ಯೋಜನೆ ಜಾರಿಗೂ ಮುನ್ನ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕು
ಮೈಸೂರು

ಯೋಜನೆ ಜಾರಿಗೂ ಮುನ್ನ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕು

May 9, 2020
  • ಶಾಸಕ ರಾಮದಾಸರ ವಾದ
  • ತ್ಯಾಜ್ಯ ವಿಲೇವಾರಿಗೆ ತಾವು ನಡೆಸಿದ ಹೋರಾಟ ಜನರಿಗೆ ತಿಳಿದಿದೆ

ಮೈಸೂರು, ಮೇ 8(ಎಂಟಿವೈ)- ವಿದ್ಯಾ ರಣ್ಯಂಪುರಂನಲ್ಲಿರುವ ಸೀವೆಜ್ ಫಾರಂನಲ್ಲಿ ಕಸದ ರಾಶಿಯಿಂದ ಸ್ಥಳೀಯ ರಿಗೆ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಲು ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಪಾಲಿಕೆ ಮುಡಾ ವಿರುದ್ದ ಕೇಸ್ ಹಾಕಿದ್ದೇನೆ ಎಂದು ಶಾಸಕ ಎಸ್.ಎ. ರಾಮ ದಾಸ್ ಸ್ಪಷ್ಟಪಡಿಸಿದ್ದಾರೆ.

ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ನರಗಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯಾರೊಂದಿಗೂ ಮಾತಿನ ಚಕಮಕಿ ನಡೆಸಿಲ್ಲ. ಬದಲಾಗಿ ಸಚಿವರಿಗೆ ಕಸದ ಸಮಸ್ಯೆಯಿಂದ ಸ್ಥಳೀಯ ಜನರಿಗೆ ಆಗುತ್ತಿರುವ ತೊಂದರೆ, ಆ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದೇನೆ ಎಂದರು.

ಸೀವೆಜ್ ಫಾರಂನಲ್ಲಿನ ಕಸದ ರಾಶಿಯಿಂದಾಗು ತ್ತಿರುವ ಸಮಸ್ಯೆ ಬಗೆಹರಿಸಲು ಹಲವು ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಪಾಲಿಕೆ ಹಾಗೂ ಮುಡಾ ವಿರುದ್ಧ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕೇಸ್ ದಾಖಲಿಸಿ ದ್ದೇನೆ. ಮೈಸೂರು ನಗರ ಪಾಲಿಕೆ ಆಯುಕ್ತರಾಗಿದ್ದ ಜಗದೀಶ್ ಅವರು ಕಸದ ಸಮಸ್ಯೆ ಬಗೆಹರಿಸುವು ದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ. ನಾನು ಮಾಡಿದ ಹೋರಾಟವನ್ನು ಮೈಸೂರಿನ ಜನತೆ ಗಮನಿ ಸಿದ್ದಾರೆ ಎಂದು ಹೇಳಿದರು.

ಕಸ ವಿಲೇವಾರಿಗೆ ಕಳೆದ ಡಿ.29ರಂದು ನಾಗ್ಪುರಕ್ಕೆ ಹೋಗಿ ಬಂದಿದ್ದೀವಿ ಎಂದು ಹೇಳುತ್ತಾರೆ. ಕ್ಷೇತ್ರವನ್ನು ಪ್ರತಿ ನಿಧಿಸುವ ಶಾಸಕನಾಗಿ ನನ್ನ ಗಮನಕ್ಕೆ ಯಾವುದನ್ನೂ ತಂದಿಲ್ಲ. ಹೊಸ ರೀತಿ ಕಸ ವಿಲೇವಾರಿ ಮಾಡಬೇಕಾದರೆ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಬೇಕು. ಯಾವುದೇ ಪ್ರಕ್ರಿಯೆ ಮಾಡದೇ ಯೋಜನೆ ಅನುಷ್ಠಾನ ಗೊಳಿಸಲು ಸಾಧ್ಯವಾಗಲ್ಲ. ಏನು ನಡೆಯುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ ಎಂದು ಅಸಮಾ ದಾನ ವ್ಯಕ್ತಪಡಿಸಿದರು.

ಸೀವೆಜ್ ಫಾರಂನಲ್ಲಿನ ಕಸದ ಸಮಸ್ಯೆ ನಿವಾರಣೆಗೆ ನಿರಂತರವಾಗಿ ಕೆಲಸ ಮಾಡಿ ಕೊಂಡು ಬಂದ್ದಿದ್ದೇನೆ. ಸೀವೆಜ್ ಫಾರಂನಲ್ಲಿ ಕಸದ ಒತ್ತಡ ನಿವಾರಿಸಲು, ರಾಯನಕೆರೆಯಲ್ಲಿ 110 ಎಕರೆ ಭೂಮಿ ಖರೀದಿ ಮಾಡಲಾಗಿದೆ. 85 ಲಕ್ಷ ಖರ್ಚು ಮಾಡಿ ಕಸದ ರಾಶಿಗೆ ಕರ್ಟನ್ ಅಳವಡಿಸ ಲಾಗಿದೆ. ಈಗಾಗಲೇ 7.5 ಲಕ್ಷ ಟನ್ ಕಸವನ್ನು ಲ್ಯಾಂಡ್ ಫಿಲ್ಲಿಂಗ್ ಮಾಡಿ, ಅದರ ಮೇಲೆ 5 ಸಾವಿರ ಗಿಡ ನೆಡಲಾಗಿದೆ. ಆದರೂ ರಾಯನಕೆರೆ ಪ್ಲಾಂಟ್‍ಗೆ ಕಸ ಸಾಗಿಸದೇ ಮತ್ತೆ ಸೀವೆಜ್ ಫಾರಂಗೆ ಕಸ ತರುತ್ತಿದ್ದ ಹಿನ್ನೆಲೆಯಲ್ಲಿ ಹೋರಾಟ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

Translate »