ಮೈಸೂರಲ್ಲಿ ಶಾಲೆಗಳು ಪ್ರಾರಂಭ
ಮೈಸೂರು

ಮೈಸೂರಲ್ಲಿ ಶಾಲೆಗಳು ಪ್ರಾರಂಭ

May 17, 2022

ಧೋ ಎಂದು ಸುರಿವ ಮಳೆ ನಡುವೆಯೂ ಆರಂಭವಾಯ್ತು ಮಕ್ಕಳ ಶೈಕ್ಷಣ ಕ ಚಟುವಟಿಕೆ

ಮೈಸೂರಿನ ಇಟ್ಟಿಗೆಗೂಡು ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳಿಗೆ ಆರತಿ ಬೆಳಗಿ ಬರಮಾಡಿಕೊಂಡರು.
ಮೈಸೂರು, ಮೇ ೧೬(ಆರ್‌ಕೆ)-ಬೆಳಗ್ಗೆಯೇ ಆರಂಭ ವಾಗಿ, ನಿರಂತರವಾಗಿ ಧೋ ಎಂದು ಸುರಿದ ಮಳೆ ನಡುವೆಯೂ ಮೈಸೂರು ನಗರ ಮತ್ತು ಜಿಲ್ಲೆ ಯಾದ್ಯಂತ ಶಾಲೆಗಳು ಇಂದು ಆರಂಭವಾದವು.

೨೦೨೨-೨೩ನೇ ಸಾಲಿನ ಶೈಕ್ಷಣ ಕ ವರ್ಷ ಆರಂಭ ವಾಗಿದ್ದು, ಶಾಲೆಗಳಿಗೆ ಉತ್ಸಾಹದಿಂದ ಮಕ್ಕಳು ಹಾಜ ರಾದರು. ಮೊದಲ ದಿನವಾದ ಇಂದು ಬಹುತೇಕ ಶಾಲೆಗಳನ್ನು ತಳಿರು-ತೋರಣ, ರಂಗೋಲಿಯಿAದ ಶೃಂಗರಿಸಿ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಂಡರು. ಪೋಷಕರೂ, ಎಲ್ಲಾ ರೀತಿಯಲ್ಲೂ ಅಣ ಗೊಳಿಸಿ ತಮ್ಮ ಮಕ್ಕಳನ್ನು ವಾಹನಗಳಲ್ಲಿ
ಉತ್ಸಾಹದಿಂದಲೇ ಕರೆತಂದು ಬಿಡುತ್ತಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ೨ ವರ್ಷಗಳಿಂದ ಶಾಲೆಗಳಲ್ಲಿ ಭೌತಿಕ ತರಗತಿಗಳು ನಡೆಯದೇ ಮಕ್ಕಳು ಮನೆಯಲ್ಲೇ ಆನ್‌ಲೈನ್ ಕಲಿಕೆಯಲ್ಲಿ ನಿರತವಾಗಿದ್ದವು. ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಸ್ಯಾನಿಟೈಸರ್ ನೀಡುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದೂ ಸೇರಿದಂತೆ ಎಲ್ಲಾ ಅಗತ್ಯ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸ ಲಾಗುತ್ತಿದ್ದು, ಟೊಮೆಟೋ ಜ್ವರದ ಬಗ್ಗೆಯೂ ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ರಾಮಚಂದ್ರರಾಜೇ ಅರಸ್ ತಿಳಿಸಿದರು.

ಸ್ವಚ್ಛ ವಾತಾವರಣ, ಕುಡಿಯಲು ಶುದ್ಧ ನೀರು, ಶೌಚಾಲಯ ಸೇರಿದಂತೆ ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಆಗಿಂದಾಗ್ಗೆ ಶಾಲೆಗಳಿಗೆ ತೆರಳಿ, ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸುತ್ತಿದ್ದಾರೆ.
ಮೈಸೂರು ನಗರ ಸೇರಿದಂತೆ ಜಿಲ್ಲೆಯ ೩,೩೬೫ ಶಾಲೆಗಳಲ್ಲೂ ಶಾಲಾ ಆರಂಭಕ್ಕೆ ಸರ್ವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ತಾವೂ ಸಹ ಮೈಸೂರಿನ ಹೂಟಗಳ್ಳಿ, ಇಟ್ಟಿಗೆಗೂಡು, ಎನ್‌ಟಿಎಂಎಸ್, ನಂಜನಗೂಡು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಪಠ್ಯ ಪುಸ್ತಕ, ಲೇಖನ ಸಾಮಗ್ರಿ ವಿತರಿಸಿದ್ದಾಗಿಯೂ ರಾಮಚಂದ್ರರಾಜೇ ಅರಸ್ ತಿಳಿಸಿದರು.

