ಬೆಲೆ ಏರಿಕೆ ಅನಿವಾರ್ಯ
News

ಬೆಲೆ ಏರಿಕೆ ಅನಿವಾರ್ಯ

September 21, 2021

ಬೆಂಗಳೂರು, ಸೆ.20(ಕೆಎಂಶಿ)- ಬೆಲೆ ಏರಿಕೆ ಸಹಜ, ಇಂದಿನ ಸಂಕಷ್ಟ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಜೊತೆಗೆ ರಾಷ್ಟ್ರವನ್ನು ಬಲಿಷ್ಠ ಮಾಡಲು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಅನಿವಾರ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಕೇಂದ್ರದ ನಿರ್ಧಾರವನ್ನು ಬಲವಾಗಿ ಸಮ ರ್ಥಿಸಿಕೊಂಡರು.

ನಿಯಮ 69ರಡಿ ನಡೆದ ಚರ್ಚೆಗೆ ಕಾಂಗ್ರೆಸ್ ನವರ ವಿರೋಧ, ಟೀಕೆ, ಗಲಭೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರವನ್ನು ಸಮರ್ಥನೆ ಮಾಡಿಕೊಂಡಿ ದ್ದಲ್ಲದೆ, ವಿಶ್ವ ಮಟ್ಟದಲ್ಲಿ ಭಾರತವನ್ನು ಬಲಿಷ್ಠ ಮಾಡಲು ಬೆಲೆ ಹೆಚ್ಚಳ ಅನಿವಾರ್ಯವಾಯಿತು ಎಂದರು.
ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಕೋವಿಡ್-19 ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಲಾಕ್‍ಡೌನ್ ಸಂದರ್ಭದಲ್ಲಿ ಯಾರೊಬ್ಬರೂ ಹಸಿವಿನಿಂದ ಸಾಯಲು ಬಿಡಲಿಲ್ಲ. ಹಲವಷ್ಟು ಯೋಜನೆಗಳಿಗೆ ಸಬ್ಸಿಡಿ ನೀಡಿದ್ದ ಲ್ಲದೆ, ರೈತರ ಬೆಳೆ ಧಾರಣೆ ಮಾರುಕಟ್ಟೆಯಲ್ಲಿ ಕುಸಿತವಾ ದಾಗ ಮಧ್ಯೆ ಪ್ರವೇಶಿಸಿ ಬೆಂಬಲ ಬೆಲೆ ಯೋಜನೆ ಯಡಿ ಖರೀದಿಸ ಲಾಯಿತು. ಬೆಲೆ ಏರಿಕೆ ಎಲ್ಲ ಕಾಲ ದಲ್ಲೂ ನಡೆದುಬಂದಿದೆ, ಸಂಕಷ್ಟದಲ್ಲಿ ಕೆಲವು ಕಠಿಣ ತೀರ್ಮಾನಗಳನ್ನು ಕೈಗೊಳ್ಳಲು ಪ್ರಧಾನಿ ಅವರು ಕೆಲವು ವರ್ಗದ ಮೇಲೆ ತೆರಿಗೆ ವಿಧಿಸಿದ್ದಾರೆ.

ಇದರಿಂದ ಬಂದ ಹಣವನ್ನು ಅಭಿವೃದ್ಧಿ ಜೊತೆಗೆ ಬಡವರ ಮತ್ತು ರೈತರ ಕಲ್ಯಾಣಕ್ಕೆ ಬಳಕೆ ಮಾಡಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಭಾರತ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನೀವು ಎಷ್ಟೇ ಟೀಕೆ ಮಾಡಿದರೂ ಪ್ರಧಾನಿ ಅವರ ವರ್ಚಸ್ಸಿನ ಬಳಿಗೆ ಬರುವಂತಹ ಯಾವ ನಾಯಕರೂ ನಿಮ್ಮ ಪಕ್ಷಗಳಲ್ಲಿ ಇಲ್ಲ ಎಂದು ತಿರುಗೇಟು ನೀಡಿದರು. ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ನಾವು ಬೆಲೆ ಏರಿಕೆ ಕಡಿತಗೊಳಿ ಸಲು ಕ್ರಮಕೈಗೊಳ್ಳುವ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕೋವಿಡ್ ಸಂಕಷ್ಟವನ್ನು ಅರಿತೇ ರೈತರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಶಿಷ್ಯ ವೇತನ ಮತ್ತು ಅಮೃತ ಯೋಜನೆ ಜಾರಿಗೊಳಿಸಿದ್ದೇವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಂಭವಿಸಿದ ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬದ ಒಬ್ಬರಿಗೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಈ ಹಣವನ್ನು ಎರಡು-ಮೂರು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಕೋವಿಡ್ ಪರಿಸ್ಥಿತಿ ಸದ್ಯಕ್ಕೆ ಸುಧಾರಿಸಿದೆ. ಮತ್ತೆ ಆರ್ಥಿಕ ಉತ್ತೇಜನಕ್ಕೆ ಬಡವರಿಗೆ ಅನು ಕೂಲವಾಗುವಂತೆ ಮುಂದಿನ ದಿನಗಳಲ್ಲಿ ಆರ್ಥಿಕ ಸ್ಥಿತಿ ದೃಷ್ಟಿ ಯಲ್ಲಿಟ್ಟುಕೊಂಡು ಯೋಜನೆಗಳನ್ನು ಪ್ರಕಟಿಸುವುದಾಗಿ ಭರವಸೆ ನೀಡಿದರು.

ಪ್ರತಿಪಕ್ಷಗಳ ಸದಸ್ಯರ ಟೀಕೆಗಳಿಗೆ ಕೇಂದ್ರ ಕೈಗೊಂಡಿ ರುವ ಅಂಕಿ-ಅಂಶಗಳನ್ನು ಎಳೆಎಳೆಯಾಗಿ ಸದನದ ಮುಂದಿಟ್ಟ ಮುಖ್ಯಮಂತ್ರಿ, ಸಿದ್ದರಾಮಯ್ಯ ಸೇರಿದಂತೆ ಆ ಪಕ್ಷದ ನಾಯಕ ರನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಅವರ ಭಾಷಣದುದ್ದಕ್ಕೂ ಕಾಂಗ್ರೆಸ್‍ನವರು ಟೀಕೆಗಳನ್ನು ಮಾಡುತ್ತಿದ್ದರು. ಅವರ ಉತ್ತರ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಮತ್ತೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಟೀಕಾ ಪ್ರಹಾರ ಮಾಡಿ, ಸಭಾತ್ಯಾಗ ಮಾಡಿದರು.

Translate »