ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ಮುಂದಾದ ಕಾಂಗ್ರೆಸ್ ಒಂದು ಕುಟುಂಬಕ್ಕೆ ಒಂದೇ ಟಿಕೆಟ್
ಮೈಸೂರು

ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ಮುಂದಾದ ಕಾಂಗ್ರೆಸ್ ಒಂದು ಕುಟುಂಬಕ್ಕೆ ಒಂದೇ ಟಿಕೆಟ್

May 16, 2022

ಉದಯಪುರ್ (ರಾಜಸ್ತಾನ್), ಮೇ ೧೫-ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ಕಾಂಗ್ರೆಸ್ ಮುಂದಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ರಾಜಸ್ತಾನದ ಉದಯಪುರ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ (ಅWಅ) ಈ ಸಂಬAಧ ನಿರ್ಣಯ ಕೈಗೊಂಡಿದೆ.

ಮುಂಬರುವ ಚುನಾವಣೆಗಳಲ್ಲಿ ಒಂದು ಕುಟುಂ ಬಕ್ಕೆ ಒಂದೇ ಟಿಕೆಟ್ ನೀಡಬೇಕು ಎಂಬ ನಿಯಮಕ್ಕೆ ಅನುಮೋದನೆ ನೀಡಲಾಗಿದೆ. ಆದರೆ ಅದೇ ಕುಟುಂ ಬದ ಮತ್ತೊಬ್ಬ ಸದಸ್ಯ ೫ ವರ್ಷ
ಪಕ್ಷಕ್ಕಾಗಿ ದುಡಿದಿ ದ್ದರೆ ಟಿಕೆಟ್ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಇವಿಎಂ ಬಗ್ಗೆ ಸಮಾನಾಂತರ ಪಕ್ಷಗಳ ಜೊತೆ ಚರ್ಚೆ ಮಾಡಿ ಮುಂದಿನ ಹೋರಾಟ ನಡೆಸುವ ಬಗ್ಗೆ ಸಭೆ ನಿರ್ಧರಿಸಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಹಕರಿಸಲು ಸಲಹಾ ಸಮಿತಿಗಳನ್ನು ರಚನೆ ಮಾಡಲಾಗಿದೆ. ಬೂತ್ ಮಟ್ಟದಿಂದ ಕಾರ್ಯಕಾರಿ ಸಮಿತಿವರೆಗೆ ಶೇ.೫೦ ಸ್ಥಾನ ಯುವಕರಿಗೆ ನೀಡಲು ತೀರ್ಮಾನಿಸಲಾಗಿದೆ. ಎಸಿ-ಎಸ್‌ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಶೇ.೫೦ ಸ್ಥಾನ ಮೀಸಲಿ ಡಲು ನಿರ್ಧಾರ ಕೈಗೊಳ್ಳಲಾಗಿದೆ. ಬ್ಲಾಕ್ ಸಮಿತಿಯಿಂದ ಕಾರ್ಯಕಾರಿ ಸಮಿತಿವರೆಗೆ ಪ್ರತೀ ಪದಾಧಿಕಾರಿಗೂ ಗರಿಷ್ಠ ೫ ವರ್ಷ ಅವಧಿ ನಿಗದಿಪಡಿಸಲಾಗಿದ್ದು, ಬಳಿಕ ಮೂರು ವರ್ಷ ಕೂಲಿಂಗ್ ಪಿರಿಯಡ್ ಆಗಿರುತ್ತದೆ. ಜನರ ನೈಜ ಸಮಸ್ಯೆ ಕೈಗೆತ್ತಿಕೊಳ್ಳಲು ಪ್ರತೀ ರಾಜ್ಯದಲ್ಲೂ ಸಮಿತಿ ರಚನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ಉಸ್ತುವಾರಿಗಳು ಆಯಾ ರಾಜ್ಯದಲ್ಲೇ ಠಿಕಾಣ ಹೂಡಲು ಸಿಡಬ್ಲುö್ಯಸಿ ಸಭೆ ಸೂಚಿಸಿದೆ.

