ಫೆ.23ರಂದು ಲಯನ್ಸ್ ಸಂಸ್ಥೆಯ ಒಕ್ಕೂಟಗಳ ಪ್ರಾಂತೀಯ ಸಮ್ಮೇಳನ
ಮೈಸೂರು

ಫೆ.23ರಂದು ಲಯನ್ಸ್ ಸಂಸ್ಥೆಯ ಒಕ್ಕೂಟಗಳ ಪ್ರಾಂತೀಯ ಸಮ್ಮೇಳನ

February 21, 2021

ಮೈಸೂರು, ಫೆ.20- ಅಂತರ ರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಜಿಲ್ಲೆ- 317ಎ ವತಿಯಿಂದ ಧ್ಯೇಯ, ಸ್ನೇಹ ಹಾಗೂ ಸೇವೆಯಡಿ ಪ್ರಾಂತೀಯ ಸಮ್ಮೇಳನ ಪ್ರಾಂತ್ಯ 5 ಕಾರ್ಯಕ್ರಮ ನಗರದ ಕುವೆಂಪುನಗರದ ನ್ಯೂ ಕಾಂತರಾಜ ಅರಸ್ ರಸ್ತೆ ಸಮೀಪದ ಕನ್ನೇಗೌಡ ಕೊಪ್ಪಲಿನ ಶ್ರೀಬಂದಂತಮ್ಮ ಕಾಳಮ್ಮ ಸಮುದಾಯ ಭವನ ದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 8.30ರಿಂದ 9.30ರವರೆಗೆ ನೋಮದಣಿ ಮತ್ತು ಉಪಹಾರ, ಬೆಳಗ್ಗೆ 9.30ರಿಂದ 10.30ರ ವರೆಗೆ ಬ್ಯಾನರ್ ಪ್ರಸ್ತುತಿ, ಬೆಳಗ್ಗೆ 10.45ರಿಂದ ಮಧ್ಯಾಹ್ನ 1.30ರ ವರೆಗೆ ಪ್ರಾಂತೀಯ ಸಮ್ಮಿಲನ ಹಾಗೂ ಮಧ್ಯಾಹ್ನ 1.30ಕ್ಕೆ ಭೋಜನ ಕೂಟ ನಡೆಯಲಿದೆ.

ಕಾರ್ಯಕ್ರಮವನ್ನು ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಖ್ಯಾತ ಅಂಕಣಕಾರರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಗುಬ್ಬಿಗೂಡು ರಮೇಶ್ ಮುಖ್ಯ ಭಾಷಣ ಮಾಡಲಿದ್ದಾರೆ. ಪ್ರಾಂತೀಯ ಅಧ್ಯಕ್ಷ ಲಯನ್ ಜೆ.ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಹಾಗೂ ಲಯನ್ ಎನ್.ನಾಗೇಂದ್ರ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮೊದಲನೇ ಉಪ ಜಿಲ್ಲಾ ರಾಜ್ಯಪಾಲ ಲಯನ್ ಡಾ.ಪ್ರಭಾಮೂರ್ತಿ, ಎರಡನೇ ಉಪ ರಾಜ್ಯಪಾಲ ಲಯನ್ ಡಾ.ಶ್ರೀವಿದ್ಯಾ, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಎಂ.ಎನ್.ಶ್ರೀನಾಥ್, ಜಿಲ್ಲಾ ಸಂಪುಟ ಖಜಾಂಚಿ ಲಯನ್ ಎಂ.ಎನ್. ನಿತ್ಯಾನಂದ, ಲಯನ್‍ನ ವಲಯ ಅಧ್ಯಕ್ಷರಾದ ಲಯನ್ ಪ್ರತಿಮಾ ರಮೇಶ್, ಲಯನ್ ಆರ್.ರಜಿಕಾಂತ್, ಲಯನ್ ಎನ್.ರವಿಕುಮಾರ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳ ಲಿದ್ದಾರೆ. ಸಮ್ಮೇಳನದಲ್ಲಿ ಭಾರತದ ಮಾಜಿ ಉಪ ಮೇಯರ್ ಪಿ.ಶ್ರೀಧರ್, ಹಿರಿಯ ಅಂತಾರಾಷ್ಟ್ರೀಯ ಕ್ರೀಡಾಪಟು ವಿಜಯಾ ರಮೇಶ್, ಮೈಸೂರಿನ ವಿಶೇಷ ಶಿಕ್ಷಕ ಬಿ.ಕುಮಾರಸ್ವಾಮಿ, ಮೈಸೂರಿನ ಕೆ.ಜಿ.ಕೊಪ್ಪಲಿನ ಸಮಾಜ ಸೇವಕ ಚನ್ನೆಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ.ಗೋವಿಂದರಾಜು, ಪೌರ ಕಾರ್ಮಿಕರಾದ ರತ್ನಮ್ಮ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Translate »