ರೈತರಿಗೆ ನ್ಯಾಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ರೈತರಿಗೆ ನ್ಯಾಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

July 13, 2021

ಮೈಸೂರು, ಜು.12(ಎಂಟಿವೈ)- ಹೆರಿಟೇಜ್ ಗಾಲ್ಫ್ ಕಂಪನಿಯಿಂದ ವಂಚನೆಗೆ ಒಳಗಾದ ರೈತ ಕುಟುಂಬ ಗಳಿಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಕೋಚನಹಳ್ಳಿ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ವಂಚನೆಗೊಳಗಾದ ರೈತರು ಪ್ರತಿಭಟನೆ ನಡೆಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ರೈತರು, ಕಂಪನಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 2004ರಿಂದ 2007ರ ಅವಧಿ ಯಲ್ಲಿ ಹೆರಿಟೇಜ್ ಗಾಲ್ಫ್ ಕಂಪನಿ ಮತ್ತು ಟೋಟಲ್ ಎನ್ವಾರ್ನಮೆಂಟ್ ಸಂಸ್ಥೆಗಳು ಜಂಟಿಯಾಗಿ ನಂಜನಗೂಡು ತಾಲೂಕಿನ ಕೋಚನಹಳ್ಳಿಯಲ್ಲಿ ಜಮೀನು ಖರೀದಿಸಿವೆ. ಗಾಲ್ಫ್ ಕೋರ್ಸ್, ಐಷಾರಾಮಿ ವಿಲ್ಲಾ ನಿರ್ಮಿಸಲು 400 ಎಕರೆ ಭೂಮಿ ಖರೀದಿಸಿ ಸ್ವಾಧೀನ ಪಡಿಸಿಕೊಂಡಿ ದ್ದಾರೆ. ಜಮೀನು ಪಡೆಯುವ ವೇಳೆ ಭೂ ಮಾಲೀಕರ ಕುಟುಂಬದ ಸದಸ್ಯರೊಬ್ಬರಿಗೆ ಖಾಯಂ ಉದ್ಯೋಗ, ಉತ್ತಮ ವೇತನ ನೀಡುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಉದ್ಯೋಗ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೇವಲ ಬೆಲೆಬಾಳುವ ಭೂಮಿ ಕಬಳಿಸುವ ಹುನ್ನಾರ ದಿಂದ ಈ ಕಂಪನಿ ಆರಂಭಿಸಲು ಸಂಚು ನಡೆಸಿರುವ ಅನುಮಾನವಿದೆ. ಆರಂಭಿಸುವ ಮುನ್ನವೇ ಇದೀಗ ಈ ಕಂಪನಿ ಮುಚ್ಚಿರುವುದು ಹಲವು ಸಂಶಯಕ್ಕೆ ಎಡೆಮಾಡಿ ಕೊಡುತ್ತದೆ. ಕಣ್ಣೊರೆಸುವ ತಂತ್ರವಾಗಿ ಪುಡಿಗಾಸಿನ ಪರಿ ಹಾರ ನೀಡಿ ಕೈತೊಳೆದುಕೊಂಡಿದೆ. ಈ ಹಿಂದೆ ಕೃಷಿ ಚಟುವಟಿಕೆ ನಡೆಯುತ್ತಿದ್ದ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು(ಕೆಐಎಡಿಬಿ) ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ. ರೈತರಿಂದ 1.25 ಲಕ್ಷ ರೂ.ಗೆ ಖರೀದಿಸಿರುವ ಭೂಮಿ ಯನ್ನು ಈ ಕಂಪನಿ, ಕೆಐಎಡಿಬಿಗೆ 47.50 ಲಕ್ಷ ರೂ.ಗೆ ಮಾರಿ ಲಾಭ ಮಾಡಿಕೊಂಡಿದೆ ಎಂದು ದೂರಿದರು.

ರೈತರಿಗೆ ಉದ್ಯೋಗ ನೀಡುವ ಭರವಸೆಯನ್ನು ಸರ್ಕಾರ ನೀಡಬೇಕು. ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿರುವ 189 ಎಕರೆ ಭೂಮಿಗೆ ಬೇನಾಮಿಗಳು ಹಣ ಪಡೆದಿದ್ದು, ಈಗ ರೈತರಿಗೆ ಪರಿಹಾರ ನೀಡಬೇಕು. ಬಾಕಿ ಉಳಿದಿ ರುವ ಭೂಮಿಯನ್ನು ಸಂಬಂಧಪಟ್ಟ ರೈತರಿಗೆ ಹಿಂದಿ ರುಗಿಸಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿ ಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

Translate »