ಜಾನಪದ ಕಲಾವಿದರಿಗೆ ಶೀಘ್ರ  ಬಾಕಿ ಮಾಸಾಶನ ಬಿಡುಗಡೆ
ಮೈಸೂರು

ಜಾನಪದ ಕಲಾವಿದರಿಗೆ ಶೀಘ್ರ ಬಾಕಿ ಮಾಸಾಶನ ಬಿಡುಗಡೆ

September 21, 2021

ಮೈಸೂರು,ಸೆ.20(ಪಿಎಂ)- ಮಾಸಾಶನ ಬಾಕಿ ಇರುವ ಜಾನಪದ ಕಲಾವಿದರ ವಿವರಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ನೀಡಲಾಗಿದೆ. ಶೀಘ್ರದಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ತಿಳಿಸಿದರು.
ನಗರದಲ್ಲಿ ಇತ್ತೀಚೆಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲೆಗಳ ಬಗ್ಗೆ ವಿಶೇಷ ಆಸಕ್ತಿಯುಳ್ಳ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ.ಸುನೀಲ್‍ಕುಮಾರ್, ಶೀಘ್ರ ಮಾಸಾಶನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದರು. 300 ಲೈಂಗಿಕ ಅಲ್ಪಸಂಖ್ಯಾತರಿಗೆ ಜನಪದ ಕಲೆ ತರಬೇತಿ, ಜನಪದ ಕಲೆಗಳಿಗೆ ಸಂಬಂಧಿಸಿದಂತೆ ಅಖಿಲ ಭಾರತ ಮಹಿಳಾ ಸಮಾವೇಶ ಮಾಡಬೇಕೆಂಬ ಉದ್ದೇಶವಿತ್ತು. ಆದರೆ ಕೋವಿಡ್ ಕಾರಣಕ್ಕೆ ಅನುದಾನ ಕೊರತೆ ಎದುರಾದ ಹಿನ್ನೆಲೆಯಲ್ಲಿ ಇದು ಸದ್ಯ ಸಾಧ್ಯವಾಗಿಲ್ಲ ಎಂದು ಹೇಳಿದರು.

ಅಕಾಡೆಮಿಗೆ ನಾನು ಅಧ್ಯಕ್ಷೆಯಾದಾಗ, ಕೋಟಿ ರೂ. ಅನುದಾನ ದೊರೆತಿತ್ತು. ಹಿಂದಿನ ವರ್ಷ 80 ಲಕ್ಷ ರೂ. ಲಭ್ಯವಾಗಿದ್ದರೆ, ಈ ಬಾರಿ 60 ಲಕ್ಷ ರೂ. ದೊರೆತಿದೆ. ಅಕಾಡೆಮಿಯ ಖರ್ಚಿಗೆ 20 ಲಕ್ಷ ರೂ., ವಾರ್ಷಿಕ ಪ್ರಶಸ್ತಿಗಳಿಗೆ 20 ಲಕ್ಷ ರೂ. ವೆಚ್ಚವಾಗುತ್ತಿದೆ. ಉಳಿದ 20 ಲಕ್ಷ ರೂ.ನಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಈ ಹಣ ಯಾವುದಕ್ಕೂ ಸಾಲು ವುದಿಲ್ಲ ಎಂದರು. ಉಡುಪಿ ಜಿಲ್ಲೆಯಲ್ಲಿ ಆಚರಣೆಯಲ್ಲಿರುವ `ದೈವಾರಾಧನೆ’ಯನ್ನು ಜಾನಪದ ಪ್ರಕಾರಕ್ಕೆ ಸೇರಿಸಬೇಕು. ಆ ಮೂಲಕ ಈ ಕಲಾವಿದರಿಗೆ ಮಾಸಾಶನ ನೀಡಬೇಕೆಂದು ಅರ್ಹ ಕಲಾವಿದರ ಪಟ್ಟಿಯನ್ನು ಅಕಾಡೆಮಿಗೆ ಕಳುಹಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಇಲಾಖೆಯ ಸಚಿವ ವಿ.ಸುನೀಲ್‍ಕುಮಾರ್ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

Translate »