ಧಾರ್ಮಿಕ ಕಟ್ಟಡಗಳ ತೆರವು; ಬಿಜೆಪಿ ಸರ್ಕಾರದ ವಿರುದ್ಧ  ಮಾಜಿ ಶಾಸಕ ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ
ಮೈಸೂರು

ಧಾರ್ಮಿಕ ಕಟ್ಟಡಗಳ ತೆರವು; ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಶಾಸಕ ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ

September 16, 2021

ಮೈಸೂರು,ಸೆ.15(ಪಿಎಂ)- ಧಾರ್ಮಿಕ ಕಟ್ಟಡಗಳ ತೆರವು ಸಂಬಂಧ ಬಿಜೆಪಿ ಸರ್ಕಾರ ನಾಟಕವಾಡುತ್ತಿದೆ ಎಂದು ಆರೋಪಿಸಿ ಹಾಗೂ ಯಾವುದೇ ಧರ್ಮೀಯರ ಧಾರ್ಮಿಕ ನಿರ್ಮಾಣಗಳನ್ನು ತೆರವು ಗೊಳಿಸಬಾರದು ಎಂದು ಒತ್ತಾಯಿಸಿ ಕಾಂಗ್ರೆಸ್‍ನ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ನೂರೊಂದು ಗಣಪತಿ ದೇವಸ್ಥಾನದ ಎದುರು ಜಮಾಯಿಸಿದ ಪ್ರತಿ ಭಟನಾಕಾರರು, ಬಿಜೆಪಿ ಸರ್ಕಾರ ಒಂದು ಕಡೆ ಧ್ವಂಸÀಕ್ಕೆ ಆದೇಶ ನೀಡಿ ಮತ್ತೊಂದೆಡೆ ತಡೆ ನೀಡುವ ಮೂಲಕ ಧರ್ಮ, ದೇವರ, ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡು ತ್ತಿದೆ ಎಂದು ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಎಂ.ಕೆ. ಸೋಮಶೇಖರ್, ಧಾರ್ಮಿಕ ಕಟ್ಟಡ ಗಳನ್ನು ತೆರವುಗೊಳಿಸುವ ಮೂಲಕ ಜನರ ಭಾವನೆಗೆ ಧಕ್ಕೆ ತರುತ್ತಿದ್ದು, ಇದಕ್ಕೆ ಸರ್ಕಾ ರವೇ ಕಾರಣ. ಧಾರ್ಮಿಕ ಕಟ್ಟಡಗಳ ತೆರವು ವಿಚಾರದಲ್ಲಿ ಬಿಜೆಪಿಗರೇ ಪ್ರತಿ ಭಟನೆ ನಡೆಸುತ್ತಿದ್ದಾರೆ. ಅವರದೇ ಸರ್ಕಾರ ಇದ್ದರೂ ಹೀಗೆ ಪ್ರತಿಭಟನೆ ನಡೆಸುತ್ತಿರು ವುದು ದುರಂತ. ಕೇಂದ್ರ, ರಾಜ್ಯದಲ್ಲೂ ಅವರದೇ ಸರ್ಕಾರ. ಮೈಸೂರು ಮೇಯರ್ ಸ್ಥಾನ ಕೂಡ ಅವರದ್ದೇ. ಹೀಗಿರುವಾಗ ಇವರ ಪ್ರತಿಭಟನೆ ಯಾರ ವಿರುದ್ಧ ಎಂದು ಪ್ರಶ್ನಿಸಿ, ಛೇಡಿಸಿದರು. ಕೆಪಿಸಿಸಿ ವಕ್ತಾರ ಹೆಚ್.ಎ.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಪಾಲಿಕೆ ಸದಸ್ಯರಾದ ಗೋಪಿ, ಶೋಭಾ ಸುನಿಲ್, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಕಾಂಗ್ರೆಸ್ ಮುಖಂಡರಾದ ಶ್ರೀನಾಥ್ ಬಾಬು, ವಿಜಯ್ ಕುಮಾರ್, ಮಾರ್ಬಳ್ಳಿ ಕುಮಾರ್, ನಾಗರತ್ನ, ಮಂಜುನಾಥ್, ಡೈರಿ ವೆಂಕಟೇಶ್ ಮತ್ತಿತರರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »