ನಾಳೆ ದೆಹಲಿಯಿಂದ ವಿಶೇಷ ರೈಲು ಸಂಚಾರ
ಮೈಸೂರು

ನಾಳೆ ದೆಹಲಿಯಿಂದ ವಿಶೇಷ ರೈಲು ಸಂಚಾರ

May 11, 2020
  • ಬೆಂಗಳೂರು, ಚೆನ್ನೈ, ತಿರುವನಂತಪುರ ಸೇರಿ ವಿವಿಧ ರಾಜ್ಯಗಳ ರಾಜಧಾನಿಗೆ 15 ವಿಶೇಷ ಶ್ರಮಿಕ್ ರೈಲುಗಳ ಸಂಚಾರ
  • ಇಂದು ಸಂಜೆ 4ರಿಂದ ಆನ್‍ಲೈನ್‍ನಲ್ಲೇ ಟಿಕೆಟ್ ಖರೀದಿಗೆ ಅವಕಾಶ, ಪ್ರಯಾಣಕ್ಕೆ ಮುನ್ನ ಸ್ಕ್ರೀನಿಂಗ್

ಮೈಸೂರು, ಮೇ 10- ಭಾರತೀಯ ರೈಲ್ವೆಯು ಮೇ 12ರಿಂದ 15 ವಿಶೇಷ ರೈಲು ಗಳ ಸಂಚಾರ ಆರಂಭಿಸಲಿದ್ದು, ಮೊದಲ ಹಂತದಲ್ಲಿ 15 ರೈಲುಗಳು ದೆಹಲಿಯಿಂದ ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮುಂಬೈ ಸೆಂಟ್ರಲ್, ಭುವನೇಶ್ವರ, ರಾಂಚಿ, ಪಟನಾ, ಹೌರಾ, ದಿಬ್ರೂಗಢ, ಮಷಾಲ್, ಅಗರ್ತಲಾ, ಸಿಕಂದರಾಬಾದ್, ಬಿಲಾಸ್ ಪುರಗೆ ಸಂಚರಿಸಲಿವೆ. ಎಲ್ಲಾ 15 ರೈಲುಗಳೂ ಮೇ 12ರಿಂದ ನವದೆಹಲಿಯ ಬೇಸ್ ಸ್ಟೇಷನ್‍ನಿಂದಲೇ ಪ್ರಯಾಣ ಆರಂಭಿಸಲಿವೆ. ಈ ವಿಶೇಷ
ರೈಲುಗಳಲ್ಲಿ ಪ್ರಯಾಣಿಸಲು ಮೇ 11ರ ಸಂಜೆ 4ರಿಂದ ಐಆರ್ ಸಿಟಿಸಿ (http://www.irctc.co.in/) ವೆಬ್‍ಸೈಟ್‍ನಲ್ಲಿ ಮಾತ್ರವೇ ಟಿಕೆಟ್ ಕಾಯ್ದಿರಿಸಬಹುದಾಗಿದೆ. ರೈಲು ನಿಲ್ದಾಣದಲ್ಲಿನ ಟಿಕೆಟ್ ಕೌಂಟರ್‍ಗಳು ಬಂದ್ ಆಗಿರಲಿವೆ. ಪ್ಲಾಟ್‍ಫಾರಂ ಟಿಕೆಟ್ ಸಹ ಲಭ್ಯವಿರುವುದಿಲ್ಲ. ಅಧಿಕೃತ ಪ್ರಯಾಣದ ಟಿಕೆಟ್ ಹೊಂದಿರು ವವರಿಗೆ ಮಾತ್ರವೇ ನಿಲ್ದಾಣ ಪ್ರವೇಶಕ್ಕೆ ಅವಕಾಶವಿರಲಿದೆ.

ಪ್ರಯಾಣಿಕರು ಮುಖಕ್ಕೆ ಮಾಸ್ಕ್ ಧರಿಸಿರುವುದು, ರೈಲು ನಿಲ್ದಾಣದಲ್ಲಿ ಆರೋಗ್ಯ ಪರೀಕ್ಷೆಗೆ (ಸ್ಕ್ರೀನಿಂಗ್) ಒಳಗಾಗುವುದು ಕಡ್ಡಾಯ. ಕೋವಿಡ್-19 ರೋಗ ಲಕ್ಷಣವಿಲ್ಲದವರಿಗೆ ಮಾತ್ರವೇ ರೈಲು ಏರಲು ಅವಕಾಶ ನೀಡಲಾಗುವುದು ಎಂದು ಭಾರತೀಯ ರೈಲ್ವೆ ಪ್ರಕಟಣೆ ತಿಳಿಸಿದೆ. ಲಾಕ್‍ಡೌನ್‍ನಿಂದಾಗಿ ದೇಶದ ವಿವಿಧೆಡೆ ಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ತಲುಪಿಸಲೆಂದೇ 300 ಶ್ರಮಿಕ್ ವಿಶೇಷ ರೈಲುಗಳು ಸಂಚರಿಸು ತ್ತಿದ್ದು, ಮುಂದಿನ ದಿನಗಳಲ್ಲಿ ಹೊಸ ಮಾರ್ಗಗಳಲ್ಲಿ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಇದು ಹೆಚ್ಚುವರಿ ರೈಲು ಬೋಗಿಗಳ ಲಭ್ಯತೆಯನ್ನು ಆಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Translate »