ಪಿಎಸ್‌ಐ ಹಗರಣ: ಡಿವೈಎಸ್ಪಿ ಮನೆಯಲ್ಲಿ ಸಿಕ್ಕಿದೆ ಮಹತ್ವದ ಸಿಡಿ
ಮೈಸೂರು

ಪಿಎಸ್‌ಐ ಹಗರಣ: ಡಿವೈಎಸ್ಪಿ ಮನೆಯಲ್ಲಿ ಸಿಕ್ಕಿದೆ ಮಹತ್ವದ ಸಿಡಿ

May 16, 2022

ಬೆಂಗಳೂರು, ಮೇ ೧೫-ಪಿಎಸ್‌ಐ ಅಕ್ರಮ ನೇಮಕಾತಿಯ ಕಿಂಗ್‌ಪಿನ್ ಡಿವೈಎಸ್ಪಿ ಶಾಂತಕುಮಾರ್ ಮನೆಯನ್ನು ಸಿಐಡಿ ಅಧಿಕಾರಿಗಳು ಜಾಲಾಡಿದ್ದು, ಆಡುಗೋಡಿ ಯಲ್ಲಿರುವ ಮನೆಯಲ್ಲಿ ಒನ್ ಟೈಂ ಲಾಕ್ ಹಾಗೂ ಸಿಡಿ ಪತ್ತೆಯಾಗಿದೆ. ಶಾಂತ ಕುಮಾರ್ ಮನೆಯಲ್ಲಿ ಸಿಕ್ಕ ಈ ವಸ್ತುಗಳು ನೇಮಕಾತಿ ಹಗರಣದ ವಿಚಾರವನ್ನು ಬಹಿರಂಗಪಡಿಸುತ್ತಿದೆ. ಮೇ ೧೪ರಂದು ಶಾಂತಕುಮಾರನ ಆಡುಗೋಡಿ ಮನೆಯನ್ನು ಪರಿಶೀಲಿಸಿದ ಸಿಐಡಿ ಅಧಿಕಾರಿಗಳಿಗೆ ೫ ಒನ್ ಟೈಂ ಲಾಕ್ ಕೇಬಲ್‌ಗಳು ದೊರೆತಿವೆ. ಈ ಒನ್ ಟೈಮ್ ಲಾಕ್ ಪಿಎಸ್‌ಐ ಎಕ್ಸಾಂ ಬರೆದ ಅಭ್ಯರ್ಥಿಗಳ ಓಎಂಆರ್ ಶೀಟ್ ಇಡುವ ಟ್ರಂಕ್‌ಗೆ ಅಳವಡಿಸಲಾಗಿರುತ್ತದೆ. ಈ ಒನ್ ಟೈಮ್ ಲಾಕ್ ಬೇರೆ ಯಾರೂ ತೆಗೆದುಕೊಂಡು ಬಳಸುವಂತಿಲ್ಲ. ಆದರೆ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತ ಕುಮಾರ್ ಓಎಂಆರ್ ಇರೋ ಟ್ರಂಕ್‌ನ ಒನ್ ಟೈಂ ಲಾಕ್ಅನ್ನು ಬ್ರೇಕ್ ಮಾಡಿದ್ದ. ನಂತರ ಪಿಎಸ್‌ಐ ಹುದ್ದೆಗೆ ಸೆಲೆಕ್ಟ್ ಮಾಡಿಸಬೇಕಾದ ಅಭ್ಯರ್ಥಿಗಳ ಓಎಂಆರ್ ಶೀಟ್ ತಿದ್ದಿ ಮತ್ತೆ ಅದೇ ಟ್ರಂಕ್‌ನಲ್ಲಿ ಓಎಂಆರ್ ಶೀಟ್ ಇಟ್ಟು ಒನ್ ಟೈಂ ಲಾಕ್ ಮತ್ತೆ ಹಾಕುವ ಕೆಲಸವನ್ನು ಮಾಡಲಾಗಿತ್ತು ಎಂಬ ವಿಚಾರ ಸಿಐಡಿ ಅಧಿಕಾರಿಳಿಗಳಿಗೆ ತಿಳಿದು ಬಂದಿದೆ. ಇನ್ನು ಒನ್ ಟೈಮ್ ಲಾಕ್ ಅನ್ನು ಯಾವ ರೀತಿಯಲ್ಲಿ ಬಳಸಲಾಗುತ್ತಿತ್ತು. ಯಾವ ಪರೀಕ್ಷೆಗಲ್ಲಿನ ಹಗರಣಗಳಿಗೆ ಬಳಸ ಲಾಗುತ್ತಿದೆ? ಎಂಬದುದರ ಬಗ್ಗೆ ಸಿಐಡಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