ಭಾರತ ಜೋಡಣಾ ಯಾತ್ರೆಗೆ ಸಿಡಬ್ಲುö್ಯಸಿ ಸಭೆ ನಿರ್ಧರಿಸಿದ್ದು, ಪ್ರತೀ ರಾಜ್ಯದಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರವಾಸ ಮಾಡಲಿದ್ದಾರೆ. ಪ್ರವಾಸದ ರೂಟ್ ಮ್ಯಾಫ್ ಹೊಣೆಗಾರಿಕೆ ಆಯಾ ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ವಹಿಸಲಾಗಿದೆ.ಎಲ್ಲಾ ಹಂತಗಳಲ್ಲಿ ೩೫ ವರ್ಷ ವಯೋಮಾನದವರಿಗೆ ಆದ್ಯತೆ ನೀಡಬೇಕು ಎಂದು ಮುಖುಲ್ ವಾಸ್ನಿಕ್ ನೇತೃತ್ವದ ಸಂಘಟನಾ ಸಮಿತಿ ನೀಡಿದ ಸಲಹೆ ಬಗ್ಗೆ ಚರ್ಚಿಸ ಲಾಯಿತು. ಕಾಂಗ್ರೆಸ್ ಕಾರ್ಯಕಾರಿಣ ಸಮಿತಿ ಸೇರಿದಂತೆ ಎಲ್ಲಾ ಹಂತಗಳಲ್ಲಿ ಶೇ.೫೦ ರಷ್ಟು ಹುದ್ದೆಗಳನ್ನು ೫೦ ವರ್ಷಕ್ಕಿಂತ ಕಡಿಮೆ ಇರುವವರಿಗೆ ನೀಡಬೇಕು ಎಂಬ ಸಲಹೆಯನ್ನು ಸಭೆ ಅಂಗೀಕರಿಸಿತು. ಸಭೆಯಲ್ಲಿ ಎಐಸಿಸಿ ಮುಖಂಡ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಪಿ.ಚಿದಂಬರA, ಸಿದ್ದರಾಮಯ್ಯ, ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಹಾಗೂ ರಾಷ್ಟç ಮಟ್ಟದ ನಾಯಕರು ಭಾಗವಹಿಸಿದ್ದರು.

೭೦ ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನಿರಾಕರಿಸುವ ಬಗ್ಗೆ ಸಿಡಬ್ಲುö್ಯಸಿಯಲ್ಲಿ ಗಂಭೀರ ಚರ್ಚೆ ನಡೆಯಿತಾದರೂ, ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅದರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ೭೦ ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನಿರಾಕರಿಸುವ ಪ್ರಸ್ತಾವನೆಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಈ ನಿರ್ಧಾರದಿಂದ ಅರ್ಹ ವ್ಯಕ್ತಿಗಳು ಟಿಕೆಟ್ ವಂಚಿತರಾಗುತ್ತಾರೆ. ಅದು ಪಕ್ಷದ ಬೆಳವಣ ಗೆಗೂ ಪೆಟ್ಟು ನೀಡುತ್ತದೆ ಎಂದು ಹಲವು ಹಿರಿಯ ನಾಯಕರು ಆಕ್ಷೇಪ ವ್ಯಕ್ತ ಪಡಿಸಿದರು. ಈ ವೇಳೆ ಸಿದ್ದರಾಮಯ್ಯನವರು ೭೦ ವರ್ಷ ಮೀರಿದ ಆರೋಗ್ಯವಂತರಿಗೆ ಟಿಕೆಟ್ ನೀಡ ಬಹುದು ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ೭೦ ವರ್ಷ ಮೀರಿದ ಪದಾಧಿಕಾರಿಗಳಿಂದ ರಾಜೀನಾಮೆ ಪಡೆಯಬೇಕು ಎಂಬ ಪ್ರಸ್ತಾವನೆ ಬಗ್ಗೆ ಕೂಡ ವಿರೋಧ ವ್ಯಕ್ತವಾಯಿತು. ಪ್ರಭಾವಿಗಳು, ಸಂಪನ್ಮೂಲ ವ್ಯಕ್ತಿಗಳು ಮತ ಕ್ರೋಢೀಕರಿಸುವ ಸಾಮರ್ಥ್ಯವಿರುವವರಿಗೆ ವಿನಾಯಿತಿ ನೀಡಬೇಕು ಎಂಬ ಸಲಹೆಗಳು ಕೇಳಿ ಬಂದವು. ಅಂತಿಮವಾಗಿ ಈ ಪ್ರಸ್ತಾವನೆಯನ್ನು ಕೈಬಿಡಲಾಯಿತು.

