ಕೋವಿಡ್ ಪ್ರೋತ್ಸಾಹ ಧನವೂ ಸೇರಿದಂತೆ ಮೂರು ತಿಂಗಳ  ವೇತನಕ್ಕೆ ಆಗ್ರಹಿಸಿ ಕಿರಿಯ ವೈದ್ಯರ ಪ್ರತಿಭಟನೆ
ಮೈಸೂರು

ಕೋವಿಡ್ ಪ್ರೋತ್ಸಾಹ ಧನವೂ ಸೇರಿದಂತೆ ಮೂರು ತಿಂಗಳ ವೇತನಕ್ಕೆ ಆಗ್ರಹಿಸಿ ಕಿರಿಯ ವೈದ್ಯರ ಪ್ರತಿಭಟನೆ

September 21, 2021

ಮೈಸೂರು,ಸೆ.20(ಆರ್‍ಕೆಬಿ)- ಸರ್ಕಾ ರದ ಆದೇಶದ ಮೇರೆಗೆ ತುರ್ತು ಪರಿಸ್ಥಿತಿ ಒಳಗೊಂಡಂತೆ ದಿನದ 24 ಗಂಟೆಯೂ ಕೋವಿಡ್ ಕರ್ತವ್ಯ ನಿರ್ವಹಣೆ ಮಾಡಿದ ತಮಗೆ ಮೂರು ತಿಂಗಳಿಂದ ವೇತನ, ಪ್ರೋತ್ಸಾಹ ಧನ ನೀಡಿಲ್ಲ ಎಂದು ಆರೋ ಪಿಸಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂ ಸಿಆರ್‍ಐ)ಗೆ ಸೇರಿದ 50ಕ್ಕೂ ಅಧಿಕ ಕಿರಿಯ ವೈದ್ಯರು ಸೋಮವಾರ ಎಂಎಂಸಿಆರ್‍ಐ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಕಿರಿಯ ವೈದ್ಯರು ಎಂಎಂಸಿ ಆರ್‍ಐ ಡೀನ್ ಮತ್ತು ನಿರ್ದೇಶಕರ ಕಚೇರಿ ಎದುರು ಜಮಾಯಿಸಿ, ವೇತನ ಬೇಕು, ವೇದನೆ ಬೇಡ, ವೈದ್ಯವೃತ್ತಿ ಇರುವುದು ಸೇವೆಗಾಗಿ ಗುಲಾಮಗಿರಿಗಲ್ಲ, ಕೋವಿಡ್ ವಾರಿಯರ್ಸ್ ಭಿಕ್ಷುಕರಲ್ಲ ಎಂಬ ಭಿತ್ತಿ ಫಲಕ ಗಳನ್ನು ಹಿಡಿದು ಆಗ್ರಹಿಸಿದರು. ಶೂನ್ಯ ವೇತನಕ್ಕೆ ಧಿಕ್ಕಾರ, ವೇತನ ನಮ್ಮ ಹಕ್ಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿನ ಲೋಪದೋಷಗಳನ್ನು ಸರ್ಕಾರ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವಾಗಿ ಸಂಸ್ಥೆಯ ಮುಂದೆ ಪ್ರತಿ ಭಟಿಸಿದರು. ತಮ್ಮದಲ್ಲದ ತಪ್ಪಿಗೆ ನಾವು ಬಲಿಪಶುವಾಗಬೇಕೇ? ಎಂದು ಪ್ರಶ್ನಿಸಿದರು.

ಎಂಎಂಸಿ-ಆರ್‍ಐ ಸಂಬಳ ನೀಡುತ್ತಿಲ್ಲ, ಕೋವಿಡ್ ಪೆÇ್ರೀತ್ಸಾಹ ಧನವನ್ನು ನೀಡು ತ್ತಿಲ್ಲ. ಕಡ್ಡಾಯ ಗ್ರಾಮೀಣ ಸೇವೆಯ ಭಾಗ ವಾಗಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿರುವ ಕಿರಿಯ ವೈದ್ಯರಿಗೆ 3 ತಿಂಗ ಳಿಂದ ಸಂಬಳ ನೀಡಿಲ್ಲವೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಂಬಿಬಿಎಸ್ ಪದವಿ ಮುಗಿಸಿದ ನಂತರವೂ ನಾವು ಆಹಾರ, ವಸತಿ ಇತ್ಯಾದಿ ಮೂಲಭೂತ ಸೌಕರ್ಯ ಕ್ಕಾಗಿ ಆರ್ಥಿಕವಾಗಿ ಇನ್ನೂ ಪೋಷಕರನ್ನು ಅವಲಂಬಿಸಿದ್ದೇವೆ. ಸಾಂಕ್ರಾಮಿಕ ರೋಗದ ನಿವಾರಣೆಗಾಗಿ ಕೆಲಸ ಮಾಡುತ್ತಿರುವ ವೈದ್ಯ ರಿಗೆ ರೂ.40,000 ವೇತನ ತುಂಬಾ ಕಡಿಮೆ. ಆದರೂ ಅದನ್ನು ಸರಿಯಾದ ಸಮಯ ದಲ್ಲಿ ಪಾವತಿಸುತ್ತಿಲ್ಲ. ಸಂಬಳದ ಹೊರತಾಗಿ ತಿಂಗಳಿಗೆ ರೂ.10,000 ನೀಡಬೇಕಾದ ಪ್ರೋತ್ಸಾಹಧನವನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು. ಆರೋಗ್ಯ ಸಚಿವರು, ವೈದ್ಯ ಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯ ಪ್ರವೇಶಿಸಬೇಕು, ನಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

Translate »