ಧಾರ್ಮಿಕ ಕಟ್ಟಡ ತೆರವು ವಿಷಯದಲ್ಲಿ ಬಿಜೆಪಿಯಲ್ಲೇ ಗೊಂದಲ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಪ್ರತಿಭಟನೆ
ಮೈಸೂರು

ಧಾರ್ಮಿಕ ಕಟ್ಟಡ ತೆರವು ವಿಷಯದಲ್ಲಿ ಬಿಜೆಪಿಯಲ್ಲೇ ಗೊಂದಲ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಪ್ರತಿಭಟನೆ

September 14, 2021

ಮೈಸೂರು, ಸೆ.13(ಎಸ್‍ಬಿಡಿ)- ಧಾರ್ಮಿಕ ಕಟ್ಟಡಗಳ ತೆರವುಗೊಳಿಸುವ ಬಗ್ಗೆ ಬಿಜೆಪಿ ಮುಖಂಡರು ಗೊಂದಲ ಸೃಷ್ಟಿಸುವ ಮೂಲಕ ಜನರ ಭಾವನೆಯೊಂದಿಗೆ ಚೆಲ್ಲಾಟವಾಡು ತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್ ಕುಮಾರ್ ನೇತೃತ್ವದಲ್ಲಿ ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ ದೇವಾಲಯದ ಬಳಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ನವೀನ್‍ಕುಮಾರ್ ಮಾತನಾಡಿ, ಮೈಸೂರಿನಲ್ಲಿ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರೆಸಲಾಗಿದೆ. 2011ರಲ್ಲಿ ಬಿಜೆಪಿ ಸರ್ಕಾರವೇ ದೇವಾ ಲಯಗಳ ತೆರವಿಗೆ ಪಟ್ಟಿ ಸಿದ್ಧಪಡಿಸಿತ್ತು. ಈಗಿನ ಸರ್ಕಾರ ದೇವಾಲಯಗಳನ್ನು ಕೆಡವಿ ಹಾಕುವ ಕಾರ್ಯಕ್ಕೆ ಮುಂದಾಗಿದೆ. ಆದರೆ ಇದರ ಹೊಣೆಗಾರಿಕೆಯನ್ನು ಅಧಿಕಾರಿ ಗಳ ಹೆಗಲಿಗೆ ಕಟ್ಟುವ ಪ್ರಯತ್ನ ನಡೆದಿದೆ. ಈ ವಿಚಾರವಾಗಿ ಬಿಜೆಪಿ ಮುಖಂಡರು ಗೊಂದಲದ ಹೇಳಿಕೆಗಳನ್ನು ನೀಡಿ, ಜನರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಹೇಳಿದರು.

ಹಿಂದೂ ಧರ್ಮದ ಹೆಸರೇಳಿಕೊಂಡು ಚುನಾವಣೆಗಳಲ್ಲಿ ಮತ ಪಡೆದುಕೊಂಡಿ ರುವ ಬಿಜೆಪಿ ನಾಯಕರು, ಇದೀಗ ದೇವಾ ಲಯಗಳನ್ನೇ ಒಡೆಯುವ ಕೆಲಸ ಮಾಡು ತ್ತಿದ್ದಾರೆ. ಆದರೆ ಇದರ ಹಣೆಪಟ್ಟಿಯನ್ನು ಅಧಿಕಾರಿಗಳಿಗೆ ಕಟ್ಟುತ್ತಿರುವುದು ಹಾಸ್ಯಾಸ್ಪದ. ಮತಕ್ಕಾಗಿ ಮಾತ್ರ ಧಾರ್ಮಿಕ ವಿಚಾರ ಗಳನ್ನು ಬಳಸಿಕೊಳ್ಳುತ್ತಾರೆಯೇ ಹೊರತು, ಅದರ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ರಾಜ ಕೀಯ ಪ್ರೇರಿತ ಹಾಗೂ ಬಾಲಿಶ ಹೇಳಿಕೆ ಗಳ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುವ ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಸ್ತುತ ಬಿಜೆಪಿಯವರ ಮುಖವಾಡ ಬಯ ಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಯಾವುದೇ ರೀತಿ ತೊಂದರೆ ಯಾಗದ ದೇವಾಲಯ, ಮಸೀದಿ, ಚರ್ಚ್, ಗುರುದ್ವಾರ ಇನ್ನಿತರ ಯಾವುದೇ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬಾರದು. ಇದ ರಿಂದ ಇದನ್ನೇ ನಂಬಿ ಬದುಕುತ್ತಿರುವ ಧಾರ್ಮಿಕ ಸೇವಕರ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ಮನವಿ ಮಾಡಿದರು. ಮುಖಂಡರಾದ ಎಂ.ರಾಜೇಶ್, ಬಸವಣ್ಣ, ಪೈಲ್ವಾನ್ ಸುನಿಲ್, ಮೊಹಮ್ಮದ್ ಅಜರ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »