ಪ್ರಜಾಪ್ರತಿನಿಧಿ ಗ್ರಾಪಂ ವಾರ್ಡ್  ಸಮಿತಿಗೆ ಕೆ.ಮರೀಗೌಡ ಚಾಲನೆ
ಮೈಸೂರು

ಪ್ರಜಾಪ್ರತಿನಿಧಿ ಗ್ರಾಪಂ ವಾರ್ಡ್ ಸಮಿತಿಗೆ ಕೆ.ಮರೀಗೌಡ ಚಾಲನೆ

September 21, 2021

ಮೈಸೂರು, ಸೆ.20(ಎಸ್‍ಪಿಎನ್)- ಪಕ್ಷದ ಸಂಘಟನೆ ದೃಷ್ಟಿಯಿಂದ ಗ್ರಾಪಂ ಮಟ್ಟದಲ್ಲ್ಲಿ ಮುಖಂಡರು ಮತ್ತು ಕಾರ್ಯಕರ್ತರನ್ನೊಳಗೊಂಡ 60 ಜನರ ಪ್ರಜಾ ಪ್ರತಿನಿಧಿ ಗ್ರಾಮ ಪಂಚಾಯ್ತಿ ವಾರ್ಡ್ ಸಮಿತಿ ರಚನೆಗೆ ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಮೈಸೂರು ಹೊರವಲಯದಲ್ಲಿ ಚಾಲನೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಿರ್ದೇ ಶನದಂತೆ ಪಕ್ಷ ಸಂಘಟನೆ ಮಾಡುವ ದೃಷ್ಟಿಯಿಂದ ಗ್ರಾಪಂ ವ್ಯಾಪ್ತಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನೊಳಗೊಂಡ 60 ಜನರ ಸಮಿತಿ ರಚನೆಗೆ ಚಾಲನೆ ನೀಡಿದ್ದಾರೆ.

ಈ ವೇಳೆ ಮೈಸೂರು ತಾಲೂಕಿನ ಬೆಳವಾಡಿ, ಆನಂದೂರು, ಗುಂಗ್ರಾಲ್ ಛತ್ರ, ಇಲವಾಲ, ನಾಗವಾಲ, ದೊಡ್ಡ ಮಾರಗೌಡನಹಳ್ಳಿ, ಮರಠಿ ಕ್ಯಾತನಹಳ್ಳಿ ಗ್ರಾಮ ಪಂಚಾಯತಿಯ ಕೇಂದ್ರಗಳಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ನೇತೃತ್ವದಲ್ಲಿ ಕೆಪಿಸಿಸಿ ಉಸ್ತುವಾರಿ ಗುರುಪಾದಸ್ವಾಮಿ ಮತ್ತು ಜೇಸುದಾಸ್ ಕೆಪಿಸಿಸಿ ಕಾರ್ಯದರ್ಶಿ ನರೇಂದ್ರ ಉಪಸ್ಥಿತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಗುರುಸ್ವಾಮಿ ಹಾಗೂ ಜೆ.ಸತೀಶಕುಮಾರ್, ಮಾಜಿ ಬ್ಲಾಕ್ ಮಾಜಿ ಅಧ್ಯಕ್ಷÀ ಕೆ.ಎಸ್.ಸಿದ್ದರಾಜು, ಜಿಪಂ ಮಾಜಿ ಸದಸ್ಯ ಅರುಣ್‍ಕುಮಾರ್ ತಾಲೂಕಿನ ಆಯ್ದ ಗಾಮಗಳಿಗೆ ಪ್ರವಾಸ ಕೈಗೊಂಡು ವಾರ್ಡ್ ಸಮಿತಿ ರಚನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬೆಳವಾಡಿ ಲೋಕೇಶ್, ಮಹದೇವ್, ಬಿ.ದರ್ಶನ್, ಗಂಗಾಧರ್, ಸ್ವಾಮಿ, ಬೋರೇಗೌಡ, ಚಿಕ್ಕಮರಿಗೌಡ, ಶಿವಣ್ಣ, ರಮೇಶ್, ಯೋಗೀಶ್, ಮಹೇಶ್, ಶ್ರೀನಿವಾಸ್, ಯದುಕುಮಾರ್, ಚುಂಚ ಗೌಡ, ವಿಜಯಕುಮಾರ್, ಶ್ರೀನಿವಾಸ್, ಮಂಜು ಗೌಡ, ಚಂದ್ರೇಗೌಡ, ಸಂತೋಷ್, ಚಂದ್ರು, ಕೆ.ಟಿ.ಮೋಹನ್‍ಕುಮಾರ್, ಕೆ.ಬಿ.ಪುಟ್ಟಸ್ವಾಮಿ, ವೆಂಕಟೇಶ್, ನಿಂಗರಾಜ, ಸುನಿಲ್, ಹೇಮಂತ್‍ಕುಮಾರ್, ಜಿ.ಆರ್.ರಾಮೇಗೌಡ, ಪಾಷಾ, ವೈ.ಸಿ.ಸ್ವಾಮಿ, ದೊಡ್ಡನಾಯಕ, ಬಿ.ರವಿ, ಯೋಗೇಶ್, ಶಿವಣ್ಣ, ರಾಮು, ಚೆಲುವರಾಜು, ದೊಡ್ಡಸ್ವಾಮಿ, ಸ್ವಾಮಿ, ಬಸವರಾಜು, ರಾಜೇಂದ್ರ, ರಾಜೇಶ್, ಬಸವೇಗೌಡ, ಕೆಂಗನಾಯಕ, ಲಕ್ಷ್ಮಮ್ಮ, ಶಿವಮ್ಮ ಇನ್ನಿತರ ಮುಖಂಡರು, ಕಾರ್ಯಕರ್ತರು ಸಭೆಗಳಲ್ಲಿ ಭಾಗವಹಿಸಿದ್ದರು.

Translate »