ವಕೀಲರೊಬ್ಬರಿಗೆ ಪಿಎಸ್‍ಐ ನಿಂದಿಸಿದ ಆರೋಪ;  ಮೈಸೂರಲ್ಲಿ ವಕೀಲರ ದಿಢೀರ್ ಪ್ರತಿಭಟನೆ
ಮೈಸೂರು

ವಕೀಲರೊಬ್ಬರಿಗೆ ಪಿಎಸ್‍ಐ ನಿಂದಿಸಿದ ಆರೋಪ; ಮೈಸೂರಲ್ಲಿ ವಕೀಲರ ದಿಢೀರ್ ಪ್ರತಿಭಟನೆ

September 14, 2021

ಮೈಸೂರು,ಸೆ.13(ಪಿಎಂ)-ವಕೀಲರೊಬ್ಬ ರನ್ನು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ (ಪಿಎಸ್‍ಐ) ಒಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ದ್ದಾರೆ ಎಂದು ಆರೋಪಿಸಿ ಮೈಸೂರು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ದಿಢೀರ್ ಪ್ರತಿಭಟನೆ ನಡೆಸಿದರು.

ಮೈಸೂರಿನ ಜಿಲ್ಲಾ ನ್ಯಾಯಾಲಯದ ಎದುರಿನ ಗಾಂಧಿ ಪುತ್ತಳಿ ಬಳಿ ಜಮಾ ಯಿಸಿ ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿ ಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಕ್ಷಿದಾರರ ಕುರಿತು ಮಾತನಾಡಲು ನಮ್ಮ ವಕೀಲರೊಬ್ಬರು ಠಾಣೆಗೆ ತೆರಳಿ ದಾಗ ಸದರಿ ಪಿಎಸ್‍ಐ ಇರಲಿಲ್ಲ. ದೂರ ವಾಣಿ ಕರೆ ಮಾಡಿದಾಗ ಪಿಎಸ್‍ಐ ಏಕ ವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿ ಸಿದರು ಎಂದು ವಕೀಲರು ದೂರಿದರು.

ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಗೃಹಸಚಿವರಿಗೆ ದೂರು ನೀಡಲಾಗುವುದು. ಜೊತೆಗೆ ನ್ಯಾಯಾಲಯದಲ್ಲಿ ಖಾಸಗಿ ದೂರನ್ನೂ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರಾಜ್ಯ ವಕೀಲರ ಪರಿಷತ್ ಸದಸ್ಯ ಬಿ.ಆರ್.ಚಂದ್ರಮೌಳಿ, ಸಂಘದ ಕಾರ್ಯ ದರ್ಶಿ ಶಿವಣ್ಣ, ಉಪಾಧ್ಯಕ್ಷ ಶಿವಣ್ಣೇಗೌಡ, ಖಜಾಂಚಿ ಚಂದ್ರಶೇಖರ್, ಜಂಟಿ ಕಾರ್ಯ ದರ್ಶಿ ರುದ್ರಮೂರ್ತಿ ಸೇರಿದಂತೆ ವಕೀ ಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »