ಯೂರಿಯಾ ರಸಗೊಬ್ಬರ ಲಭ್ಯ
ಮೈಸೂರು

ಯೂರಿಯಾ ರಸಗೊಬ್ಬರ ಲಭ್ಯ

September 29, 2020

ಮೈಸೂರು,ಸೆ.28-2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿ ರುವ ಬೆಳೆಗಳಿಗೆ ಅವಶ್ಯವಿರುವ ಯೂರಿಯಾ ರಸಗೊಬ್ಬರದ ದಾಸ್ತಾನು ಜಿಲ್ಲೆಯಲ್ಲಿ ಲಭ್ಯವಿದ್ದು ಯಾವುದೇ ಕೊರತೆ ಇರುವುದಿಲ್ಲ, ಆದರೆ ಜಿಲ್ಲೆಯ ಯಾವುದೇ ರಸಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲೆಗೆ ಕಳೆದ 3 ದಿನಗಳಲ್ಲಿ ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಕಂಪನಿಯ 340 ಮೆ. ಟನ್, ಇಂಡಿಯನ್ ಪೆÇಟ್ಯಾಷ್ ಲಿಮಿಟೆಡ್ ಕಂಪನಿಯ 383 ಮೆ. ಟನ್, ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್ ಕಂಪನಿಯ 714 ಮೆ.ಟನ್ ಮತ್ತು ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಕಂಪನಿಯ 2200 ಮೆ.ಟನ್ ಯೂರಿಯಾ ರಸಗೊಬ್ಬರ ಸರಬರಾಜಾ ಗಿದ್ದು, ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿಯಲ್ಲಿ 759 ಮೆ.ಟನ್ ಕಾಪು ದಾಸ್ತಾನು ಸೇರಿದಂತೆ ಒಟ್ಟಾರೆಯಾಗಿ 4396 ಮೆ.ಟನ್ ಯೂರಿಯಾ ರಸಗೊಬ್ಬರ ಲಭ್ಯವಿರುತ್ತದೆ. ಬರುವ ವಾರದಲ್ಲಿ ಜಿಲ್ಲೆಗೆ ಇಂಡಿಯನ್ ಪೆÇಟ್ಯಾಷ್ ಲಿಮಿಟೆಡ್ ಕಂಪನಿಯ 1,350 ಮೆ.ಟನ್ ಮತ್ತು ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಕಂಪನಿಯ 500 ಮೆ.ಟನ್ ಯೂರಿಯಾ ಸರಬರಾಜಾಗುವ ಯೋಜನೆಯಿದ್ದು ಮುಂದಿನ ದಿನಗಳಲ್ಲಿ ಬರುವ ಬೇಡಿಕೆಗೆ ಸರಿ ಹೊಂದಲಿದೆ. ಜಿಲ್ಲೆಯ ಯಾವುದೇ ರಸಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ, ನಿಯಮಾನುಸಾರ ಕಾನೂನು ಕ್ರಮ ಜರುಗಿಸಿ ಲೈಸನ್ಸ್ ರದ್ದುಪಡಿಸಲು ಕ್ರಮವಹಿಸಲಾಗುವುದು. ಎಲ್ಲಾ ಮಾರಾಟಗಾರರು ಕಡ್ಡಾಯವಾಗಿ PಔS ಯಂತ್ರದ ಮೂಲಕವೇ ರಸಗೊಬ್ಬರಗಳನ್ನು ವಿತರಿಸಲು ಕ್ರಮವಹಿಸುವುದು. ರಸಗೊಬ್ಬರ ಖರೀದಿಸುವ ರೈತರು ತಪ್ಪದೇ ತಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

 

 

Translate »