ಇಂದಿನಿಂದ ಶಾಲೆಗಳು ಆರಂಭ
ಮೈಸೂರು

ಇಂದಿನಿಂದ ಶಾಲೆಗಳು ಆರಂಭ

May 16, 2022

ಮೈಸೂರು, ಮೇ ೧೫ (ಎಂಟಿವೈ)-ನಾಳೆ (ಮೇ ೧೬)ಯಿಂದ ಮೈಸೂರು ಸೇರಿದಂತೆ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಲಿದ್ದು, ಮೈಸೂರು ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ೨ ವರ್ಷದಿಂದ ಶೈಕ್ಷಣ ಕ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ನಡೆಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ೪ನೇ ಅಲೆಯ ಭೀತಿಯ ನಡುವೆಯೂ ರಾಜ್ಯಾದ್ಯಂತ ಮೇ ೧೬ರಿಂದ ೧ರಿಂದ ೧೦ನೇ ತರಗತಿಯ ಶಾಲೆಗಳು ಪುನ ರಾರಂಭವಾಗುತ್ತಿದ್ದು, ಶೈಕ್ಷ ಣ ಕ ಚಟುವಟಿಕೆ ಗರಿ ಗೆದರಲಿದೆ. ಅದಕ್ಕಾಗಿ ಸಕಲ ಸಿದ್ಧತೆಯನ್ನು ಮಾಡಿ ಕೊಳ್ಳಲಾಗಿದ್ದು, ಎಲ್ಲಾ ಶಾಲೆಗಳಲ್ಲೂ ವಿದ್ಯಾರ್ಥಿ ಗಳ ಹಿತ ಕಾಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ೧,೮೮೦ ಸರ್ಕಾರಿ ಪ್ರಾಥಮಿಕ ಶಾಲೆ, ಬುಡಕಟ್ಟು ಮತ್ತು ಸಮಾಜ ಕಲ್ಯಾಣ ಇಲಾಖೆಯ ೨೮, ಅನುದಾನಿತ ೧೩೩, ಅನುದಾನ ರಹಿತ ೫೪೫, ಕೇಂದ್ರ ಸರ್ಕಾರದ ಎರಡು ಶಾಲೆ ಸೇರಿದಂತೆ ಜಿಲ್ಲೆಯಲ್ಲಿ ೨,೫೮೮ ಪ್ರಾಥಮಿಕ ಶಾಲೆಗಳಿವೆ. ಜಿಲ್ಲೆಯಲ್ಲಿ ೨೩೨ ಸರ್ಕಾರಿ ಪ್ರೌಢಶಾಲೆಗಳಿದ್ದು, ಬುಡಕಟ್ಟು ಮತ್ತು ಸಮಾಜ
ಕಲ್ಯಾಣ ಇಲಾಖೆಯ ೪೭, ಅನುದಾನಿತ ೧೩೪, ಅನುದಾನ ರಹಿತ ೩೫೪, ಕೇಂದ್ರ ಸರ್ಕಾ ರದ ೮ ಶಾಲೆ ಸೇರಿದಂತೆ ಒಟ್ಟು ೭೭೫ ಪ್ರೌಢಶಾಲೆಗಳಿವೆ. ಜಿಲ್ಲೆಯಲ್ಲಿ ಒಟ್ಟಾರೆ ೨,೧೧೨ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿದ್ದರೆ, ಬುಡಕಟ್ಟು ಮತ್ತು ಸಮಾಜ ಕಲ್ಯಾಣ ಇಲಾಖೆಯ ೭೫, ಅನುದಾನಿತ ೧೬೭, ಅನುದಾನ ರಹಿತ ೮೯೯, ಕೇಂದ್ರ ಸರ್ಕಾರದ ೧೦ ಶಾಲೆ ಸೇರಿದಂತೆ ಜಿಲ್ಲೆಯಲ್ಲಿ ೩೩೬೩ ಶಾಲೆಗಳಿವೆ. ಇವುಗಳಲ್ಲಿ ೧ರಿಂದ ೫ನೇ ತರಗತಿಯ ೨,೦೭,೦೦೦ ವಿದ್ಯಾರ್ಥಿಗಳು ತರಗತಿಗೆ ಹೆಸರು ನೋಂದಾಯಿಸಿಕೊAಡಿದ್ದಾರೆ.

೬ರಿಂದ ೮ನೇ ತರಗತಿಯ ೧,೩೬,೦೦೦ ವಿದ್ಯಾರ್ಥಿಗಳಿದ್ದರೆ, ೯ರಿಂದ ೧೦ನೇ ತರಗತಿಯ ೮೬,೦೦೦ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಸಂಭವವಿದೆ. ಅಂದಾಜು ಜಿಲ್ಲೆಯಲ್ಲಿ ೧ ರಿಂದ ೧೦ನೇ ತರಗತಿವರೆಗೆ ಪ್ರಸಕ್ತ ಶೈಕ್ಷಣ ಕ ಸಾಲಿನಲ್ಲಿ ೪.೨೦ ಲಕ್ಷ ವಿದ್ಯಾರ್ಥಿಗಳು ಜಿಲ್ಲೆಯ ಎಲ್ಲಾ ಬಗೆಯ ಶಾಲೆಗಳಲ್ಲಿ ಶಿಕ್ಷಣ ಪಡೆಯಲಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಶಾಲೆಗಳಲ್ಲೂ ನಾಳೆಯಿಂದಲೇ ತರಗತಿ ಪುನರಾರಂಭಿಸುವುದಕ್ಕೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ಕಳೆದ ಎರಡು ದಿನಗಳಿಂ ದಲೇ ಎಲ್ಲಾ ಶಾಲೆಗಳಲ್ಲೂ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಗಿದೆ. ಅಲ್ಲದೇ ಶೈಕ್ಷಣ ಕ ವರ್ಷದ ಮೊದಲ ದಿನವಾಗಿರುವುದರಿಂದ ಎಲ್ಲಾ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳನ್ನು ಸಂಭ್ರಮದಿAದ ಬರಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

Translate »