ಮೊದಲ ದಿನದಿಂದಲೇ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟ ವ್ಯವಸ್ಥೆ ಸಮರ್ಪಕವಾಗಿದ್ದು, ಎಲ್ಲಿಯೂ ಸಮಸ್ಯೆಯಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ. ಕೆಲ ಶಾಲೆಗಳ ಅಡುಗೆ ಮನೆಗೆ ಭೇಟಿ ನೀಡಿ ಊಟ ತಯಾರಿಸುವ ಪ್ರಕ್ರಿಯೆ ಪರಿಶೀಲಿಸಿದ್ದಲ್ಲದೇ, ಊಟ ಸವಿದು ಗುಣಮಟ್ಟವನ್ನೂ ಪರೀಕ್ಷಿಸಿದ್ದೇನೆ ಎಂದು ರಾಮಚಂದ್ರರಾಜೇ ಅರಸ್ ಹೇಳಿದರು.

ಆಟೋ, ಕ್ಯಾಬ್, ಶಾಲಾ ಬಸ್‌ಗಳಲ್ಲಿ ಮಕ್ಕಳು ಸುರಕ್ಷಿತವಾಗಿ ಬಂದು ಹೋಗಿದ್ದು, ಶಿಕ್ಷಕರು ಮಕ್ಕಳ ಸುರಕ್ಷತೆ ಬಗ್ಗೆಯೂ ಗಮನಹರಿಸಬೇಕೆಂಬ ಸೂಚನೆ ನೀಡಲಾಗಿದೆ. ಆಯಾ ಬಿಇಓಗಳೂ ಸಹ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮಳೆ ಇಲ್ಲದಿದ್ದರೆ ಇನ್ನೂ ಹೆಚ್ಚಿನ ಸಂಖ್ಯೆಯ ಹಾಜರಾತಿ ಇರುತ್ತಿತ್ತು. ಕೆಲವು ಪೋಷಕರು ಮಳೆಯಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಧೈರ್ಯ ಮಾಡಿಲ್ಲ. ಮಳೆ ನಿಲ್ಲುವವರೆಗೆ ಶಾಲೆ ಆರಂಭಿಸಬಾರದೆAದೂ ಕೆಲ ಪೋಷಕರು ಮನವಿ ಮಾಡಿದ್ದರು. ಆದರೆ ರಾಜ್ಯ ಸರ್ಕಾರದ ಆದೇಶ ಪಾಲಿಸಬೇಕಾಗಿರುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಉಪನಿರ್ದೇಶಕರು ತಿಳಿಸಿದ್ದಾರೆ.

ಶೀಘ್ರದಲ್ಲೇ ಪಠ್ಯ ಪುಸ್ತಕ, ಸಮವಸ್ತç, ಸೈಕಲ್ ವಿತರಣೆ

ಬೆಂಗಳೂರು: ರಾಜ್ಯದಲ್ಲಿ ಶೈಕ್ಷಣ ಕ ವರ್ಷ ಆರಂಭಗೊAಡಿದ್ದು, ಶಾಲೆಗೆ ಆಗಮಿ ಸಿರುವ ಮಕ್ಕಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭ ಕೋರಿದ್ದಾರೆ. ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ಬಹಳ ದಿನಗಳ ನಂತರ ಶಾಲೆ ಆರಂಭವಾಗುತ್ತಿದೆ. ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಮಕ್ಕ ಳಿಗೆ ಒಳ್ಳೆಯ ವಾತಾವರಣ
ನಿರ್ಮಾಣವಾಗಲಿ ಎನ್ನುವ ಆಶಯ ನಮ್ಮದು. ಶಾಲೆಯಲ್ಲಿಯೇ ಕಲಿತಾಗ ಮಕ್ಕಳಿಗೆ ಒಳ್ಳೆಯ ಕಲಿಕೆ ಸಾಧ್ಯವಾಗುತ್ತದೆ ಎಂದು ಹೇಳಿದರು. ಇದೇ ವೇಳೆ ಶಾಲಾ ಮಕ್ಕಳಿಗೆ ಶೀಘ್ರದಲ್ಲಿಯೇ ಪಠ್ಯ ಪುಸ್ತಕ, ಸಮವಸ್ತç, ಸೈಕಲ್ ವಿತರಿಸಲಾಗುತ್ತದೆ ಎಂದು ಭರವಸೆ ನೀಡಿದರು. ರಾಜ್ಯದಲ್ಲಿ ಇಂದಿನಿAದ ಎಲ್ಲಾ ಮಾದರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪುನರಾರಂಭಗೊAಡಿದ್ದು, ಈ ಮೂಲಕ ೨ ವರ್ಷಗಳ ಬಳಿಕ ನಿಗದಿತ ಸಮಯಕ್ಕೆ ಶೈಕ್ಷಣ ಕ ವರ್ಷ ಆರಂಭವಾಗಿದೆ. ಅಕ್ಷರ ದೇಗುಲಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮಕ್ಕಳನ್ನು ಸಂತಸದಿAದ ಸ್ವಾಗತಿಸಲಾಗಿದೆ.

Translate »