ಪುನೀತ್ ರಾಜ್‌ಕುಮಾರ್ ಇನ್ನಿಲ್ಲ:ಶುಕ್ರವಾರ ಬೆಳಗ್ಗೆ ಜಿಮ್‌ನಲ್ಲಿ ವರ್ಕೌಟ್ ಮಾಡುವ ವೇಳೆ ಹೃದಯಾಘಾತ
ಮೈಸೂರು

ಪುನೀತ್ ರಾಜ್‌ಕುಮಾರ್ ಇನ್ನಿಲ್ಲ:ಶುಕ್ರವಾರ ಬೆಳಗ್ಗೆ ಜಿಮ್‌ನಲ್ಲಿ ವರ್ಕೌಟ್ ಮಾಡುವ ವೇಳೆ ಹೃದಯಾಘಾತ

October 30, 2021

ಬೆಂಗಳೂರು, ಅ. ೨೯- ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಶುಕ್ರ ವಾರ ಬೆಳಗ್ಗೆ ಸದಾಶಿವನಗರದ ತಮ್ಮ ನಿವಾಸದಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬೆಳಗ್ಗೆ ವರ್ಕೌಟ್ ನಡೆಸುತ್ತಿದ್ದ ವೇಳೆ ಅವರಿಗೆ ಎದೆ ನೋವು ಕಾಣ ಸಿ ಕೊಂಡಿದ್ದು, ಕುಟುಂಬ ವೈದ್ಯರಾದ ಡಾ.ರಮಣರಾವ್ ಅವರ ಕ್ಲಿನಿಕ್ ನಲ್ಲಿ ಇಸಿಜಿ ಮಾಡಿಸಿದಾಗ ಅವರಿಗೆ ಹೃದಯಾಘಾತವಾಗಿರುವುದು ಕಂಡುಬAದಿದೆ. ವೈದ್ಯರ ಸಲಹೆ ಮೇರೆಗೆ ಬೆಳಗ್ಗೆ ೧೧.೩೦ಕ್ಕೆ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಕರೆತರುವ ವೇಳೆಗೆ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಉಳಿಸಿಕೊಳ್ಳಲು ಅಂತಿಮ ಹಂತದ ಎಲ್ಲಾ ಚಿಕಿತ್ಸೆಗಳನ್ನು ಖ್ಯಾತ ವೈದ್ಯರಿಂದ ನೀಡಲಾಗುತ್ತಿದೆ ಎಂದು ಮಧ್ಯಾಹ್ನ ೧೨ ಗಂಟೆ ಸುಮಾ ರಿನಲ್ಲಿ ವಿಕ್ರಂ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಪುನೀತ್‌ರಾಜ್ ಕುಮಾರ್ ಹೃದಯಾಘಾತ ದಿಂದ ಆಸ್ಪತ್ರೆಗೆ ದಾಖಲಾಗಿ ರುವ ವಿಷಯ ತಿಳಿಯುತ್ತಿ ದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ವಿ.ಸೋಮಣ್ಣ ಸೇರಿದಂತೆ ರಾಜಕೀಯ ಮುಖಂಡರು ಆಸ್ಪತ್ರೆಗೆ ಧಾವಿಸಿ ದರು. ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಆಸ್ಪತ್ರೆಗೆ ಬಂದರು. ಆಸ್ಪತ್ರೆಯಲ್ಲಿ

ವೈದ್ಯರು ಹಾಗೂ ಶಿವರಾಜ್‌ಕುಮಾರ್ ಮುಂತಾದವರ ಜೊತೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದರು. ಮಧ್ಯಾಹ್ನ ೨.೩೦ರ ವೇಳೆಗೆ ಕಂದಾಯ ಸಚಿವ ಆರ್.ಅಶೋಕ್, ವಿಕ್ರಮ್ ಆಸ್ಪತ್ರೆ ವೈದ್ಯರ ಸಮ್ಮುಖದಲ್ಲಿ ಪುನೀತ್‌ರಾಜ್‌ಕುಮಾರ್ ನಿಧನರಾಗಿರುವ ಬಗ್ಗೆ ಅಧಿಕೃತ ವಾಗಿ ಘೋಷಿಸಿದರು. ಅವರ ಕುಟುಂಬದವರ ಜೊತೆ ಚರ್ಚಿಸಿ ಅಂತ್ಯ ಕ್ರಿಯೆ ಬಗ್ಗೆ ತೀರ್ಮಾನಿಸಲಾಗುವುದು ಎಂದ ಅವರು, ಸಕಲ ಸರ್ಕಾರಿ ಗೌರವ ಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.

ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅಶೋಕ್ ಘೋಷಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಚಿತ್ರರಂಗದ ಹಲವಾರು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಸಂಜೆ ವೇಳೆಗೆ ಸದಾಶಿವನಗರದಲ್ಲಿರುವ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಪಾರ್ಥಿವ ಶರೀರವನ್ನು ತಂದು ಕೆಲ ವಿಧಿವಿಧಾನಗಳನ್ನು ಪೂರೈಸಿದ ನಂತರ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.

ಸದಾಶಿವನಗರ ನಿವಾಸಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಚಿತ್ರರಂಗದ ಹಲವಾರು ಗಣ್ಯರು ಭೇಟಿ ನೀಡಿ ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆದರು. ಬೆಳಗ್ಗೆ ಪುನೀತ್‌ರಾಜ್‌ಕುಮಾರ್ ಅವರಿಗೆ ಹೃದಯಾಘಾತವಾಗಿದೆ ಎಂದು ವಿಷಯ ತಿಳಿಯುತ್ತಿದ್ದಂತೆಯೇ ಅವರ ಸಾವಿರಾರು ಅಭಿಮಾನಿಗಳು ವಿಕ್ರಮ್ ಆಸ್ಪತ್ರೆಯ ಮುಂದೆ ಜಮಾಯಿಸಿದರು. ಆಸ್ಪತ್ರೆ ಸುತ್ತಮುತ್ತಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಯಿತು. ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ಸಂದೇಶ ರವಾನಿಸಿ, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಗಳನ್ನು ಪೊಲೀಸರು ತೀವ್ರ ನಿಗಾ ವಹಿಸಿದ್ದರು, ವಿಕ್ರಮ್ ಆಸ್ಪತ್ರೆ ಮುಂದೆ ಹಾಗೂ ಸದಾಶಿವನಗರದಲ್ಲಿರುವ ಪುನೀತ್‌ರಾಜ್‌ಕುಮಾರ್ ಮನೆಯ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪುನೀತ್‌ರಾಜ್‌ಕುಮಾರ್ ನಿಧನರಾಗಿರವುದು ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದಂತೆಯೇ ಬೆಂಗಳೂರು ನಗರ ಜಿಲ್ಲಾಡಳಿತದಿಂದ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಯಿತು. ಕ್ರೀಡಾಂಗಣದಲ್ಲಿ ಅಭಿಮಾನಿಗಳು ಅಂತಿಮ ದರ್ಶನ ಪಡೆಯಲು ಅನುಕೂಲವಾಗುವಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಯಿತು. ಕ್ರೀಡಾಂಗಣದ ಸುತ್ತಾ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

`ಅಪ್ಪು’ ಜೀವನ ಪಾಠ
ಇರೋದ್ ಒಂದ್ ಜೀವನ
ಹಿಂದೇನಾಯ್ತು ನೆನಪಿಲ್ಲ
ಮುಂದೇನಾಗುತ್ತೋ ಗೊತ್ತಿಲ್ಲ
ನಾನ್ ಏನ್ ತಿನ್ತೀನಿ
ಎಲ್ಲಿ ಮಲಗ್ತೀನಿ
ಎಲ್ಲಾ ರ‍್ದುಬಿಟ್ಟಿದ್ದಾನೆ ವಿಧಿ ನಮ್ದೇನಿಲ್ಲಾ……

ಪುನೀತ್ ಕೇವಲ ನಾಯಕ ಮಾತ್ರವಲ್ಲ ‘ನಾಯಕತ್ವ’ ಇದ್ದ ನಟ: ಸಿಎಂ ಬೊಮ್ಮಾಯಿ
ಬೆಂಗಳೂರು: ಸ್ಯಾಂಡಲ್ ವುಡ್ ರಾಜ ಕುಮಾರ, ಯುವರತ್ನ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದಿಂದ ನಮಗೆಲ್ಲರಿಗೂ ಆಘಾತವಾಗಿದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಮೇರು ಸಾಧನೆ ಮಾಡಿದ ವ್ಯಕ್ತಿ ಪುನೀತ್ ರಾಜ್‌ಕುಮಾರ್. ಇಂತಹ ಮೇರು ನಟ ಹಠಾತ್ ನಮ್ಮಿಂದ ಅಗಲಿ ಹೋದಾಗ ದುಃಖವಾಗುತ್ತದೆ. ಈ ಸಂದರ್ಭದಲ್ಲಿ ಎಲ್ಲರೂ ಸಂಯಮದಿAದ ವರ್ತಿಸಿ ಸಹಕಾರ ನೀಡಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸರ್ಕಾರ, ಅಂತಿಮ ದರ್ಶನಕ್ಕೆ, ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ಮಾಡುತ್ತಿದೆ. ಅವರ ಕುಟುಂಬದವರ ಜೊತೆಗೂ ಇರುತ್ತದೆ. ಅವರ ಕುಟುಂಬದ ಭಾವನೆಗಳಿಗೆ ಗೌರವ ಕೊಟ್ಟು ಅವರು ಹೇಳಿದ ರೀತಿ, ಹೇಳಿದಲ್ಲಿಯೇ ಅಂತ್ಯಕ್ರಿಯೆ ಮಾಡಲಾಗುವುದು ಎಂದರು.

