ರೇಷ್ಮೆ ಕಾರ್ಖಾನೆ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ 3ನೇ ದಿನ
ಮೈಸೂರು

ರೇಷ್ಮೆ ಕಾರ್ಖಾನೆ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ 3ನೇ ದಿನ

October 21, 2020

ಮೈಸೂರು, ಅ.20(ಪಿಎಂ)- ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (ಕೆಎಸ್‍ಐಸಿ) ಕೆಲ ಖಾಯಂ ಹಾಗೂ ಹೊರ ಗುತ್ತಿಗೆ ಕಾರ್ಮಿಕರು ಮೈಸೂರಿನ ರೇಷ್ಮೆ ನೇಯ್ಗೆ ಕಾರ್ಖಾನೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕಾರ್ಖಾನೆ ಆವರಣದಲ್ಲಿ ಸಿಲ್ಕ್ ವೀವಿಂಗ್ ಫ್ಯಾಕ್ಟರಿ ಎಂಪ್ಲಾಯೀಸ್ ಯೂನಿಯನ್ ನೇತೃತ್ವದಲ್ಲಿ ಶನಿ ವಾರ ಪ್ರತಿಭಟನೆ ಆರಂಭಿಸಿದ್ದರು. ಸೇವೆಯಲ್ಲಿರು ವಾಗ ಕಾರ್ಮಿಕರು ಮೃತರಾದರೆ ಅವರ ಅವಲಂಬಿ ತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಹೈಕೋರ್ಟ್ ಆದೇಶ ನೀಡಿದೆ. ಅದರಂತೆ ಹೊರಗುತ್ತಿಗೆಯ 48 ಸಿಬ್ಬಂದಿಯನ್ನು ಖಾಯಂ ಮಾಡುವಂತೆ ಆಗ್ರಹಿಸಿದ್ದರು. ಸೋಮವಾರವೂ ಪ್ರತಿಭಟನೆ ಮುಂದುವರೆಸಲಾಗಿತ್ತು.

ನಿಗಮದ ಶೋರೂಮ್‍ಗಳಲ್ಲಿನ ಹೊರಗುತ್ತಿಗೆ ಮಹಿಳಾ ಕಾರ್ಮಿಕರು, ಟಿ.ನರಸೀಪುರದ ನೂಲು ತೆಗೆ ಯುವ ಘಟಕದ ಹೊರಗುತ್ತಿಗೆ ಕಾರ್ಮಿಕರು ಸಹ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ಪ್ರತಿಭಟನೆಗೆ ಕೈಜೋಡಿಸಿದ್ದರು.

ಕಾರ್ಖಾನೆ ಆಡಳಿತ ಮಂಡಳಿಯು ಕಾರ್ಖಾನೆ ಆವ ರಣದಲ್ಲಿ ಪ್ರತಿಭಟನೆಗೆ ಅವಕಾಶ ನಿರಾಕರಿಸಿ, ಮುಖ್ಯ ದ್ವಾರ ಮುಚ್ಚಿದ್ದರಿಂದ ನೂರಾರು ಕಾರ್ಮಿಕರು ಕಾರ್ಖಾನೆ ಗೇಟ್ ಬಳಿಯೇ ಪ್ರತಿಭಟನೆ ಮುಂದುವರೆಸಿದರು. ಪೊಲೀಸರು, ಮಾಜಿ ಉಪಮೇಯರ್ ಶೈಲೇಂದ್ರ ಸ್ಥಳಕ್ಕಾ ಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಕಾರ್ಖಾನೆ ಗೇಟ್‍ಗೆ ಬದಲು ರಸ್ತೆ ಬದಿಯಲ್ಲಿ ಪ್ರತಿಭಟನೆ ಮುಂದು ವರೆಸುವಂತೆ ಮನವೊಲಿಸಿದರು. ಈ ವೇಳೆ ಸ್ಥಳಕ್ಕಾಗ ಮಿಸಿದ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ, ಕೆಎಸ್‍ಐಸಿ ಮಾಜಿ ಅಧ್ಯಕ್ಷ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ಮುಖಂಡ ಶ್ರೀಧರ್, ಮಾಜಿ ಉಪ ಮೇಯರ್ ಶೈಲೇಂದ್ರ ಬೆಂಬಲ ಸೂಚಿಸಿ ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಧ್ಯಾಹ್ನದ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿ ಸಿದ ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಕಾರ್ಮಿಕರ ಬೇಡಿಕೆಗಳನ್ನು ಆಲಿಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಗಮನಕ್ಕೆ ತಂದು ಬಗೆಹರಿಸ ಲಾಗುವುದು ಎಂದು ಭರವಸೆ ನೀಡಿದರು. ದಸರಾ, ಕೊರೊನಾ ಸಂದರ್ಭ ಈ ರೀತಿ ಪ್ರತಿಭಟನೆ ಸರಿ ಯಲ್ಲ ಎಂದು ತಿಳಿಹೇಳಿದ್ದಕ್ಕೆ ಕಾರ್ಮಿಕರು ಪ್ರತಿ ಭಟನೆ ಕೈಬಿಟ್ಟರು. ಯೂನಿಯನ್ ಜಂಟಿ ಕಾರ್ಯ ದರ್ಶಿ ಅನಿಲ್‍ಕುಮಾರ್ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.

Translate »