377 ಕೋಟಿ ರೂ. ವೆಚ್ಚದಲ್ಲಿ ಮುಡಾ ಬಡಾವಣೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ
ಮೈಸೂರು

377 ಕೋಟಿ ರೂ. ವೆಚ್ಚದಲ್ಲಿ ಮುಡಾ ಬಡಾವಣೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ

July 18, 2021

ಮೈಸೂರು,ಜು.17(ಪಿಎಂ)-ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದ (ಮುಡಾ) ಬಡಾವಣೆಗಳಿಗೆ ಸಮರ್ಪಕ ಮೂಲಭೂತ ಸೌಲಭ್ಯ ಕಲ್ಪಿಸಿ, ಸಮಗ್ರ ಅಭಿವೃದ್ಧಿಪಡಿಸಲು ಮುಡಾದ 377 ಕೋಟಿ ರೂ. ಬಳಕೆಗೆ ಸರ್ಕಾರ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಶೀಘ್ರವೇ ಕಾಮಗಾರಿ ಆರಂಭಿಸುವ ಸಂಬಂಧ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.

ಮೈಸೂರಿನ ಸಾತಗಳ್ಳಿ, ವಸಂತನಗರ, ಲಲಿತಾದ್ರಿ ಪುರದಲ್ಲಿ ಮುಡಾ ಅಭಿವೃದ್ಧಿಪಡಿಸಿರುವ ಬಡಾವಣೆ ಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ (ಒಂದು ಬಾರಿಯ ಕ್ರಮವಾಗಿ/ಓಟಿಎಂ) ಮೂಲಭೂತ ಸೌಲಭ್ಯ ಕಾಮ ಗಾರಿಗಳ ಸಂಬಂಧ ಬಡಾವಣೆಗಳಲ್ಲಿ ಶನಿವಾರ ಸ್ಥಳ ಪರಿಶೀಲನೆ ನಡೆಸಿ, ಬಳಿಕ ಅವರು ಮಾಧ್ಯಮ ದವರೊಂದಿಗೆ ಮಾತನಾಡಿದರು.