ಜನರೊಂದಿಗೆ ಸಂಪರ್ಕ ಕಡಿದಿದೆ…
ಉದಯ್‌ಪುರ್: ಕಾಂಗ್ರೆಸ್ ಜನಸಾಮಾ ನ್ಯರ ಜೊತೆ ಸಂಪರ್ಕ ಕಳೆದುಕೊಂಡಿದೆ. ಅದನ್ನು ಮರುಸ್ಥಾಪಿಸಲು ಕಠಿಣ ಪರಿಶ್ರಮ ಪಡಬೇಕು ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದಾರೆ.ಸಿಡಬ್ಲುö್ಯಸಿ ಸಭೆಯಲ್ಲಿ ಮಾತನಾಡಿದ ಅವರು, ಜನ ಸಾಮಾನ್ಯರೊಂದಿಗಿನ ಸಂಪರ್ಕವನ್ನು ಮರುಸ್ಥಾಪಿಸಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆಯಾತ್ರೆ ಕೈಗೊಳ್ಳುವುದಾಗಿ ಪ್ರಕಟಿಸಿದರು. ಪಕ್ಷ ಬೆವರು ಹರಿಸಿ ಜನರೊಂದಿಗೆ ಸಂಪರ್ಕ ಸಾಧಿಸಬೇಕು. ಅದಕ್ಕಾಗಿ ರೈತರು ಮತ್ತು ಕೂಲಿ ಕಾರ್ಮಿಕರ ಜೊತೆ ಒಂದೆರಡಲ್ಲ, ತಿಂಗಳು ಕಾಲ ಕಳೆಯಿರಿ ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದರು. ನಮ್ಮಂತೆ ಬಿಜೆಪಿ ವಿರುದ್ಧ ಹೋರಾಡಲು ಪ್ರಾದೇಶಿಕ ಪಕ್ಷಗಳಿಗೆ ಸಾಧ್ಯವಿಲ್ಲ. ಯಾಕೆಂದರೆ ಅವುಗಳು ಸಿದ್ಧಾಂತವನ್ನು ಹೊಂದಿಲ್ಲ. ಈ ಕಾರಣದಿಂದಲೇ ಬಿಜೆಪಿ ಕಾಂಗ್ರೆಸ್ ಬಗ್ಗೆ ಮಾತನಾಡುತ್ತದೆಯೇ ಹೊರತು ಪ್ರಾದೇಶಿಕ ಪಕ್ಷಗಳ ಬಗ್ಗೆ ಮಾತನಾಡುವುದಿಲ್ಲ ಎಂದರು. ಬಿಜೆಪಿ ನಮಗಿಂತಲೂ ಉತ್ತಮವಾದ ಕ್ಷೇತ್ರವನ್ನು ಹೊಂದಿದೆ. ಅದು ಸಂವಹನ ಕ್ಷೇತ್ರ. ನಾವು ನಮ್ಮ ಸಂವಹನವನ್ನು ಸುಧಾರಿಸಬೇಕು ಮತ್ತು ಜನರೊಂದಿಗೆ ಸಂಪರ್ಕ ಸಾಧಿಸಬೇಕು ಎಂದರು. ಬಿಜೆಪಿ ಬಗ್ಗೆ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ರಾಷ್ಟçದ ಪ್ರಮುಖ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನ್ಯಾಯಾಂಗವನ್ನು ದಾರಿ ತಪ್ಪಿಸುತ್ತಿದೆ. ಚುನಾವಣಾ ಆಯೋಗದ ತೋಳುಗಳನ್ನು ತಿಳಿಸಲಾಗಿದೆ. ಬೆದರಿಕೆ ಮೂಲಕ ಮಾಧ್ಯಮಗಳನ್ನು ಮೌನಗೊಳಿಸಲಾಗಿದೆ. ಇದೀಗ ಬಿಜೆಪಿ ಜನರನ್ನು ಇಬ್ಭಾಗ ಮಾಡುತ್ತಿದೆ. ಅದರಿಂದ ದೇಶಕ್ಕೆ ಯಾವುದೇ ಪ್ರಯೋ ಜನವಿಲ್ಲ ಎಂಬುದನ್ನು ಕಾಂಗ್ರೆಸ್‌ನಿAದ ಮಾತ್ರ ಸಾಧ್ಯ ಎಂದರು.

 

Translate »