ಎಂಎಸ್‌ಪಿ ದರದಲ್ಲಿ ಭತ್ತ, ರಾಗಿ, ಜೋಳ ಸೇರಿದಂತೆ ಇನ್ನಿತರ ಧಾನ್ಯ ಖರೀದಿಗೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ
ಮೈಸೂರು

ಎಂಎಸ್‌ಪಿ ದರದಲ್ಲಿ ಭತ್ತ, ರಾಗಿ, ಜೋಳ ಸೇರಿದಂತೆ ಇನ್ನಿತರ ಧಾನ್ಯ ಖರೀದಿಗೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

April 27, 2022

ಮೈಸೂರು,ಏ.೨೬(ಪಿಎಂ)-ಭತ್ತ, ರಾಗಿ ಮತ್ತು ಜೋಳ ಸೇರಿದಂತೆ ಇನ್ನಿತರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯಡಿ (ಎಂಎಸ್‌ಪಿ) ಯಾವುದೇ ಮಿತಿ ಇಲ್ಲದೇ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಖರೀದಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಭತ್ತ, ರಾಗಿ, ಜೋಳ, ಮುಸುಕಿನ ಜೋಳ ಮೊದಲಾದ ಧಾನ್ಯಗಳನ್ನು ಎಂಎಸ್‌ಪಿ ಬೆಲೆಗಿಂತಲೂ ಕಡಿಮೆ ದರಕ್ಕೆ ರೈತರಿಂದ ಖರೀದಿಸಿ ಲೂಟಿ ಮಾಡಲಾಗುತ್ತಿದೆ. ಅಲ್ಲದೆ, ಸರ್ಕಾರ ಖರೀದಿ ಕೇಂದ್ರಗಳ ಮೂಲಕ ರಾಗಿ ಮತ್ತು ಭತ್ತವನ್ನು ಸಂಪೂರ್ಣವಾಗಿ ಖರೀದಿಸದೇ ಎಂಎಸ್‌ಪಿಗೆ ಅರ್ಥ ವಿಲ್ಲದಂತೆ ಮಾಡಿದೆ ಎಂದು ಆರೋಪಿಸಿದರು.

ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ: ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸದ ಕಾರಣ ಬೇಸಿಗೆ ಬಿಸಿಲಿಗೆ ಬೆಳೆಗಳು ಒಣಗುತ್ತಿದ್ದು, ರೈತರಿಗೆ ಇದರಿಂದ ನಷ್ಟವಾಗುತ್ತಿದೆ. ತಾರತಮ್ಯ ವಿದ್ಯುತ್ ನೀತಿ ವಿರೋಧಿಸಿ ವಿದ್ಯುತ್ ಬಿಲ್ ಪಾವತಿಸದೆ ಕರ ನಿರಾಕರಿಸಿದ ಚಳುವಳಿ ಗಾರರ ಮನೆಯ ಬಾಕಿ ಇರುವ ವಿದ್ಯುತ್ ಬಿಲ್ಲನ್ನು ಸಂಪೂರ್ಣ ಮನ್ನಾ ಮಾಡುವಂತೆ ಒತ್ತಾಯಿಸಿದ್ದ ಹಿನ್ನೆಲೆ ಯಲ್ಲಿ ೨೦೧೮ರಲ್ಲಿ ಅಂದಿನ ಸರ್ಕಾರ ಹಳೇ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಿತ್ತು. ಆದರೆ ಈಗಿನ ಸರ್ಕಾರ ಹಳೇ ಬಾಕಿಯನ್ನೂ ಪಾವತಿಸುವಂತೆ ಒತ್ತಡಹೇರುವ ಮೂಲಕ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯ ವಿದ್ಯುತ್ ಸಂಪರ್ಕ ಕಡಿತ ಮಾಡುವ ಕ್ರಮ ಕೈಬಿಡಬೇಕು. ಅಲ್ಲದೆ, ಈ ಕುಟುಂಬದವರಿಗೆ ವಿಧಿಸಿರುವ ವಿದ್ಯುತ್ ಬಿಲ್ಲನ್ನು ಸಂಪೂರ್ಣ ಮನ್ನಾ ಮಾಡಬೇಕು. ಜೊತೆಗೆ ವಿದ್ಯುತ್ ಬಳಕೆಯ ಯೂನಿಟ್ ಅನ್ನು ಹೆಚ್ಚಳ ಮಾಡಿ, ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಮುಂದು ವರೆಸಬೇಕು ಎಂದು ಆಗ್ರಹಿಸಿದರು.
ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸ ಬೇಕು. ಟ್ರಾö್ಯಕ್ಟರ್ ಹಾಗೂ ಇನ್ನಿತರ ಕೃಷಿ ಉಪಕರಣಗಳ ಗರಿಷ್ಠ ಮಾರುಕಟ್ಟೆ ಧಾರಣೆ (ಎಂಆರ್‌ಪಿ) ಅನ್ನು ಆಯಾಯ ಕಂಪನಿಗಳ ಅಧೀಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು. ಅಲ್ಲದೆ, ರಾಜ್ಯ ಸರ್ಕಾರ ಇದರ ಮೇಲೆ ಸಂಪೂರ್ಣ ಹಿಡಿತ ಸಾಧಿಸಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೊಳಿಸಬೇಕು. ರೈತರ ಜಮೀನು ಖಾತೆಯ ಪೋಡಿ ಮತ್ತು ಹದ್ದುಬಸ್ತು ಮಾಡಲು ಶುಲ್ಕವನ್ನು ಅಧಿಕ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಇದನ್ನು ಇಳಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಭಾಗದಲ್ಲಿ ಮನೆಯ ಅಥವಾ ಖಾಲಿ ನಿವೇಶನದ ಇ-ಸ್ವತ್ತು ಪಡೆಯಲು ಅಧಿಕ ಪ್ರಮಾಣದ ತೆರಿಗೆ ಪಾವತಿಗೆ ಒತ್ತಡ ಹೇರುವುದನ್ನು ಕೈಬಿಡಬೇಕು. ರೈತ ಚಳುವಳಿಗಾರರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುತ್ತಿದ್ದು, ಇದನ್ನು ಕೈಬಿಟ್ಟು ಈಗಿರುವ ಮೊಕ ದ್ದಮೆಗಳನ್ನು ಹಿಂಪಡೆಯಬೇಕು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೂ ವಿಸ್ತರಿಸಬೇಕು. ಸಮರ್ಪಕವಾಗಿ ಬಿತ್ತನೆ ಬೀಜ ಪೂರೈಸ ಬೇಕು. ನಿಗದಿತ ಕೋಟಾಕ್ಕಿಂತ ಕಡಿಮೆ ತಂಬಾಕು ಮಾರಾಟ ಮಾಡಿದ ಬೆಳಗಾರರಿಗೆ ಪರವಾನಗಿ ನವೀ ಕರಣ ವೇಳೆ ವಿಧಿಸುತ್ತಿರುವ ದಂಡದ ಕ್ರಮ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಸಗೊಬ್ಬರದ ಬೆಲೆ ಏರಿಕೆ ಇಳಿಸಬೇಕು. ದರಖಾಸ್ತು ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಿ, ಮಂಜೂ ರಾದ ಭೂಮಿಯನ್ನು ದುರಸ್ತಿಪಡಿಸಬೇಕು. ಹುಣಸೂರು ತಾಲೂಕಿನ ಉದ್ದೂರು ಕಾವಲ್ ಸೊಸೈಟಿಯ ಜಮೀನು ಹೊಂದಿರುವ ಸಂಬAಧ ಉಳಿದ ರೈತರಿಗೂ ಸಾಗುವಳಿ ಪತ್ರ ನೀಡಲು ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಸಂಘದ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ ಮಾತನಾಡಿ, ಖರೀದಿ ಕೇಂದ್ರದಲ್ಲಿ ಖರೀದಿಸುವ ಬೆಳೆ ಗಳಿಗೆ ಮಾತ್ರ ಎಂಎಸ್‌ಪಿ ಅನ್ವಯ ಮಾಡುತ್ತಿದ್ದು, ಉಳಿದ ಬೆಳೆಗಳಿಗೆ ಮಾಡುತ್ತಿಲ್ಲ. ಇದು ಸರಿಯಲ್ಲ. ಎಲ್ಲದಕ್ಕೂ ಎಂಎಸ್‌ಪಿ ಅನ್ವಯ ಮಾಡಬೇಕು. ಜೊತೆಗೆ ಖರೀದಿ ಕೇಂದ್ರಗಳಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಮಾತ್ರ ಖರೀದಿ ಸುವ ಮಿತಿಯನ್ನು ಕೈಬಿಡಬೇಕು. ಅಲ್ಲದೆ, ಎಲ್ಲಾ ಬೆಳೆಗಳನ್ನು ಎಂಎಸ್‌ಪಿ ಬೆಲೆಯಲ್ಲಿ ಸರ್ಕಾರ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾ ಮಹಿಳಾ ಅಧ್ಯಕ್ಷೆ ನೇತ್ರಾವತಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸರಗೂರು ನಟರಾಜ್, ಮುಖಂಡರಾದ ಮರಂಕಯ್ಯ, ಮಂಡಕಳ್ಳಿ ಮಹೇಶ್, ದಸಂಸದ ಮುಖಂಡ ರಾದ ಚೋರನಹಳ್ಳಿ ಶಿವಣ್ಣ, ಕಲ್ಲಹಳ್ಳಿ ಕುಮಾರ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »