ಪಿಎಸ್‌ಐ ನೇಮಕಾತಿ ಹಗರಣ: ಕಲಬುರಗಿಯಲ್ಲಿ ಮತ್ತೊಬ್ಬನ ಬಂಧನ
ಮೈಸೂರು

ಪಿಎಸ್‌ಐ ನೇಮಕಾತಿ ಹಗರಣ: ಕಲಬುರಗಿಯಲ್ಲಿ ಮತ್ತೊಬ್ಬನ ಬಂಧನ

April 27, 2022

ಕಲಬುರಗಿ,ಏ.೨೬-ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಕಲಬುರಗಿಯಲ್ಲಿ ಮತ್ತೊಬ್ಬ ಆರೋಪಿ ಬಂಧಿಸಿದ್ದಾರೆ. ಈತ ಎಲೆಕ್ಟಾçನಿಕ್ ಉಪಕರಣ ಬಳಕೆ ಮಾಡಿಕೊಂಡು ಪರೀಕ್ಷೆ ಬರೆದಿದ್ದಾನೆ ಎಂದು ಶಂಕಿಸಲಾಗಿದೆ.

ಕಲಬುರಗಿಯ ನಿವಾಸಿ ಎಸ್.ವಿ. ಸುನೀಲಕುಮಾರ್ ಬಂಧಿತ ಆರೋಪಿ. ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿಯೇ ಈತ ಪರೀಕ್ಷೆ ಬರೆದಿದ್ದ. ಕಲಬುರಗಿಯಲ್ಲಿರುವ ಸಿಐಡಿ ತಂಡ ಆರೋಪಿ ಬಂಧಿಸಿ, ವಿಚಾರಣೆ ನಡೆಸುತ್ತಿದೆ.

ಹಗರಣಕ್ಕೆ ಸಂಬAಧಿಸಿದAತೆ ಈಗಾಗಲೇ ರುದ್ರಗೌಡ ಡಿ. ಪಾಟೀಲ ಬಂಧಿಸಲಾಗಿದೆ. ಈತನ ವಿಚಾರಣೆ ವೇಳೆ ಸಿಕ್ಕ ಮಾಹಿತಿ ಯಂತೆ ಸುನೀಲಕುಮಾರ್ ಬಂಧಿಸಲಾಗಿದೆ. ಎಲೆಕ್ಟಾçನಿಕ್ ಉಪಕರಣ ಬಳಕೆ ಮಾಡಿಕೊಂಡು ಪರೀಕ್ಷೆ ಬರೆದಿದ್ದಾನೆ ಎಂಬ ಆರೋಪದ ಹಿನ್ನಲೆ ವಿಚಾರಣೆ ನಡೆಸಲಾಗುತ್ತಿದೆ. ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಸುನೀಲ್‌ಕುಮಾರ್‌ಗೆ ಸಿಐಡಿ ನೋಟಿಸ್ ನೀಡಿತ್ತು. ಸೋಮವಾರ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಸುನೀಲ್ ವಿಚಾರಣೆ ಎದುರಿಸಿದ್ದರು. ವಿಚಾರಣೆ ವೇಳೆ ಸಂದೇಹ ಬಂದ ಕಾರಣ ಪೊಲೀಸರು ಬಂಧಿಸಿದ್ದಾರೆ. ಸುನೀಲಕುಮಾರ್ ಅಕ್ರಮವಾಗಿ ಪರೀಕ್ಷೆ ಬರೆಯಲು ೪೦ ಲಕ್ಷ ರೂ. ಹಣ ನೀಡಿದ್ದಾರೆ ಎಂದು ಶಂಕಿಸಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »