ಯೋಜನೆ ಜಾರಿಗೂ ಮುನ್ನ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕು ಅಂದ್ರೆ ಇದೇ ಅಲ್ವ, ಜಿಟಿಡಿ, ಎಲ್.ನಾಗೇಂದ್ರ ಸಭೆಗೆ ಬಂದಿದ್ದರಲ್ವಾ?: ಪ್ರತಾಪ್ ಸಿಂಹ
ಮೈಸೂರು

ಯೋಜನೆ ಜಾರಿಗೂ ಮುನ್ನ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕು ಅಂದ್ರೆ ಇದೇ ಅಲ್ವ, ಜಿಟಿಡಿ, ಎಲ್.ನಾಗೇಂದ್ರ ಸಭೆಗೆ ಬಂದಿದ್ದರಲ್ವಾ?: ಪ್ರತಾಪ್ ಸಿಂಹ

May 11, 2020

ಮೈಸೂರು, ಮೇ 10(ಎಸ್‍ಬಿಡಿ)- ಮೈಸೂರಿನ ಸೀವೆಜ್ ಫಾರ್ಮ್ ತ್ಯಾಜ್ಯ ಸಂಸ್ಕರಣೆ ಸಂಬಂಧ ಸಾರ್ವಜನಿಕ ಅಭಿ ಪ್ರಾಯ, ಜನಪ್ರತಿನಿಧಿಗಳ ಸಹಕಾರದಿಂ ದಲೇ ಯೋಜನೆ ಕೈಗೊಳ್ಳಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.
ನಾಗ್ಪುರ ಮಾದರಿಯಲ್ಲಿ ಕಸ ಸಂಸ್ಕರಣ ಮಾಡುವುದಕ್ಕೆ ಜನ ಒಪ್ಪಿದರೆ ತಮ್ಮದೇನು ತಕರಾರಿಲ್ಲ ಎಂಬ ಶಾಸಕ ಎಸ್.ಎ.ರಾಮ ದಾಸ್ ಅವರ ವಾದಕ್ಕೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.

ವಿ.ಸೋಮಣ್ಣನವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 2019ರ ನವೆಂಬರ್ 2ರಂದು ಸೀವೆಜ್ ಫಾರ್ಮ್‍ಗೆ ಭೇಟಿ ನೀಡಿ ದ್ದರು. ಅದಕ್ಕೂ ಮುನ್ನ ಸೋಮಣ್ಣನವರೇ ಖುದ್ದಾಗಿ ರಾಮದಾಸ್ ಅವರನ್ನು ಆಹ್ವಾ ನಿಸಿದ್ದರು. ಅದರೆ ಅವರು ಆಗಮಿಸಲಿಲ್ಲ. ಸೀವೆಜ್ ಫಾರ್ಮ್‍ನ ಕಸದ ರಾಶಿ ಹಾಗೂ ಸಂಸ್ಕರಣ ಘಟಕವನ್ನು ಪರಿಶೀಲಿಸಿದ ಸೋಮಣ್ಣನವರು, ಜನರ ನೆಮ್ಮದಿ ಕಸಿದಿ ರುವ ಕಸದ ಸಮಸ್ಯೆ ಬಗೆಹರಿಸಲು ನಿರ್ಧ ರಿಸಿದರು. ಈ ಸಂಬಂಧ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸ್ಥಳದಲ್ಲೇ ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್ ನೇತೃತ್ವದಲ್ಲಿ ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಿ, ನ.25ರೊಳಗೆ ವರದಿ ನೀಡುವಂತೆ ಸೂಚಿಸಿದರಲ್ಲದೆ, 2020ರ ಜನವರಿ 3 ರಂದು ನಡೆಯುವ ಕೆಡಿಪಿ ಸಭೆಯೊಳಗೆ ಅಂತಿಮ ತೀರ್ಮಾನವಾಗಬೇಕೆಂದು ಗಡುವು ನೀಡಿ ದ್ದರು. ವಿ.ಸೋಮಣ್ಣನವರ ಸೂಚನೆಯಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನೇತೃತ್ವ ದಲ್ಲಿ ಅಂದಿನ ಮೇಯರ್ ಪುಷ್ಪಲತಾ ಜಗ ನ್ನಾಥ್, ಉಪಮೇಯರ್ ಷಫಿ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಶೋಭಾ ಸುನಿಲ್, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಆರೋಗ್ಯಾಧಿಕಾರಿಗಳಾದ ಡಾ.ಜಯಂತ ಹಾಗೂ ಡಾ.ನಾಗ ರಾಜು ಅವರನ್ನೊಳಗೊಂಡ ನಿಯೋಗ ಡಿಸೆಂಬರ್ ತಿಂಗಳಲ್ಲಿ ಮಹಾರಾಷ್ಟ್ರದ ನಾಗ್ಪುರಕ್ಕೆ ಭೇಟಿ ನೀಡಿ, ಅಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ವಿಧಾನದ ಬಗ್ಗೆ ಸಮಗ್ರ ಮಾಹಿತಿ ಪಡೆದಿತ್ತು. ಹಾಗೆಯೇ 2020ರ ಜ.3ರಂದು ನಡೆದ ಕೆಡಿಪಿ ಸಭೆಯಲ್ಲಿ ನಾಗ್ಪುರಕ್ಕೆ ತೆರಳಿದ್ದ ನಿಯೋಗ ಅಲ್ಲಿನ ನಿರ್ವಹಣೆ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ತಿಳಿಸಿತ್ತು. ಅಂದಿನ ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಉಸ್ತುವಾರಿ ಸಚಿವರೂ, ಹಿರಿಯರೂ ಆದ ಜಿ.ಟಿ.ದೇವೇಗೌಡರು ಅಧಿಕಾರಿಗಳು ನೀಡಿದ ಮಾಹಿತಿಗೆ ಸಮ್ಮತಿಸಿ, `ಇದೇ ಸೂಕ್ತ ಯೋಜನೆ, ವಿಳಂಬ ಮಾಡದೇ ಮುಂದುವರಿಯಿರಿ. ಜನಕ್ಕೆ ದುರ್ವಾಸನೆ ಯಿಂದ ಕೂಡಲೇ ಮುಕ್ತಿಕೊಡಬೇಕು, ನಾನೂ ನಿಮ್ಮೊಂದಿಗಿದ್ದೇನೆ’ ಎಂದು ಬೆಂಬಲ ವ್ಯಕ್ತಪಡಿಸಿದರು. ಅಲ್ಲದೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರೂ ಸಹಮತ ವ್ಯಕ್ತಪಡಿಸಿದರು.

ಇದಾದ ಬಳಿಕ ಮೂರು ತಿಂಗಳ ಕಾಲ ಸತತವಾಗಿ ನಗರಾಭಿ ವೃದ್ಧಿ ಖಾತೆ ಮತ್ತು ಹಣಕಾಸು ಇಲಾಖೆಗೆ ಅಲೆದು, ಟೆಂಡರ್ ಕರೆದು ಕಾಮಗಾರಿ ಆರಂಭಿಸುವ ಹಂತಕ್ಕೆ ತಂದಿದ್ದೇವೆ. ಇದನ್ನು ಹೊರತಾಗಿ ಇನ್ನೇನು ಮಾಡಲು ಸಾಧ್ಯವಿದೆ ಹೇಳಿ? ಐದೇ ತಿಂಗಳಲ್ಲಿ ಸಮಸ್ಯೆ ಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿ ಸಿದ್ದೆ ತಪ್ಪಾ? ನೀವೇ ಹೇಳಿ?. ದಶಕಗಳಿಂದ ಜನರು ಅನಿವಾರ್ಯ ವಾಗಿ ಸಹಿಸುತ್ತಿರುವ ಸಂಕಷ್ಟವನ್ನು ಪರಿಹರಿಸಲು ಪ್ರಾಮಾಣಿಕ ವಾಗಿ ಶ್ರಮಿಸಿದ್ದರಲ್ಲಿ ಲೋಪವೇನಿದೆ?. ಸಮಸ್ಯೆಯಿಂದ ಜನರನ್ನು ಪಾರು ಮಾಡಬೇಕೆಂಬ ಕಾಳಜಿಯಿಂದ ಹಿರಿಯರಾದ ಜಿ.ಟಿ.ದೇವೇ ಗೌಡರು, ಎಲ್.ನಾಗೇಂದ್ರ, ಮೇಯರ್ ಆದಿಯಾಗಿ ನಗರಪಾಲಿಕೆ ಸದಸ್ಯರು, ವಿ.ಸೋಮಣ್ಣನವರು ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಾದರೆ ಉಳಿದವ ರಿಗಾದ ಸಮಸ್ಯೆಯಾದರೂ ಏನಿತ್ತು?. ಜನರನ್ನು ದಶಕಗಳಿಂದ ಸಹಿಸುತ್ತಿರುವ ದುರ್ವಾಸನೆ ಯಿಂದ ಮುಕ್ತಿಗೊಳಿಸಬೇಕೆಂಬ ಸದುದ್ದೇಶದಿಂದ ಕರೆಯ ಲಾಗಿದ್ದ ಮೂರು ಸಭೆಗಳಲ್ಲಿ ಒಂದರಲ್ಲಾದರೂ ಭಾಗಿಯಾಗ ಬಹುದಿತ್ತಲ್ಲವೇ? ಎಂದು ಸಂಸದ ಪ್ರತಾಪ್‍ಸಿಂಹ್ ಪ್ರಶ್ನಿಸಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂ ಸೀವೆಜ್ ಫಾರ್ಮ್‍ನಲ್ಲಿ ದುರ್ವಾ ಸನೆ ಬೀರುವ ಎರಡೂವರೆ ಲಕ್ಷ ಟನ್ ಕಸದ ಸಮಸ್ಯೆ ನಿರ್ಮೂ ಲನೆ ಕಳೆದ 30-35 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದರೂ ಯಾರಿಂದಲೂ ಪರಿಹಾರ ಕಂಡಿರಲಿಲ್ಲ. ಈ ಹಿಂದಿನ ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣನವರ ಮುಂದಾಳತ್ವದಲ್ಲಿ ಕಳೆದ 5 ತಿಂಗಳಿನಿಂದ ಮಾಡಿದ ಪ್ರಾಮಾಣಿಕ ಹಾಗು ಪಾರದರ್ಶಕ ಪ್ರಯತ್ನ ನಡೆದಿದೆ. ಜನರ ಸಂಕಷ್ಟ ಅರಿತು, ಸೀಯೆಜ್ ಫಾರ್ಮ್‍ಗೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಸಂಬಂಧ ಸಾರ್ವಜನಿಕ ರೊಂದಿಗೆ ಸಮಾಲೋಚಿಸಿ, ಅವರ ಅಭಿಪ್ರಾಯ ಸಂಗ್ರಹಿಸಿದ್ದು, ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ನಾಗ್ಪುರಕ್ಕೆ ನಿಯೋಗ ತೆರಳಿ, ಅಲ್ಲಿನ ವೈಜ್ಞಾನಿಕ ಕ್ರಮವನ್ನು ಪರಿಶೀಲಿಸಿ, ಸಂಪೂರ್ಣ ವಿವರವನ್ನು ಕೆಡಿಪಿ ಸಭೆಯ ಮುಂದಿ ಟ್ಟಿದ್ದು, ಅದಕ್ಕೆ ಜನಪ್ರತಿನಿಧಿಗಳು ಸಹಮತ ವ್ಯಕ್ತಪಡಿಸಿ, ಬೆಂಬ ಲಕ್ಕೆ ನಿಂತಿದ್ದು, ಈ ಎಲ್ಲಾ ಪ್ರಕ್ರಿಯೆಯಲ್ಲಿ ಮೇಯರ್ ಸೇರಿದಂತೆ ನಗರಪಾಲಿಕೆ ಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದು, ಒಟ್ಟಾರೆ ವ್ಯವಸ್ಥಿತವಾಗಿ ಯೋಜನೆ ಕೈಗೆತ್ತಿಕೊಂಡಿದ್ದರ ಬಗ್ಗೆ ಪತ್ರಿಕೆಗಳಲ್ಲಿ ಸಚಿತ್ರ ವರದಿ ಪ್ರಕಟವಾಗಿವೆ. ಎಂದಾದರೂ ಗಮ ನಿಸಬಹುದು ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

