ದೇವಾಲಯಗಳ ರಕ್ಷಣೆಗೆ ಮುಡಾ `ಶಾಶ್ವತ ಪರಿಹಾರ’
ಮೈಸೂರು

ದೇವಾಲಯಗಳ ರಕ್ಷಣೆಗೆ ಮುಡಾ `ಶಾಶ್ವತ ಪರಿಹಾರ’

September 16, 2021

ಮೈಸೂರು,ಸೆ.15(ಆರ್‍ಕೆ)-ದೇವಾಲಯಗಳನ್ನು ರಕ್ಷಿಸಿ ಕೊಳ್ಳಲು ಪರ್ಯಾಯ ಸೂತ್ರ ಕಂಡುಕೊಂಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಶಾಶ್ವತ ಪರಿಹಾರಕ್ಕೆ ಮುಂದಾಗಿದೆ.

ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾ ಡಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ನ್ಯಾಯಾಲಯದ ನಿರ್ದೇಶನದಂತೆ ಸರ್ಕಾರಿ ಜಾಗದಲ್ಲಿರುವ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಧಾರ್ಮಿಕ ಕೇಂದ್ರಗಳನ್ನು ಸಕ್ರಮಗೊಳಿಸಲು ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಸಕ್ರಮಗೊಳಿಸಲು ಸಾಧ್ಯವಾಗದಿದ್ದಲ್ಲಿ ದೇವಾಲಯ ಗಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಿ, ಅದೂ ಅಸಾಧ್ಯ ವಾದರೆ ತೆರವುಗೊಳಿಸಿ ಎಂದು ನ್ಯಾಯಾಲಯವು ಸ್ಪಷ್ಟ ವಾಗಿ ನಿರ್ದೇಶನ ನೀಡಿದೆ. ಈ ದಿಸೆಯಲ್ಲಿ ಮುಡಾ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ 93 ದೇಗುಲಗಳನ್ನು ಅಧಿಕಾರಿಗಳು ಗುರ್ತಿಸಿದ್ದಾರೆ. ಈ ಕುರಿತು ಅಂತಿಮ ತೀರ್ಮಾನವಾಗು ವವರೆಗೆ ನಮ್ಮ ಗಮನಕ್ಕೆ ತಾರದೇ ತೆರವುಗೊಳಿಸಬಾರ ದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಅಕ್ರಮ, ಅನುಮತಿ ಪಡೆದಿಲ್ಲ, ಸಾರ್ವಜನಿಕ ಸ್ಥಳದಲ್ಲಿವೆ ಎಂದು ಗುರ್ತಿಸಿರುವ 93 ಧಾರ್ಮಿಕ ಕಟ್ಟಡಗಳನ್ನು ಸಕ್ರಮಗೊಳಿಸಲು ಮೊದಲು ಪ್ರಯತ್ನಿಸುತ್ತೇವೆ. ಉದ್ಯಾನವನದಲ್ಲಿ ದೇವಸ್ಥಾನವಿದ್ದರೆ, ಆ ಜಾಗವನ್ನು ನಾವು ಸಿಎ (ನಾಗರಿಕ ಸೌಲಭ್ಯ) ನಿವೇಶನಕ್ಕೆ ಮೀಸಲಿರಿಸಿರುವ ಜಾಗ ಎಂದು ಪರಿ ವರ್ತಿಸುತ್ತೇವೆ. ಪರ್ಯಾಯವಾಗಿ ಅಷ್ಟೇ ವಿಸ್ತೀರ್ಣದ ಬೇರೆ ಸಿಎ ನಿವೇಶನವನ್ನು ಉದ್ಯಾ ನವನ ಮಾಡುತ್ತೇವೆ. ಈ ಪ್ರಕ್ರಿಯೆಯಿಂದ ಅಕ್ರಮ ಎಂದು ಅಧಿಕಾರಿಗಳು ಗುರುತಿಸಿರುವ ಧಾರ್ಮಿಕ ಕೇಂದ್ರಗಳು ಸಕ್ರಮವಾಗುತ್ತವೆ. ಅದೇ ವೇಳೆ ಉದ್ಯಾನವನಕ್ಕೆಂದು ಬಿಟ್ಟಿ ರುವ ಜಾಗದ ಅನುಪಾತವನ್ನೂ ಕಾಪಾಡಿದಂತಾಗುತ್ತದೆ. ಒಂದು ವೇಳೆ ಸಿಎ ನಿವೇಶನವನ್ನು ಪಾರ್ಕ್ ಎಂದು ಬದ ಲಿಸಲು ಸಾಧ್ಯವೇ ಆಗದಿದ್ದಲ್ಲಿ ದೇವಾಲಯವನ್ನು ಪಕ್ಕ ದಲ್ಲಿರುವ ಜಾಗಕ್ಕೆ ಸ್ಥಳಾಂತರಿಸಲು ಪ್ರಯತ್ನಿಸಲಾಗುವುದು ಎಂದು ಹೆಚ್.ವಿ.ರಾಜೀವ್ ವಿವರಿಸಿದರು.

ಸಿಎ ಅಥವಾ ಪಾರ್ಕ್ ಎಂದು ಪರಿವರ್ತಿಸುವಾಗ ಆ ಜಾಗಕ್ಕೆ ಇಂತಿಷ್ಟು ಹಣ ಪಾವತಿಸಬೇಕು. ಆದರೆ ಬಹುತೇಕ ಮಂದಿಗೆ ಅಷ್ಟೊಂದು ಹಣ ಕಟ್ಟಲು ಸಾಧ್ಯವಾಗದಿರು ವುದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸೂಕ್ತ ಪರಿಹಾರ ಕ್ಕಾಗಿ ಅನುಮತಿ ಪಡೆಯುತ್ತೇವೆ ಎಂದು ನುಡಿದರು.
ಧಾರ್ಮಿಕ ಕೇಂದ್ರಗಳಿಗೆ ಬಳಸುವ ಮೂಲಸೌಕರ್ಯ ನಿವೇಶನಗಳಿಂದ ಮುಡಾ ನಿಗದಿಪಡಿಸಿರುವ ಮೊತ್ತದ ಶೇ.25ರಷ್ಟನ್ನು ಮಾತ್ರ ಪಾವತಿಸಿಕೊಳ್ಳಲು ಅನುಮತಿ ಕೋರಿದ್ದೇವೆ. ಅದೇ ರೀತಿ ಪ್ರಸ್ತುತ ಇರುವ ಧಾರ್ಮಿಕ ಕೇಂದ್ರಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದರ ಜೊತೆಗೆ, ಭವಿಷ್ಯದಲ್ಲಿ ಹೀಗೆ ಅಕ್ರಮವಾಗಿ ಧಾರ್ಮಿಕ ಕಟ್ಟಡ ನಿರ್ಮಿಸದಂತೆಯೂ ಎಚ್ಚರ ವಹಿಸುತ್ತೇವೆ. ಇದರಿಂದ ಯಾವುದೇ ತೊಡಕು, ವಿವಾದದಿಂದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಸಮಸ್ಯೆ ನಿವಾರಣೆಯಾಗ ಲಿದೆ ಎಂದು ರಾಜೀವ್ ತಿಳಿಸಿದರು.

Translate »