ಎನ್‍ಆರ್ ಕ್ಷೇತ್ರದ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ಸಚಿವ ಎಸ್‍ಟಿಎಸ್ ಭರವಸೆ
ಮೈಸೂರು

ಎನ್‍ಆರ್ ಕ್ಷೇತ್ರದ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ಸಚಿವ ಎಸ್‍ಟಿಎಸ್ ಭರವಸೆ

September 29, 2020

ಮೈಸೂರು, ಸೆ.28(ವೈಡಿಎಸ್)- ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಎನ್‍ಆರ್ ಕ್ಷೇತ್ರದ ಪ್ರಮುಖ ಮುಖಂಡರೊಂದಿಗೆ ಭಾನುವಾರ ಸಮಾಲೋಚನಾ ಸಭೆ ನಡೆಸಿ, ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚಿಸಿದರು. ಈ ವೇಳೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಕೃಷ್ಣರಾಜ, ಚಾಮರಾಜ ಕ್ಷೇತ್ರದಲ್ಲಿ ನೂರಾರು ಕೋಟಿ ರೂ. ಅಭಿವೃದ್ಧಿ ಕೆಲಸ ನಡೆಯುತ್ತ್ತಿವೆ. ಆದರೆ, ಎನ್‍ಆರ್ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ. 2-3 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಬಿಡುತ್ತಾರೆ. ಯುಜಿಡಿ ಲೈನ್ ಸರಿಯಿಲ್ಲ. ಹೆಣ್ಣುಮಕ್ಕಳ ಕಾಲೇಜು ಇಲ್ಲ. 30 ರೆವಿನ್ಯೂ ಬಡಾವಣೆಗಳಿದ್ದು, ಮೂಲಸೌಕರ್ಯ ಗಳಿಲ್ಲ. ಉತ್ತಮ ರಸ್ತೆಗಳಿಲ್ಲ ಎಂದು ಕುಂದುಕೊರತೆಗಳತ್ತ ಗಮನ ಸೆಳೆದರು.

ಇತರೆ ಮುಖಂಡರು ಸಹ ಅಹವಾಲು ಸಲ್ಲಿಸಿದರು. ಸರಿಯಾಗಿ ರೇಷನ್ ನೀಡುತ್ತಿಲ್ಲ. ಯಾರಾದರೂ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡರೂ ಪಾಲಿಕೆ ಅಥವಾ ಮುಡಾ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು.

ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿ, ಅ.2 ಅಥವಾ 3ರಂದು ಅಧಿಕಾರಿ ಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಸಂಸದ ಪ್ರತಾಪಸಿಂಹ, ನಗರಾಧ್ಯಕ್ಷ ಶ್ರೀವತ್ಸ, ಮಾಜಿ ಎಂಎಲ್‍ಸಿ ಸಿದ್ದರಾಜು, ಎನ್.ಆರ್. ಕ್ಷೇತ್ರದ ಅಧ್ಯಕ್ಷ ಭಾನುಪ್ರಕಾಶ್, 30ಕ್ಕೂ ಹೆಚ್ಚು ಮಂದಿ ಮುಖಂಡರು ಸಭೆಯಲ್ಲಿದ್ದರು.

 

 

Translate »