ಸೆ.27ರ ಭಾರತ್ ಬಂದ್ ಯಶಸ್ಸಿಗೆ ಕರೆ
ಮೈಸೂರು

ಸೆ.27ರ ಭಾರತ್ ಬಂದ್ ಯಶಸ್ಸಿಗೆ ಕರೆ

September 21, 2021

ಮೈಸೂರು, ಸೆ.20 (ಆರ್‍ಕೆಬಿ)- ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಸೆ.27ರ ಭಾರತ್ ಬಂದ್ ಯಶಸ್ಸಿಗೆ ಸಹಕರಿಸುವಂತೆ ರೈತ, ಕಾರ್ಮಿಕ, ದಲಿತ ಸಂಯುಕ್ತ ಹೋರಾಟ ಸಮಿತಿ, ಮೈಸೂರು ನಗರ ಮತ್ತು ಜಿಲ್ಲೆಯ ಜನರಲ್ಲಿ ಮನವಿ ಮಾಡಿದೆ.

ಸಂಯುಕ್ತ ಹೋರಾಟ ಸಮಿತಿಯ ಮುಖಂಡರಾದ ಪ.ಮಲ್ಲೇಶ್, ಸ್ವರಾಜ್ ಇಂಡಿಯಾದ ಜಿಲ್ಲಾಧ್ಯಕ್ಷ ಉಗ್ರನರಸಿಂಹೇ ಗೌಡ, ಎಐಟಿಯುಸಿ ಜಿಲ್ಲಾಧ್ಯಕ್ಷ ಜಗ ದೀಶ್ ಸೂರ್ಯ, ಐಎನ್‍ಟಿಯುಸಿ ಜಿಲ್ಲಾ ಧ್ಯಕ್ಷ ಜಿ.ಜಯರಾಂ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವದಾಸ್, ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹೊಸಕೋಟೆ ಬಸವರಾಜು ಇನ್ನಿತರರು ಸೋಮವಾರ ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಭಾರತ್ ಬಂದ್ ನಡೆಸಲಾಗುತ್ತಿರುವ ಬಗ್ಗೆ ತಿಳಿಸಿದರು.

ರೈತ ವಿರೋಧಿ, ಜನ ವಿರೋಧಿ ಮೂರು ಕಾಯಿದೆಗಳನ್ನು ರದ್ದುಪಡಿಸಿ, ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸುವ ಕಾಯಿದೆ ಜಾರಿಗೆ ತರಬೇಕು. ವಿದ್ಯುಚ್ಛಕ್ತಿ ತಿದ್ದುಪಡಿ ವಿಧೇಯಕ 2020 ವಾಪಸ್ ಪಡೆಯಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು. ನಗದೀಕರಣ ಯೋಜನೆಯ ಹೆಸರಿನಲ್ಲಿ ಸಾರ್ವ ಜನಿಕ ಸಂಸ್ಥೆಗಳ ಮಾರಾಟ ಒಪ್ಪುವುದಿಲ್ಲ. ಕಾರ್ಮಿಕ ಕಾಯಿದೆಗಳನ್ನು ದುರ್ಬಲಗೊಳಿ ಸುವ ಕಾರ್ಮಿಕ ಸಂಹಿತೆ ಜಾರಿ ಬೇಡ, ಶಿಕ್ಷಣವನ್ನು ಮತ್ತಷ್ಟು ವ್ಯಾಪಾರೀಕರಣಗೊಳಿ ಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ತರಾತುರಿ ಜಾರಿ ನಿಲ್ಲಿಸಬೇಕು. ಕರ್ನಾಟಕ ದಲ್ಲಿ ಹಾಲು ಉತ್ಪಾದಕರಿಗೆ ಮಾರಕವಾದ ಹಾಗೂ ಜನರ ಆಹಾರದ ಹಕ್ಕನ್ನೇ ಕಸಿ ಯುವ ಗೋಹತ್ಯಾ ನಿಷೇಧ ಕಾಯಿದೆ ಹಿಂಪ ಡೆಯಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇ ರಿಕೆಗೆ ಆಗ್ರಹಿಸಿ ಭಾರತ್ ಬಂದ್‍ಗೆ ಕರೆ ನೀಡಲಾಗಿದೆ. ಬಂದ್ ಯಶಸ್ವಿಯಾಗಬೇಕು. ಹಾಗಾಗಿ ಎಲ್ಲ ವಾಣಿಜ್ಯ ವಹಿವಾಟು, ಹೋಟೆಲ್, ವಿದ್ಯಾಸಂಸ್ಥೆಗಳ ಸಂಘ ಸಂಸ್ಥೆ ಗಳು, ಆಟೋ ಸಂಘಟನೆಗಳು ಬಂದ್ ಬೆಂಬಲಿಸುವಂತೆ ಮನವಿ ಮಾಡಿದರು.

ಇದೊಂದು ನಿರ್ಣಾಯಕ ಹೋರಾಟ ವಾಗಬೇಕು. ಪ್ರಧಾನಮಂತ್ರಿಯ ಗಮನ ಸೆಳೆಯುವ ನಿರ್ಣಾಯಕ ಹೋರಾಟವಾಗ ಬೇಕು. ಆ ನಿಟ್ಟಿನಲ್ಲಿ ಎಲ್ಲ ಸಂಘಟನೆಗಳಿಗೂ ವೈಯಕ್ತಿಕವಾಗಿ ಭೇಟಿ ನೀಡಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿಯ ಬಾಲಾಜಿ ರಾವ್, ದಸಂಸದ ನಿಂಗರಾಜ ಮಲ್ಲಾಡಿ, ಮಹಿಳಾ ಸಾಂಸ್ಕøತಿಕ ಸಂಘಟನೆಯ ಸಂಧ್ಯಾ ಸೇರಿದಂತೆ ಇನ್ನಿ ತರರು ಉಪಸ್ಥಿತರಿದ್ದರು

Translate »