ಮೈಸೂರಲ್ಲಿ ಮಾಜಿ ಮೇಯರ್‍ಗಳ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಮಾಜಿ ಮೇಯರ್‍ಗಳ ಪ್ರತಿಭಟನೆ

September 29, 2020

ಮೈಸೂರು,ಸೆ.28(ಆರ್‍ಕೆ)-ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ರೈತವಿರೋಧಿ ನೀತಿಯನ್ನು ಖಂಡಿಸಿ ಮಾಜಿ ಮೇಯರ್‍ಗಳು ಮೈಸೂರಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ಬಂದ್‍ಗೆ ರೈತಪರ, ಕನ್ನಡಪರ ಸಂಘಟನೆಗಳು ಕರೆ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮೈಸೂರು ಮಹಾ ನಗರ ಪಾಲಿಕೆ ಮಾಜಿ ಮೇಯರ್‍ಗಳ ಪರಿಷತ್ ವತಿಯಿಂದ ಮೈಸೂರಿನ ಪುರಭವನ ಆವರಣದಲ್ಲಿ ಜಮಾಯಿಸಿದ ಮಾಜಿ ಮೇಯರ್‍ಗಳು ಪ್ರತಿಭಟನೆ ನಡೆಸಿ ಮೆರವಣಿಗೆಗೆ ಮುಂದಾದರಾ ದರೂ ಸ್ಥಳದಲ್ಲಿದ್ದ ಪೊಲೀಸರು ಪೂರ್ವಾನುಮತಿಯಿಲ್ಲದೆ ಮೆರವಣಿಗೆಯಲ್ಲಿ ಹೋಗುವಂತಿಲ್ಲ ಎಂದು ತಡೆದ ಹಿನ್ನೆಲೆಯಲ್ಲಿ ಅವರು ನೇರವಾಗಿ ಡಿಸಿ ಕಚೇರಿಗೆ ತೆರಳಿ ಡಿಸಿ ಬಿ.ಶÀರತ್ ಅವರಿಗೆ ಮನವಿ ಸಲ್ಲಿಸಿದರು. ವ್ಯವಸಾಯ ಉತ್ಪನ್ನ ಮಾರಾಟ ಸಮಿತಿ (ಎಪಿಎಂಸಿ) ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರವು ರೈತರ ಪಾಲಿಗೆ ಮರಣ ಶಾಸನವಾಗಿದೆ. ರೈತರು ತಾವು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಪಡೆಯಲು ಈ ಕಾಯ್ದೆಯು ಅಡ್ಡಿಯಾಗಿದೆ. ತಕ್ಷಣವೇ ಘನತೆವೆತ್ತ ರಾಜ್ಯಪಾಲರು ಈ ತಿದ್ದು ಪಡಿ ಕಾಯ್ದೆಗೆ ಸಹಿ ಹಾಕಿರುವುದನ್ನು ಹಿಂಪಡೆದು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ತಮ್ಮ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಗಳಾದ ಟಿ.ಬಿ. ಚಿಕ್ಕಣ್ಣ, ಪುಷ್ಪಲತಾ ಜಗನ್ನಾಥ್, ಆರ್.ಲಿಂಗಪ್ಪ, ಆರೀಫ್ ಹುಸೇನ್, ಅಯೂಬ್‍ಖಾನ್, ಬಿ.ಕೆ.ಪ್ರಕಾಶ್, ಆರ್.ಜಿ. ನರಸಿಂಹಯ್ಯಂಗಾರ್, ಪುರುಷೋತ್ತಮ್, ಭಾಗ್ಯವತಿ, ಅನಂತು, ರಾಜೇಶ್ವರಿ ಪುಟ್ಟಸ್ವಾಮಿ, ದಕ್ಷಿಣಾಮೂರ್ತಿ, ನಾರಾಯಣ ಸೇರಿ ದಂತೆ ಹಲವರು ಪಾಲ್ಗೊಂಡಿದ್ದರು.

 

 

 

 

 

Translate »