ನಾನು ಲಭ್ಯವಿಲ್ಲದ ದಿನಗಳಲ್ಲೇ ಏಕೆ ಸಭೆ ಏರ್ಪಾಡು ಮಾಡಿದರೋ ನನಗೆ ಗೊತ್ತಿಲ್ಲ

ಮೈಸೂರು, ಮೇ 10(ಪಿಎಂ)- ಸೀವೆಜ್ ಫಾರಂನಲ್ಲಿ ನಾಗ್ಪುರ ಮಾದರಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಸಂಬಂಧ ನಾನು ಭಾಗವಹಿ ಸಲು ಸಾಧ್ಯವಾಗದ ದಿನಗಳಲ್ಲೇ ಸಭೆ ನಡೆಸಿರುವುದು ಏಕೆಂದು ನನಗೆ ಗೊತ್ತಿಲ್ಲ. ಕೇವಲ 12 ದಿನಗಳಲ್ಲಿ ಕ್ಷೇತ್ರದ ಶಾಸಕ ನಾದ ನಾನಿಲ್ಲದೆ ಸಭೆ ನಡೆಸಿ, ಕೈಗೊಂಡ ನಿರ್ಣಯದ ಪ್ರತಿಯನ್ನು ನನಗೆ ಕೊಟ್ಟಿದ್ದರೇ, ಆಗಲೇ ಸೀವೇಜ್ ಫಾರ್ಮ್ ನಲ್ಲಿ ಈ ಯೋಜನೆ ಬೇಡ ಎಂದು ಹೇಳುತ್ತಿದ್ದೆ ಎಂದ ಮಾಜಿ ಸಚಿವರೂ ಆದ ಕೆಆರ್ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್, ಈ ಉದ್ದೇಶಿತ ಯೋಜನೆಯನ್ನು ಬೇಕಿದ್ದರೆ ರಾಯನಕೆರೆಯಲ್ಲಿ ಮಾಡಲಿ ಎಂದು ತಿಳಿಸಿದರು.

ನಾಗ್ಪುರ ಮಾದರಿ ಯೋಜನೆ ಸಂಬಂಧದ ಸಭೆಗಳಿಗೆ ಶಾಸಕರಿಗೆ ಆಹ್ವಾನವಿತ್ತು ಎಂಬುದರ ಬಗ್ಗೆ ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಭಾನುವಾರ ಮಾಧ್ಯಮದವರಿಗೆ ಅವರು ಪ್ರತಿಕ್ರಿಯೆ ನೀಡಿದರು.

ಈ ಸಂಬಂಧ ಮೊದಲ ಸಭೆಗೆ ಆಹ್ವಾನಿಸಿದ ವೇಳೆ `ಅಧೀನ ಶಾಸನ ರಚನಾ ಸಮಿತಿ’ ಅಧ್ಯಕ್ಷನಾಗಿ ಸಮಿತಿಯ ಸಭೆಯಲ್ಲಿ ಭಾಗವಹಿಸಬೇಕಿತ್ತು. ಹೀಗಾಗಿ ಅಂದು ಸಭೆ ಮುಂದೂಡಲು ಕೋರಿದ್ದೆ. ಆದರೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಮಾಡುವುದಿಲ್ಲ. ಬದಲಿಗೆ ಚರ್ಚೆ ಮಾಡುತ್ತೇವೆ. ನಂತರದಲ್ಲಿ ಎಲ್ಲಾ ವಿಚಾರವನ್ನು ತಮಗೂ ತಿಳಿಸುತ್ತೇವೆ ಎಂದಿದ್ದರು ಎಂದು ಹೇಳಿದರು.

ಎರಡನೇ ಬಾರಿಯೂ ನಾನು ಮತ್ತೊಂದು ಸಭೆಗೆ ಹೋಗಬೇಕಾದ ದಿನವೇ ಸಭೆ ಕರೆದರು. ಅದು ಏಕೆ ಎಂದು ನನಗೆ ಗೊತ್ತಿಲ್ಲ. ಕೊನೆಯದಾಗಿ ಇವರು ನಿರ್ಣಯ ಕೈಗೊಳ್ಳುವ ದಿನದಂದು ಪ್ರಧಾನಮಂತ್ರಿಗಳು ಬೆಂಗಳೂರು ಭೇಟಿ ನೀಡಿ ಹಿಂತಿರುಗು ತ್ತಿದ್ದರು. ಅವರನ್ನು ಬೀಳ್ಕೊಡುವ ಜವಾಬ್ದಾರಿ ನನಗೆ ನೀಡಿ ಪಾಸ್ ನೀಡಲಾಗಿತ್ತು. ಈ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾನು ತಿಳಿಸಿದ್ದೆ. ಆದರೆ ಕ್ಷೇತ್ರದ ಶಾಸಕರನ್ನು ಏಕೆ ಬಿಟ್ಟು ನಿರ್ಣಯಿಸಿದರೆಂದು ಗೊತ್ತಿಲ್ಲ ಎಂದು ತಿಳಿಸಿದರು.

ಆದಾಗ್ಯೂ ನನ್ನ ಬಿಟ್ಟು ನಿರ್ಣಯ ಮಾಡಿದ್ದರ ಬಗ್ಗೆ ನನಗೆ ಬೇಸರವಿಲ್ಲ. ಅದೇ ನಾಗ್ಪುರ ಮಾದರಿಯಲ್ಲೇ ಮಾಡಲಿ. ಎಷ್ಟಾದರೂ ವೆಚ್ಚ ಮಾಡಿ ಯಾವ ಕಂಪನಿಗಾದರೂ ನೀಡಲಿ. ಆ ಬಗ್ಗೆ ನನ್ನ ಅಭ್ಯಂತರವಿಲ್ಲ. ಆದರೆ ಜನವಸತಿ ಪ್ರದೇಶವಾದ ಕಾರಣ ಸೀವೆಜ್ ಫಾರಂನಲ್ಲಿ ಮಾಡುವುದು ಬೇಡ. ರಾಯನಕೆರೆಯಲ್ಲಿ ಬೇಕಿದ್ದರೆ ಮಾಡಲಿ ಎಂದರು. ನಾಗ್ಪುರದಲ್ಲಿ ಪಾಲಿಕೆ ವ್ಯಾಪ್ತಿಯಿಂದ 10 ಕಿ.ಮೀ. ದೂರದಲ್ಲಿ ಮಾಡಿದ್ದಾರೆ. ಇಲ್ಲೂ ಅದೇ ರೀತಿಯಲ್ಲಿ ರಾಯನಕೆರೆ ಪ್ರದೇಶದಲ್ಲಿ ಮಾಡಲು ಅವಕಾಶವಿದೆ. ಇದನ್ನು ಪ್ರಸ್ತಾಪಿಸಿ ಕೋರಿಕೊಂಡಿ ದ್ದೇನೆಯೇ ಹೊರತು ಬೇರೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ರಾಯನ ಕೆರೆಯಲ್ಲಿ 110 ಎಕರೆ ಜಮೀನು ಸ್ವಾದೀನಪಡಿಸಿಕೊಳ್ಳಲಾಗಿದೆ. ಅಲ್ಲಿ ಜನ ವಸತಿಯೂ ಇಲ್ಲ. ಜೊತೆಗೆ ಜಾಗ ಖಾಲಿಯಿದ್ದು, ಸೀವೆಜ್ ಫಾರಂ ಬದಲು ರಾಯನಕೆರೆಯಲ್ಲಿ ಮಾಡಲಿ ಎಂದರು.

ಪ್ರತಾಪ್ ಸಿಂಹ ಹಾಗೂ ತಾವು ಇಬ್ಬರು ಒಂದೇ ಪಕ್ಷದ ಮುಖಂ ಡರು ಎಂದು ಮಾಧ್ಯಮದವರು ಹೇಳುತ್ತಿದ್ದಂತೆ, ಇದು ಜನಸಾಮಾ ನ್ಯರಿಗೆ ಸಂಬಂಧಿಸಿದ ವಿಚಾರ. ಜೈ ಎಲೆಕ್ಟ್ರಿಕಲ್ಸ್ ಕೈಗಾರಿಕೆಯಲ್ಲಿ ಕಾರ್ಮಿಕನಾಗಿದ್ದ ನನ್ನನ್ನು ಕೆಆರ್ ಕ್ಷೇತ್ರದ ಜನತೆ ಆಯ್ಕೆ ಮಾಡಿ ದ್ದಾರೆ. ಅವರ ಋಣ ತೀರಿಸುವ ಹೊಣೆ ನನ್ನ ಮೇಲಿದೆ. ಜನತೆಯ ಋಣ ತೀರಿಸಲೆಂದೇ ಈ ವಿಚಾರವಾಗಿ ಅಂದಿನಿಂ ದಲೂ ಹೋರಾಟ ಮಾಡುತ್ತಿದ್ದಾನೆ. ನನಗೆ ಯಾರ ಬಗ್ಗೆಯೂ ಬೇಸರವಾಗಲಿ, ಭಿನ್ನಾಭಿಪ್ರಾಯವಾಗಲಿ ಇಲ್ಲ ಎಂದು ತಿಳಿಸಿದರು.

Translate »