ್