ಬೆಂಬಲ ಬೆಲೆಯಡಿ ರಾಗಿ ಖರೀದಿ
ಮೈಸೂರು

ಬೆಂಬಲ ಬೆಲೆಯಡಿ ರಾಗಿ ಖರೀದಿ

April 27, 2022

ಜಿಲ್ಲೆಯಲ್ಲಿ ೯ ಕೇಂದ್ರ ಕಾರ್ಯಾರಂಭ; ಕ್ವಿಂಟಾಲ್‌ಗೆ ೩,೩೭೭ ರೂ. ದರ ನಿಗದಿ
ಈ ಹಿಂದೆ ಮಾರಾಟ ಮಾಡಿದವರ ಹೊರತುಪಡಿಸಿ ಉಳಿದ ರೈತರಿಗೆ ಅವಕಾಶ
ರಾಜ್ಯದಲ್ಲಿ ೧.೧೪ ಲಕ್ಷ ಮೆಟ್ರಿಕ್ ಲಕ್ಷ ಟನ್ ರಾಗಿ ಖರೀದಿ ಪ್ರಮಾಣ ನಿಗದಿ

ಮೈಸೂರು, ಏ.೨೬(ಎಸ್‌ಬಿಡಿ)- ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ನೋಂದಣ ಆರಂಭವಾಗಿದೆ. ರೈತರ ಬೇಡಿಕೆಯಿಂ ದಾಗಿ ರಾಜ್ಯಾದ್ಯಂತ ರಾಗಿ ಖರೀದಿ ಮುಂದುವರೆಸಲಾಗಿದ್ದು, ಮೈಸೂರು ತಾಲೂಕು ಬಂಡಿಪಾಳ್ಯ ಎಪಿಎಂಸಿ ಆವರಣ, ತಿ.ನರಸೀ ಪುರ ತಾಲೂಕು ಬನ್ನೂರು ಎಪಿಎಂಸಿ, ಹುಣ ಸೂರು ಎಪಿಎಂಸಿ, ಕೆ.ಆರ್.ನಗರ ಎಪಿಎಂಸಿ, ಚುಂಚನಕಟ್ಟೆ ಪ್ರವಾಸಿ ಮಂದಿರ, ಸಾಲಿ ಗ್ರಾಮ ಎಪಿಎಂಸಿ, ಹೆಚ್.ಡಿ.ಕೋಟೆ ತಾಲೂಕು ಸರಗೂರು ಎಪಿಎಂಸಿ, ಪಿರಿಯಾ ಪಟ್ಟಣ ಹಾಗೂ ಬೆಟ್ಟದಪುರ ಎಪಿಎಂಸಿ ಆವರಣ ಸೇರಿ ಜಿಲ್ಲೆಯಲ್ಲಿ ಒಟ್ಟು ೯ ಖರೀದಿ ಕೇಂದ್ರ ತೆರೆಯಲಾಗಿದೆ. ಈಗಾಗಲೇ ೨೦೨೧-೨೨ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿರುವ ರೈತರನ್ನು ಹೊರತುಪಡಿಸಿ ಇನ್ನುಳಿದ ರೈತರಿಂದ ಮಾತ್ರ ರಾಗಿ ಖರೀದಿಸಲಾಗುವುದು.

ಎಕರೆಗೆ ಕನಿಷ್ಟ ೧೦ ಹಾಗೂ ಗರಿಷ್ಟ ೨೦ ಕ್ವಿಂಟಾಲ್ ರಾಗಿಯನ್ನು ಕ್ವಿಂಟಾಲ್‌ಗೆ ೩,೩೭೭ ರೂ. ಕನಿಷ್ಟ ಬೆಂಬಲ ಬೆಲೆಗೆ ಖರೀದಲಾಗುತ್ತದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಮೈಸೂರು ವಿಭಾದ ಮೂಲಕ ರಾಗಿ ಖರೀದಿಗೆ ಆದೇಶಿಸಲಾಗಿದ್ದು, ಮೊನ್ನೆ(ಏ.೨೪)ಯಿಂದಲೇ ರೈತರ ನೋಂದಣ ಆರಂಭಿಸಲಾಗಿದೆ.

ರಾಗಿ ಖರೀದಿ ಗುರಿ ಸಾಧನೆವರೆಗೆ ಮಾತ್ರ ಕೇಂದ್ರಗಳು ಕಾರ್ಯಾಚರಣೆ ಮಾಡಲಿವೆ. ಕೃಷಿ ಇಲಾಖೆಯಿಂದ ರೈತರ ನೋಂದಣ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯಡಿ ನೀಡಿರುವ `ಪ್ರೂಟ್ಸ್’ ಐಡಿಯನ್ನು ಖರೀದಿ ಕೇಂದ್ರಗಳಲ್ಲಿ ಹಾಜರುಪಡಿಸಿ, ಹೆಸರು ನೋಂದಾಯಿಸಿಕೊಳ್ಳಬೇಕು. ಬಳಿಕ ಖರೀದಿ ಕೇಂದ್ರ ನಿಗಧಿಪಡಿಸಿದ ದಿನಾಂಕ ದಂದು ಸ್ವಂತ ಖರ್ಚಿನಲ್ಲಿ ರಾಗಿ ಸರಬರಾಜು ಮಾಡಬೇಕು. ಗುಣಮಟ್ಟ ಪರಿವೀಕ್ಷಕರು ಪರಿಶೀಲಿಸಿ ದೃಢೀಕರಿಸಿದ ನಂತರವೇ ಖರೀದಿಸಲಾಗುತ್ತದೆ. ರಾಗಿ ಮಾರಾಟ ವೇಳೆ ರೈತರು ಯಾವುದೇ ಮಧ್ಯವರ್ತಿ ಅಥವಾ ಏಜೆಂಟ್‌ಗಳನ್ನು ಬೆಂಬಲಿಸಬಾರದು. ರಾಗಿ ಖರೀದಿ ಬಳಿಕ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು ಎಂದು ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಅಧ್ಯಕ್ಷರೂ ಆದ ಡಿಸಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ. ಕಳೆದ ಮುಂಗಾರು ಋತುವಿನಲ್ಲಿ ರಾಜ್ಯದಲ್ಲಿ ನಿರೀಕ್ಷೆಗಿಂತ ಹೆಚ್ಚು ರಾಗಿ ಉತ್ಪಾದನೆಯಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಯನ್ನು ಮುಂದುವರೆಸುವAತೆ ಸರ್ಕಾರದ ಮುಂದೆ ಬೇಡಿಕೆಯನ್ನಿಟ್ಟಿದ್ದರು. ರೈತರ ಒತ್ತಾಯಕ್ಕೆ ಮಣ ದ ಸರ್ಕಾರ ರಾಗಿ ಖರೀದಿ ಮುಂದುವರೆಸಲು ಆದೇಶಿಸಿದೆ. ಈಗಾಗಲೇ ೨೦೨೧-೨೨ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿರುವ ರೈತರನ್ನು ಹೊರತುಪಡಿಸಿ ಇನ್ನುಳಿದ ಬೆಳೆಗಾರದಿಂದ ಒಟ್ಟು ೧.೧೪ ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಕ್ವಿಂಟಾಲ್‌ಗೆ ೩,೩೭೭ ರೂ. ದರದಲ್ಲಿ ಖರೀದಿಸಲು ಸೂಚಿಸಿದೆ.

Translate »