ನೂರಾರು ಸಿಡಿಗಳು; ಡಿವೈಎಸ್ಪಿ ಶಾಂತಕುಮಾರ್ ಮನೆಯಲ್ಲಿ ನೂರಾರು ಸಿಡಿಗಳು ಕೂಡ ಲಭ್ಯವಾಗಿದೆ. ಆ ಸಿಡಿಯಲ್ಲಿ ೨೦೦೯ ಬ್ಯಾಚ್‌ನಿಂದ ಹಿಡಿದು ಇಲ್ಲಿಯವರೆಗೆ ಕರೆದ ಎಲ್ಲಾ ಬ್ಯಾಚ್‌ನ ಡೀಲಿಂಗ್ ಪಿಎಸ್‌ಐ ಕ್ಯಾಂಡಿಡೇಟ್‌ಗಳ ರೋಲ್ ನಂಬರ್‌ಗಳು ಆ ಸಿಡಿಯಲ್ಲಿವೆಯಂತೆ. ಈಗಾಗಲೇ ಆ ಸಿಡಿಗಳನ್ನ ವಶಕ್ಕೆ ಪಡೆದು ಸಿಐಡಿ ಟೀಂ ಎಲ್ಲಾ ಸ್ಟೋರೇಜ್‌ಗಳನ್ನ ಹಾರ್ಡ್ ಡಿಸ್ಕ್ಗೆ ಪಡೆದು ಹಿಂದೆ ಆಯ್ಕೆಯಾದ ಅಭ್ಯರ್ಥಿಗಳ ಬುಡವನ್ನು ಅಲುಗಾಡಿಸುವಂತಹ ಕೆಲಸವನ್ನು ಮಾಡಲಿದ್ದಾರಂತೆ. ಇನ್ನುಳಿದಂತೆ ಶಾಂತಕುಮಾರ್‌ನ ರೈಟ್ ಹ್ಯಾಂಡ್ ಅಂತಾನೇ ಕರೆಸಿಕೊಂಡಿರುವ ಸಿಎಆರ್ ಮುಖ್ಯ ಪೇದೆ ಶ್ರೀಧರನ ಮನೆಯಲ್ಲೂ ೧೬ ಲಕ್ಷದಷ್ಟು ಹಣ ಸಿಕ್ಕಿದ್ದು ಹೆಚ್ಚಿನ ವಿಚಾರಣೆಯನ್ನು ಸಿಐಡಿ ಮಾಡುತ್ತಿದೆ.

ಡಿವೈಎಸ್ಪಿ ಮನೆಯಲ್ಲಿ ಸಿಕ್ಕಿರುವ ಸಿಡಿಯಿಂದಾಗಿ ಈಗಾಲೇ ಅಕ್ರಮವನ್ನು ಎಸಗಿ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಪಡೆದಿರುವ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ತಮ್ಮ ಬ್ಯಾಚ್‌ನಲ್ಲಿ ನಡೆದ ಅಕ್ರಮಗಳು ಎಲ್ಲಿ ಹೊರ ಬೀಳಲಿವೆಯೇ. ಅಕ್ರಮ ಎಲ್ಲಿ ಬಯಲಾಗಲಿದೆಯೋ?. ಸಿಐಡಿ ತನಿಖೆಗೆ ಕರೆಯಬಹುದಾ ಎಂಬ ಆತಂಕದಲ್ಲಿ ಹಲವಾರು ಜನರು ಇದ್ದಾರೆ ಎನ್ನುತ್ತಿದ್ದಾರೆ ಸಿಐಡಿ ಅಧಿಕಾರಿಗಳು. ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ತನಿಖೆ ಬಗೆದಷ್ಟು ಆಳಕ್ಕೆ ಹೋಗುತ್ತಿದ್ದು. ಈಗ ಸಿಕ್ಕಿ ಬಿದ್ದಿರುವ ತಂಡವೇ ಹಲವು ಪರೀಕ್ಷೆಗಳಲ್ಲಿ ಅಕ್ರಮ ಎಸಗಿರೋದು ಗೊತ್ತಾಗುತ್ತಿದೆ. ಇನ್ನು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳಿಗೆ ನಡುಕ ಹುಟ್ಟಿರುವುದಂತೂ ಸುಳ್ಳಲ್ಲ.

Translate »