ಪಿಯು ಪ್ರಿನ್ಸಿಪಾಲ್, ಉಪನ್ಯಾಸಕರ ವರ್ಗಾವಣೆಗೆ ನಾಳೆಯಿಂದ ಕೌನ್ಸಿಲಿಂಗ್
ಮೈಸೂರು

ಪಿಯು ಪ್ರಿನ್ಸಿಪಾಲ್, ಉಪನ್ಯಾಸಕರ ವರ್ಗಾವಣೆಗೆ ನಾಳೆಯಿಂದ ಕೌನ್ಸಿಲಿಂಗ್

June 17, 2018

ಬೆಂಗಳೂರು:  ಪದವಿ ಪೂರ್ವ ಕಾಲೇಜುಗಳ ಪ್ರಾಂಶು ಪಾಲರು ಮತ್ತು ಉಪನ್ಯಾಸಕರ ವರ್ಗಾವಣೆಗೆ ಸೋಮವಾರದಿಂದ ಕೌನ್ಸಿಲಿಂಗ್ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.ಈ ತಿಂಗಳ 21ರಂದು ಐಚ್ಛಿಕ ಕನ್ನಡ, ಸಂಸ್ಕøತ, ಹಿಂದಿ, ಉರ್ದು, ಶಿಕ್ಷಣ, ತರ್ಕಶಾಸ್ತ್ರ, ಭೂಗೋಳ ಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ, ಕನ್ನಡ, ಗಣಿತಶಾಸ್ತ್ರ ಉಪನ್ಯಾಸಕರ ಕೌನ್ಸಿಲಿಂಗ್ ನಡೆಯಲಿದೆ.

22ರಂದು ಇತಿಹಾಸ, ಭೌತಶಾಸ್ತ್ರ, 23ರಂದು ರಾಜ್ಯಶಾಸ್ತ್ರ, ವ್ಯವಹಾರ ಅಧ್ಯಯನ, ರಾಸಾಯನಶಾಸ್ತ್ರ, ಸಮಾಜ ಶಾಸ್ತ್ರ, ಜೀವಶಾಸ್ತ್ರ, 24ರಂದು ಇಂಗ್ಲಿಷ್ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕರ ಕೌನ್ಸಿಲಿಂಗ್ ನಡೆಯಲಿದೆ. ಪ್ರಾಂಶು ಪಾಲರ ಹುದ್ದೆಗೆ ಮುಂಬಡ್ತಿ ಹೊಂದಿ ದವರು ಕಡ್ಡಾಯವಾಗಿ ಕೌನ್ಸಿಲಿಂಗ್ ನಲ್ಲಿ ಹಾಜರಾಗಿ ಸ್ಥಳ ಆಯ್ಕೆ ಮಾಡಿ ಕೊಳ್ಳದಿದ್ದರೆ, ಬಡ್ತಿ ರದ್ದುಗೊಳಿಸಲಾ ಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Translate »