ಎಸ್‍ಸಿ-ಎಸ್‍ಟಿ ಐಟಿಐ ವಿದ್ಯಾರ್ಥಿಗಳಿಗೆ   ಲ್ಯಾಪ್‍ಟಾಪ್ ನೀಡಲು ಒತ್ತಾಯಿಸಿ ಪ್ರತಿಭಟನೆ 
ಮೈಸೂರು

ಎಸ್‍ಸಿ-ಎಸ್‍ಟಿ ಐಟಿಐ ವಿದ್ಯಾರ್ಥಿಗಳಿಗೆ  ಲ್ಯಾಪ್‍ಟಾಪ್ ನೀಡಲು ಒತ್ತಾಯಿಸಿ ಪ್ರತಿಭಟನೆ 

October 21, 2020

ಮೈಸೂರು,ಅ.20(ಪಿಎಂ)-ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ (ಎಸ್‍ಸಿ-ಎಸ್‍ಟಿ) ಸೇರಿದ ಐಟಿಐ ವಿದ್ಯಾರ್ಥಿಗಳಿಗೆ ಈ ಮೊದಲಿನಂತೆ ಸಮವಸ್ತ್ರ, ಟೂಲ್‍ಕಿಟ್ ಹಾಗೂ ಲ್ಯಾಪ್‍ಟಾಪ್ ನೀಡಲು ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗ್‍ನೈಸೇಷನ್ (ಎಐಡಿವೈಓ) ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿ ಗಳು ಮಂಗಳವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸರ್ಕಾರ ಪ್ರತಿವರ್ಷ ಎಸ್‍ಸಿ-ಎಸ್‍ಟಿ ವರ್ಗಕ್ಕೆ ಸೇರಿದ ಐಟಿಐ ವಿದ್ಯಾರ್ಥಿಗಳಿಗೆ ಟೂಲ್‍ಕಿಟ್, ಸಮವಸ್ತ್ರ ಮತ್ತು ಲ್ಯಾಪ್‍ಟಾಪ್ ನೀಡುತ್ತಿತ್ತು. ಆದರೆ 2018-2020ನೇ ಸಾಲಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಈವರೆಗೆ ಈ ಯಾವುದೇ ಸಾಮಗ್ರಿಗಳನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಹುತೇಕರು ಗ್ರಾಮೀಣ ಭಾಗದಿಂದ ಬರುವ ಬಡವರಾಗಿದ್ದು, ಐಟಿಐನಲ್ಲಿ ಒಂದಿಷ್ಟು ತಾಂತ್ರಿಕ ತರಬೇತಿ ಪಡೆದು ಬದುಕು ಕಟ್ಟಿಕೊಳ್ಳುವ ಹಂಬಲದಲ್ಲಿದ್ದಾರೆ. ಸರ್ಕಾರ ಸೌಲಭ್ಯಗಳು ಅವರ ತರಬೇತಿಗೆ ಸಹಾಯಕ ವಾಗಿತ್ತು. ಹೀಗಾಗಿ ಕೊರೊನಾ ನೆಪ ಹೇಳದೇ ಕೂಡಲೇ ಸಮವಸ್ತ್ರ, ಟೂಲ್‍ಕಿಟ್, ಲ್ಯಾಪ್‍ಟಾಪ್ ನೀಡಲು ಕ್ರಮ ವಹಿಸಬೇಕು. ಮೊದಲು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸಾಮಗ್ರಿಗಳನ್ನು ನೀಡÀಬೇಕು ಎಂದು ಒತ್ತಾಯಿಸಿದರು. ಸಂಘಟನೆ ರಾಜ್ಯಾಧ್ಯಕ್ಷೆ ಉಮಾ ದೇವಿ, ಜಿಲ್ಲಾಧ್ಯಕ್ಷ ಹರೀಶ್, ಕಾರ್ಯದರ್ಶಿ ಸುನಿಲ್, ಐಟಿಐ ವಿದ್ಯಾರ್ಥಿಗಳಾದ ಚಂದು, ಮಹದೇವಸ್ವಾಮಿ, ವಿನಯ್, ಶರತ್, ರಾಜೇಶ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

 

 

 

Translate »