ವಿವಿಧ ಬೇಡಿಕೆ ಈಡೇರಿಕೆಗೆ  ಆಗ್ರಹಿಸಿ ವಿಕಲಚೇತನರ ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಕಲಚೇತನರ ಪ್ರತಿಭಟನೆ

September 21, 2021

ಮೈಸೂರು, ಸೆ.20(ಆರ್‍ಕೆಬಿ)- 2016 ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿ ರುವ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯಿದೆ ಕರ್ನಾಟಕದಲ್ಲೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು. ವಿಕಲಚೇತನರಿಗಾಗಿಯೇ ಪ್ರತ್ಯೇಕ ಸಚಿ ವಾಲಯ ಸ್ಥಾಪಿಸಬೇಕು. ವಿಕಲಚೇತನ ರಿಗೆ ಮೀಸಲಿಟ್ಟ ಶೇ.5 ಅನುದಾನ ಸ್ಥಳೀಯ ಸಂಸ್ಥೆಗಳು ಹಾಗೂ ನಿಗಮ ಮಂಡಳಿ ಗಳು ಮತ್ತು ವಿವಿಧ ಇಲಾಖೆಗಳಿಂದ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಈ ಅನುದಾನವನ್ನು ವಿಕಲಚೇತನ ಅರ್ಹ ಫಲಾನುಭವಿಗಳಿಗಾಗಿ ಬಳಸಲು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂಬಿ ತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ವಿಕಲಚೇತನ ವ್ಯಕ್ತಿಗಳ ಹಕ್ಕು ಗಳ ಹೋರಾಟ ಸಮಿತಿ ವತಿಯಿಂದ ಮೈಸೂರಿನ ತಿಲಕ್‍ನಗರದಲ್ಲಿರುವ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

20ಕ್ಕೂ ಹೆಚ್ಚು ವಿಕಲಚೇತನರು ಇತ್ತೀ ಚೆಗೆ ನಡೆದ ವಿಕಲಚೇತನರ ಕುಂದು ಕೊರತೆ ಸಭೆಯ ಕುರಿತಂತೆ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಗಮನ ಸೆಳೆಯುವ ಉದ್ದೇಶದಿಂದ ಪ್ರತಿಭಟನೆ ನಡೆಸಿದ್ದಾಗಿ ಹೋರಾಟ ಸಮಿತಿ ಪ್ರಧಾನ ಕಾರ್ಯ ದರ್ಶಿ ಮಹೇಶ್ ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ವಿವಿಧ ವಲಯಗಳಿಗೆ ನೀಡಿದ ಆರ್ಥಿಕ ಪ್ಯಾಕೇಜ್ ನಂತೆಯೇ ಕನಿಷ್ಠ ತಲಾ 10,000 ರೂ. ಅರ್ಹ ವಿಕಲಚೇತನ ವ್ಯಕ್ತಿಗಳಿಗೆ ನೀಡ ಬೇಕು. ಒಂದು ವರ್ಷದಿಂದ ನೀಡದೇ ಬಾಕಿ ಉಳಿಸಿರುವ ವಿಕಲಚೇತನರ ಮಾಸಿಕ ನಿರ್ವಹಣಾ ಭತ್ಯೆ ನೀಡಿ, ನಿರಂ ತರ ಮಾಸಾಶನ ಬರುವಂತೆ ಆದೇಶಿಸ ಬೇಕು. ರಾಜ್ಯದ ಶಾಸಕರಿಗೆ ನೀಡುವ ಅನುದಾನದಲ್ಲಿ ವಾರ್ಷಿಕ 10 ಲಕ್ಷ ರೂ. ವಿಕಲಚೇತನರ ಕ್ಷೇಮಾಭಿವೃದ್ದಿಗೆ ಮೀಸ ಲಿದ್ದು, ಈ ಹಣವನ್ನು ವಿಕಲಚೇತನರ ಪುನರ್ವಸತಿ ಕಾರ್ಯಕ್ರಮಗಳಿಗೆ ಬಳಕೆ ಮಾಡಲು ಆದೇಶಿಸಬೇಕು ಎಂದು ಆಗ್ರ ಹಿಸಿ, ಮನವಿ ಪತ್ರವನ್ನು ವಿಕಲಚೇತನ ಕಲ್ಯಾಣ ಅಧಿಕಾರಿ ಮಾಲಿನಿ ಅವರಿಗೆ ಸಲ್ಲಿಸಿದರು.

Translate »