ಮೈಸೂರಲ್ಲಿ ರಾತ್ರಿ ಎರಗಿದ ಮಳೆರಾಯ ಧರೆಗುರುಳಿದ ಮರಗಳು, ಸಂಚಾರ ದುಸ್ಸಾಹಸ
ಮೈಸೂರು

ಮೈಸೂರಲ್ಲಿ ರಾತ್ರಿ ಎರಗಿದ ಮಳೆರಾಯ ಧರೆಗುರುಳಿದ ಮರಗಳು, ಸಂಚಾರ ದುಸ್ಸಾಹಸ

May 17, 2022

ಮೈಸೂರು, ಮೇ ೧೬(ಎಂಕೆ)- ಮೈಸೂರಿನಲ್ಲಿ ಪೂರ್ವ ಮುಂಗಾರು ಅಬ್ಬರ ಮುಂದುವರೆದಿದ್ದು, ಸೋಮವಾರ ಇಡೀ ದಿನ ಸುರಿದ ಮಳೆಗೆ ಹತ್ತಾರು ಮರಗಳು ನೆಲಕ್ಕುರುಳಿದರೆ, ಹಲವಾರು ಮನೆಗಳಿಗೆ ನೀರು ನುಗ್ಗಿ ಪರದಾಡುವಂತಾಗಿದೆ.ಬೆಳಗ್ಗೆಯಿAದಲೇ ಆರಂಭವಾದ ಮಳೆ ಮಧ್ಯಾಹ್ನ ಸ್ವಲ್ಪಹೊತ್ತು ಬಿಡುವು ನೀಡಿ, ಮತ್ತೆ ಸಂಜೆಯಿAದ ತಡರಾತ್ರಿಯಲ್ಲೂ ಸುರಿಯುತ್ತಲೇ ಇತ್ತು. ಪರಿಣಾಮ ಸಿದ್ದಾರ್ಥ ಬಡಾವಣೆಯ ವಿನಯ ಮಾರ್ಗದ ೮ನೇ ಕ್ರಾಸ್, ನಾಯ್ಡುನಗರ ಇತರೆಡೆ ಮರಗಳು ಬುಡ ಸಮೇತ ನೆಲಕ್ಕುರುಳಿವೆ. ಬಳಿಕ ಸ್ಥಳಕ್ಕಾಗಮಿಸಿದ ನಗರ ಪಾಲಿಕೆ ಅಭಯ ತಂಡದ ಸಿಬ್ಬಂದಿ ಉರುಳಿ ಬಿದ್ದಿದ್ದ ಮರ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆದರೆ ಮೊದಲೇ ಗುಂಡಿಬಿದ್ದಿದ ರಸ್ತೆಗಳಲ್ಲಿ ನೀರು ನಿಂತು ಪಾದಚಾರಿಗಳು, ವಾಹನ ಸವಾರರಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿವೆ. ಹಲವೆಡೆ ನೀರು ತುಂಬಿದ್ದ ಗುಂಡಿಗೆ ದ್ವಿಚಕ್ರ ವಾಹನ ಸವಾರರು ಬಿದ್ದ ಮಾಹಿತಿಯೂ ಬಂದಿದೆ.

ಪರದಾಟ:ನಗರದೆಲ್ಲೆಡೆ ಸುರಿದ ಜೋರು ಮಳೆಗೆ ರಸ್ತೆಗಳು, ಮೋರಿಗಳು ತುಂಬಿ ಹರಿದು ವಾಹನ ಸವಾರರು, ಪಾದಚಾರಿಗಳು, ವ್ಯಾಪಾರಸ್ಥರು ಪರದಾಡುವಂತಾಯಿತು. ನಿರಂತರ ಮಳೆಯಿಂದಾಗಿ ದೇವರಾಜ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ಎಂ.ಜಿ.ರಸ್ತೆ ಮಾರುಕಟ್ಟೆಗಳ ವ್ಯಾಪಾರಸ್ಥರು, ಗ್ರಾಹಕರಿಲ್ಲದೆ ಭಣಗುಡುತ್ತಿದ್ದವು.

ಮನೆಗಳಿಗೆ ನುಗ್ಗಿದ ನೀರು:ಕುರುಬಾರಹಳ್ಳಿಯಲ್ಲಿ ಎರಡ್ಮೂರು ಮನೆಗಳಿಗೆ ನುಗ್ಗಿರುವ ಮಳೆ ನೀರು ಅವಾಂತರ ಸೃಷ್ಟಿಸಿದೆ. ಮನೆಯಲ್ಲಿದ್ದ ಕೆಲ ವಸ್ತುಗಳು ಹಾನಿಯಾಗಿದ್ದು, ನಿವಾಸಿಗಳ ನಿದ್ದೆಗೆಡಿಸಿದೆ. ಅಲ್ಲದೆ ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳಲ್ಲಿನ ಮನೆ ಗಳಿಗೂ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ.

ಮನೆಗಳಿಗೆ ಯುಜಿಡಿ ನೀರು:ಅಗ್ರಹಾರದ ರಾಮಾ ನುಜ ರಸ್ತೆ ೬, ೭, ೧೨ ಹಾಗೂ ೧೩ನೇ ಕ್ರಾಸ್‌ನ ಹಲವು ಮನೆಗಳಿಗೆ ಶೌಚಾಲಯಗಳ ಮೂಲಕ ಯುಜಿಡಿ ನೀರು ಹರಿದು ರಾಡಿಯಾಗಿದ್ದರಿಂದ ಜನ ತೀವ್ರ ಸಂಕಷ್ಟ ಅನುಭವಿಸಿದರು. ಟೆರೇಸ್‌ಗಳಿಂದ ಮಳೆ ನೀರು ಹರಿವನ್ನು ಯುಜಿಡಿಗೆ ಸಂಪರ್ಕ ನೀಡಿದ್ದು, ಭಾರೀ ಮಳೆ ಪರಿಣಾಮ ಈ ಅವ್ಯವಸ್ಥೆ ಸೃಷ್ಟಿಯಾಗಿದೆ. ಮೇಯರ್ ಸುನಂದಾ ಪಾಲನೇತ್ರ, ಸ್ಥಳೀಯ ಕಾರ್ಪೊರೇಟರ್ ಬಿ.ವಿ.ಮಂಜುನಾಥ್ ಹಾಗೂ ಅಧಿಕಾರಿಗಳು ಪರಿ ಶೀಲನೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಿದರು.

Translate »