ಉಕ್ರೇನ್ ವಿರುದ್ಧ ಯುದ್ಧ ರಷ್ಯಾದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ೪ ಪಟ್ಟು ಹೆಚ್ಚಳ
ಮೈಸೂರು

ಉಕ್ರೇನ್ ವಿರುದ್ಧ ಯುದ್ಧ ರಷ್ಯಾದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ೪ ಪಟ್ಟು ಹೆಚ್ಚಳ

April 27, 2022

ಸ್ಟಾನ್‌ಬುಲ್,ಏ.೨೬-ಉಕ್ರೇನ್ ವಿರುದ್ಧ ಯುದ್ದದ ಕಾರಣ ದಿಂದಾಗಿ ರಷ್ಯಾದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ತೀವ್ರ ರೀತಿಯ ಹೆಚ್ಚಳ ವಾಗಿದೆ. ೨೦೧೯ರಿಂದ ಒಂದಲ್ಲಾ ಒಂದು ಕಾರಣದಿಂದಾಗಿ ಅಡುಗೆ ಅನಿಲ ದರದಲ್ಲಿ ಏರಿಕೆಯಾಗುತ್ತಲೇ ಇದೆ.

ಏಪ್ರಿಲ್ ಆರಂಭದಲ್ಲಿ ಸುಮಾರು ನಾಲ್ಕು ಪಟ್ಟು ದರ ಹೆಚ್ಚಳ ದಿಂದ ಹೋಟೆಲ್, ರೆಸ್ಟೋರೆಂಟ್‌ಗಳು ಮಾಲೀಕರು ಹಾಗೂ ಗ್ರಾಹಕರು ತೀವ್ರ ತೊಂದರೆ ಅನುಭವಿಸು ವಂತಾಗಿದೆ. ಹೋಟೆಲ್‌ಗೆ ಬರುವ ಗ್ರಾಹಕರು, ಮೆನು ದರ ನೋಡಿ ಹೊರ ಹೋಗುತ್ತಿದ್ದಾರೆ. `ನಾವು ಬೆಸತ್ತಿದ್ದೀವಿ. ಸ್ವಲ್ಪ ಕಾಯ್ದು ನೋಡೋಣ, ಮಾರುಕಟ್ಟೆ ಸುಧಾರಿಸಬಹುದು, ದರಗಳು ಸ್ಥಿರ ವಾಗಬಹುದು ಎಂದು ನಾವು ಹೇಳಿದ್ದೆವು. ಆದರೆ, ಯಾವುದ ರಲ್ಲೂ ಸುಧಾರಣೆಯಾಗಿಲ್ಲ ಎಂದು ರೆಸ್ಟೋರೆಂಟ್‌ವೊAದರ ಅಡುಗೆ ಸಿಬ್ಬಂದಿ ಮಹ್ಸುನ್ ಅಕ್ತಾಸ್ ಹೇಳುತ್ತಾರೆ.

ವಿಶ್ವದ ಬಹುತೇಕ ರಾಷ್ಟçಗಳಿಗೆ ಅಂದರೆ ಶೇ.೨೫ರಷ್ಟು ರಷ್ಯಾದಿಂದಲೇ ಸನ್ ಪ್ಲವರ್ ಅಡುಗೆ ಅನಿಲ ಪೂರೈಕೆಯಾಗು ತ್ತಿತ್ತು. ಆದರೆ, ಯುದ್ಧದಿಂದಾಗಿ ಅಡುಗೆ ಅನಿಲ ಸಾಗಾಟದಲ್ಲಿ ಅಡ್ಡಿಯುಂಟಾಗಿದೆ. ರಷ್ಯಾದ ಯುದ್ಧದಿಂದಾಗಿ ಜಾಗತಿಕ ಆಹಾರ ಪೂರೈಕೆಯಲ್ಲಿ ತೊಡಕು ಉಂಟಾಗಿದೆ. ಹಣದುಬ್ಬರ ಹೆಚ್ಚಾಗು ತ್ತಿದ್ದು, ಮನೆಗೆ ದಿನನಿತ್ಯದ ವಸ್ತುಗಳ ಬೆಲೆಗಳಲ್ಲಿಯೂ ಹೆಚ್ಚಾಗು ತ್ತಿದೆ. ಇದು ಬಡ ಜನರ ಜೀವನದ ಮೇಲೆ ಬರೆ ಎಳೆದಿದೆ.

ವಿಶ್ವ ಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ, ಫೆಬ್ರ ವರಿಯಲ್ಲಿ ವೆಜಿಟೇಬಲ್ ಆಯಿಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿತ್ತು. ನಂತರ ಮಾರ್ಚ್ನಲ್ಲಿ ಇದು ಶೇ.೨೩ರಷ್ಟು ಹೆಚ್ಚಳ ವಾಯಿತು. ೨೦೧೯ರಲ್ಲಿ ಸೋಯಾಬಿನ್ ಆಯಿಲ್ ಪ್ರತಿ ಮೆಟ್ರಿಕ್ ಟನ್ ೭೬೫ ಡಾಲರ್‌ನಂತೆ ಮಾರಾಟವಾಗಿತ್ತು. ಇದು ಮಾರ್ಚ್ನಲ್ಲಿ ಪ್ರತಿ ಮೆಟ್ರಿಕ್ ಟನ್ ಸರಾಸರಿ ೧,೯೫೭ ಡಾಲರ್‌ನಷ್ಟಿತ್ತು ಎಂದು ವಿಶ್ವ ಬ್ಯಾಂಕ್ ಹೇಳಿದೆ. ಪಾಮ್ ಆಯಿಲ್ ಬೆಲೆಗಳು ಶೇ.೨೦೦ ರಷ್ಟು ಹೆಚ್ಚಾಗಿದೆ ಮತ್ತು ವಿಶ್ವದ ಅಗ್ರ ಉತ್ಪಾದಕರಲ್ಲಿ ಒಂದಾದ ಇಂಡೋ ನೇಷ್ಯಾವು ಗುರುವಾರದಿಂದ ಅಡುಗೆ ಅನಿಲ ರಫ್ತನ್ನು ನಿರ್ಬಂ ಧಿಸಿದ ನಂತರ ಇದರ ದರದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

 

Translate »