ಇAದು ಮತ್ತು ನಾಳೆ ಅಂತಿಮ ದರ್ಶನಕ್ಕೆ ವ್ಯವಸ್ಥೆ: ನಟ ಪುನೀತ್ ರಾಜ್‌ಕುಮಾರ್ ಅವರ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ. ಇಂದು ಸಾಯಂಕಾಲದಿAದ ನಾಳೆ ದಿನವಿಡೀ ಅವರನ್ನು ಅಂತಿಮವಾಗಿ ನೋಡಲಿಚ್ಛಿಸುವವರು ನೋಡಬಹುದು.
ಅವರನ್ನು ಪ್ರೀತಿಯಿಂದ ಗೌರವ ಯುತವಾಗಿ ಬೀಳ್ಕೊಡೋಣ ಎಂದರು.

ಸಿಎA ಭೇಟಿಗೆ ನಿಗದಿಯಾಗಿದ್ದ ದಿನ: ನವೆಂಬರ್ ೧ರಂದು ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ರಾಜ್‌ಕುಮಾರ್ ಅವರ ವೆಬ್‌ಸೈಟ್ ಉದ್ಘಾಟನೆ ಮಾಡಲು ಸಿಎಂ ಜೊತೆಗೆ ಭೇಟಿ ನಿಗದಿಯಾಗಿತ್ತು. ಅದರಂತೆ ನಿನ್ನೆ ಫೋನ್ ಮಾಡಿ ಪುನೀತ್ ಅವರಲ್ಲಿ ಸಿಎಂ ಮಾತನಾಡಿದ್ದರು. ಇಂದು ಭೇಟಿ ಮಾಡಿ ಮಾತನಾಡುವುದೆಂದು ಸಮಯ ಕೂಡ ನಿಗದಿಯಾಗಿತ್ತು. ಆದರೆ ವಿಧಿಯೆಷ್ಟು ಕ್ರೂರ, ಇಂದು ಅವರು ನಮ್ಮ ಜೊತೆ ಇಲ್ಲ ಎಂದು ಬೇಸರಪಟ್ಟುಕೊಂಡರು. ಡಾ.ರಾಜ್‌ಕುಮಾರ್ ಅವರ ಕುಟುಂಬದ ಜೊತೆ ನನಗೆ ಹಿಂದಿನಿAದಲೂ ಒಡನಾಟವಿತ್ತು. ಪುನೀತ್ ರಾಜ್‌ಕುಮಾರ್ ಅವರು ಯುವ ಜನಾಂಗಕ್ಕೆ ಮಾದರಿಯಾಗಿದ್ದು, ಸರಳ, ಸಂಭಾವಿತ ಮನುಷ್ಯ, ಅವರು ಚಿತ್ರರಂಗದಲ್ಲಿ ಇನ್ನೂ ಎತ್ತರಕ್ಕೆ ಹೋಗುವವರಿದ್ದರು. ಒಬ್ಬ ಪ್ರತಿಭಾನ್ವಿತ ನಟನಾಗಿ ಸರ್ಕಾರದ ಅನೇಕ ಕಾರ್ಯಕ್ರಮಗಳಲ್ಲಿ ಜೊತೆಯಾಗಿದ್ದರು, ಅವರು ಕೇವಲ ನಾಯಕ ಮಾತ್ರವಲ್ಲ, ನಾಯಕತ್ವ ಇರುವ ನಟ, ಡಾ.ರಾಜ್ ಕುಮಾರ್ ಅವರ ನಡೆ-ನುಡಿಗಳನ್ನು ಮೈಗೂಡಿಸಿ ಕೊಂಡಿದ್ದವರು, ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು ಎಂದು ಸಿಎಂ ಹೇಳಿ ಭಾವುಕರಾದರು.

Translate »