ಮಳವಳ್ಳಿ,ಮೇ ೧೬-ಚಾಲಕನ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಹಾರಿದ ಪರಿಣಾಮ ಪಾಂಡವಪುರ ಸರ್ಕಲ್ ಇನ್ಸ್ಪೆಕ್ಟರ್ ಪ್ರಭಾಕರ್ ಮತ್ತು ಕಾರು ಚಾಲನೆ ಮಾಡುತ್ತಿದ್ದ ಕಾನ್ಸ್ಟೇಬಲ್ ಹೇಮಂತ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಳವಳ್ಳಿ-ಮದ್ದೂರು ರಸ್ತೆಯ ಕಾಳಕೆಂಪನದೊಡ್ಡಿ ಗೇಟ್ ಬಳಿ ಸೋಮ ವಾರ ಸಂಜೆ ಸಂಭವಿಸಿದೆ.
ಪ್ರಭಾಕರ್ ಅವರು ಹನೂರು ತಾಲೂಕು ರಾಮಾಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದ ವೇಳೆ ತನಿಖೆ ನಡೆಸಿದ್ದ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಸಾಕ್ಷö್ಯ ನುಡಿಯಲು ಕೊಳ್ಳೇಗಾಲ ನ್ಯಾಯಾಲಯಕ್ಕೆ ತಮ್ಮ ಖಾಸಗಿ ಕಾರಿ(ಕೆಎ೦೮ ಎಂ೬೭೫೯)ನಲ್ಲಿ ಕಾನ್ಸ್ಟೇಬಲ್ ನೊಂದಿಗೆ ಇಂದು ಬೆಳಗ್ಗೆ ತೆರಳಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದ ವೇಳೆ ಕಾಳಕೆಂಪನ ದೊಡ್ಡಿ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಹಾರಿದೆ. ಇದನ್ನು ಕಂಡ ಸಾರ್ವಜನಿಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾರಿನಲ್ಲಿ ಸಿಲುಕಿದ್ದ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಅನ್ನು ರಕ್ಷಿಸಿ ೧೦೮ ಆಂಬುಲೆನ್ಸ್ ಮೂಲಕ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಳೆ ಸುರಿಯುತ್ತಿದ್ದರಿಂದ ಸರಿಯಾಗಿ ರಸ್ತೆ ಕಾಣದೇ ಕಾರು ಚಾಲಕನ ನಿಯಂತ್ರಣ ತಪ್ಪಿತು ಎಂದು ಹೇಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮಳವಳ್ಳಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ನಾಲೆಯಲ್ಲಿ ಬಿದ್ದಿದ್ದ ಕಾರನ್ನು ಹೊರ ತೆಗೆದು ಠಾಣೆಗೆ ಕೊಂಡೊಯ್ದರಲ್ಲದೇ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.