ಬಡಾವಣೆಗಳ ಸಮಗ್ರ ಅಭಿವೃದ್ಧಿಗೊಳಿಸುವ ನಿಟ್ಟಿ ನಲ್ಲಿ ಮುಡಾದ 377 ಕೋಟಿ ರೂ. ಬಳಸಿಕೊಳ್ಳಲು ಸರ್ಕಾರ ಸಮ್ಮತಿಸಿದ್ದು, ಶೀಘ್ರವೇ ಈ ಸಂಬಂಧ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ಇಂದು ಸ್ಥಳ ಪರಿ ಶೀಲನೆ ನಡೆಸಲಾಗಿದೆ ಎಂದರು.
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ನಡೆಸಲು ಪಾಲಿಕೆ ಮಹಿಳಾ ಸದಸ್ಯರು ಮನವಿ ಮಾಡಿದ್ದಾರೆ. ಚುನಾವಣೆ ನಡೆಸದಿದ್ದಲ್ಲಿ ಮಹಿಳಾ ವರ್ಗಕ್ಕೆ ಅನ್ಯಾಯವಾಗಲಿದೆ ಎಂದು ಅವರು ಕೋರಿದ್ದು, ಅವರಿಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದೇನೆ. ಅಧಿ ಕಾರಿಗಳೊಂದಿಗೆ ಚರ್ಚಿಸಿ, ಇದರ ಸಾಧಕ-ಬಾಧಕ ಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು. ಗುಂಪು ವಸತಿ ಮನೆಗಳ ನಿರ್ಮಾಣ ಯೋಜನೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಡಾಗೆ ಸೂಚನೆ ನೀಡಿದ್ದೇನೆ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಮೂಲಭೂತ ಸೌಲಭ್ಯಕ್ಕೆ ಮನವಿ: ಲಲಿತಾದ್ರಿಪುರ ಬಡಾವಣೆಯಲ್ಲಿ ಪರಿಶೀಲನೆ ನಡೆಸುತ್ತಿದ್ದ ನಗರಾಭಿ ವೃದ್ಧಿ ಸಚಿವ ಭೈರತಿ ಬಸವರಾಜ್ ಅವರನ್ನು ಭೇಟಿ ಮಾಡಿದ ಸ್ಥಳೀಯರು, ಮುಡಾ ನಿರ್ಮಿಸಿರುವ ಬಡಾವಣೆಗಳಿಗೆ ಸಮರ್ಪಕ ಮೂಲಭೂತ ಸವಲತ್ತು ಕಲ್ಪಿಸಲು ಮನವಿ ಮಾಡಿದರು.
ಬಡಾವಣೆಯಲ್ಲಿರುವ ಓವರ್‍ಹೆಡ್ ವಾಟರ್ ಟ್ಯಾಂಕ್ ಸೋರುತ್ತಿದ್ದು, ಇದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಜೊತೆಗೆ ಟ್ಯಾಂಕ್ ಮೂಲಕ ಬೋರ್‍ವೆಲ್ ನೀರು ಪೂರೈಕೆಯಾಗುತ್ತಿದ್ದು, ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಹಾಗಾಗಿ ಕಾವೇರಿ ನೀರು ಪೂರೈಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಭೈರತಿ ಬಸವರಾಜ್, ಮುಡಾ ಬಡಾವಣೆಗಳಿಗೆ ಸಮಗ್ರ ಮೂಲಭೂತ ಸೌಲಭ್ಯ ಕಲ್ಪಿಸುವ ಸಲುವಾಗಿಯೇ ಇಂದು ಭೇಟಿ ನೀಡಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಹಿರಿಯ ನಾಗರಿಕರಾದ ಸುಬ್ಬಣ್ಣ ಎಂಬು ವರು, ಮುಡಾ ಅನುಮತಿ ಮೇರೆಗೆ ಖಾಸಗಿಯವರು ನಿರ್ಮಿಸಿರುವ ಬಡಾವಣೆಗಳಲ್ಲಿ ನೀರಿನ ಸರಬ ರಾಜು ಸೇರಿದಂತೆ ಅನೇಕ ಮೂಲಭೂತ ಸವಲತ್ತು ಗಳು ಮರೀಚಿಕೆಯಾಗಿದೆ ಎಂದು ಸಚಿವರಲ್ಲಿ ದೂರಿದರು.
ಹೀಗೆ ಹಲವರು ಸಮಸ್ಯೆಗಳನ್ನೇ ಹೇಳುತ್ತಿದ್ದ ಹಿನ್ನೆಲೆ ಯಲ್ಲಿ ಪ್ರತಿಕ್ರಿಯಿಸಿದ ಭೈರತಿ ಬಸವರಾಜ್, ನಮ್ಮ ಸರ್ಕಾರ ಬಂದು ಒಂದೂವರೆ ವರ್ಷವಾಗಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಹಿಂದಿನ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಪರಿಹರಿಸಬೇಕಿತ್ತು. ಆದರೆ ಅದಾಗಿಲ್ಲ. ನಾವು ಅಳಿಲು ಸೇವೆಯಾದರೂ ಮಾಡ ಬೇಕೆಂಬ ನಿಟ್ಟಿನಲ್ಲಿ ಮುಡಾ ಬಡಾವಣೆಗಳ ಅಭಿ ವೃದ್ಧಿಗೆ ಕ್ರಮ ವಹಿಸಿದ್ದೇವೆ. ನಾಗರಿಕರ ಸಮಸ್ಯೆಗಳ ಪರಿಹರಿಸಲು ನಾವು ಬದ್ಧವಾಗಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಆಯುಕ್ತ ಡಿ.ಬಿ.ನಟೇಶ್ ಮತ್ತಿತರರು ಹಾಜರಿದ್ದರು.

Translate »