ರಚಿತಾರಾಮ್ ಇನ್ `ಕಸ್ತೂರಿ ನಿವಾಸ’
ಸಿನಿಮಾ

ರಚಿತಾರಾಮ್ ಇನ್ `ಕಸ್ತೂರಿ ನಿವಾಸ’

September 4, 2020

ಐದು ದಶಕಗಳ ನಂತರ `ಕಸ್ತೂರಿ ನಿವಾಸ’ ಎಂಬ ಹೆಸರಿನ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ಸುಪ್ರಬಾತ, ಅಮೃತವರ್ಷಿಣಿ, ಎರಡನೇ ಮದುವೆ, ಲಾಲಿಯಂಥ ಸೂಪರ್‍ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ದಿನೇಶ್‍ಬಾಬು ಈ ಚಿತ್ರಕ್ಕೆ ಆಕ್ಷನ್‍ಕಟ್ ಹೇಳುತ್ತಿದ್ದಾರೆ. ಇದು ಅವರ 50ನೇ ಚಿತ್ರವೂ ಹೌದು. ರವೀಶ್ ಹೆಚ್.ಸಿ. ಹಾಗೂ ರುಬಿನ್‍ರಾಜ್ ಅವರ ನಿರ್ಮಾಣವಿರುವ ಈ ಚಿತ್ರದ ಮುಹೂರ್ತ ಸಮಾರಂಭ ಹಾಗೂ ರಚಿತಾರಾಮ್ ಇನ್ ಕಸ್ತೂರಿನಿವಾಸ ಎನ್ನುವ ಶೀರ್ಷಿಕೆ ಅನಾವರಣ ಕಳೆದವಾರ ನೆರವೇರಿತು. ರಚಿತಾರಾಮ್ ಅವರ ಜೊತೆ ಶ್ರುತಿಪ್ರಕಾಶ್ ಹಾಗೂ ಸ್ಕಂದ ಅಶೋಕ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಲಿz್ದÁರೆ.

ನಿರ್ಮಾಪಕ ರವೀಶ್ ಮಾತನಾಡಿ, ದಿನೇಶ್‍ಬಾಬು ಅವರ 50ನೇ ಚಿತ್ರವನ್ನು ನಿರ್ಮಿಸುವ ಅವಕಾಶ ನಮಗೆ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಹೇಳಿದರು. ಮತ್ತೊಬ್ಬ ನಿರ್ಮಾಪಕ ರುಬಿನ್‍ರಾಜ್ ಮಾತನಾಡುತ್ತ ನಾನು ಅಬ್ರಾಡ್‍ನಲ್ಲಿ ಸಾಕಷ್ಟು ಇವೆಂಟ್‍ಗಳನ್ನು ಮಾಡಿದ್ದೇನೆ. ಚಿತ್ರ ನಿರ್ಮಾಣದ ಮೇಲೆ ಮೊದಲಿನಿಂದಲೂ ತುಂಬಾ ಆಸಕ್ತಿಯಿತ್ತು. ದಿನೇಶ್‍ಬಾಬು ಸಾಕಷ್ಟು ಉತ್ತಮ ಚಿತ್ರಗಳನ್ನು ಮಾಡಿದವರು. ಅವರ ಜೊತೆಗೆ ನಾವು ದೊಡ್ಡಮಟ್ಟದ ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಿಕೊಂಡರು. ನಂತರ ನಾಯಕಿ ರಚಿತಾರಾಮ್ ಮಾತನಾಡಿ, ದಿನೇಶ್ ಬಾಬು ಅವರ 50 ನೇ ಚಿತ್ರದಲ್ಲಿ ಅವರ ಜೊತೆ ಕೆಲಸ ಮಾಡುವುದಕ್ಕೆ ತುಂಬಾ ಎಕ್ಸೈಟ್ ಆಗಿz್ದÉೀನೆ. ನನ್ನ ಈ ಕಾಸ್ಟೂಮ್ ನೋಡಿದರೆ ಹಳ್ಳೀ ಹುಡುಗಿ ಅಂತ ಅನಿಸಬಹುದು, ಆದರೆ ಚಿತ್ರದಲ್ಲಿ ನನ್ನ ಪಾತ್ರಕ್ಕೆ ತುಂಬಾನೇ ಗೆಟಪ್ ಇದೆ. ಅದೇನು ಅಂತ ಈಗಲೇ ರಿವೀಲ್ ಮಾಡಲು ಆಗಲ್ಲ ಎಂದು ಚಿತ್ರದ ಬಗ್ಗೆ ಸಂಪೂರ್ಣ ವಿವರ ನೀಡಿದರು. ನಂತರ ಮತ್ತೊಬ್ಬ ನಾಯಕಿ ಶೃತಿಪ್ರಕಾಶ್ ಮಾತನಾಡಿ, ನಾವೆಲ್ಲ ದಿನೇಶ್‍ಬಾಬು ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು. ಈಗ ಅವರ ಚಿತ್ರದಲ್ಲೇ ಅವಕಾಶ ಸಿಕ್ಕಿದೆ ಎಂದು ಹೇಳಿದರು. ನಂತರ ಅತಿಥಿಗಳಾಗಿ ಆಮಿಸಿದ್ದ ನಟ ರಿಶಿ, ನಿರ್ಮಾಪಕರಾದ ಬಾಮ ಹರೀಶ್, ಬಾಮ ಗಿರೀಶ್ ಮಾತನಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಹಳೆಯ ಚಿತ್ರಕ್ಕೂ ನಮ್ಮ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ನಿರ್ದೇಶಕ ದಿನೇಶ್ ಬಾಬು, ಇದೊಂದು ಪ್ಯಾರಾ ನಾರ್ಮಲ್ ಸಬ್ಜೆಕ್ಟ್ ಮೇಲೆ ಸಾಗುವ ಕಥಾನಕ, ಕಸ್ತೂರಿ ಎನ್ನುವುದು ಸುವಾಸನೆ ಎಂಬ ಅರ್ಥವನ್ನೂ ಕೊಡುತ್ತದೆ. ಚಿತ್ರದ ಕಥೆಯ ಬಗ್ಗೆ ಈಗಲೇ ಹೇಳುವುದಿಲ್ಲ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಚಿತ್ರೀಕರಣ ಶುರು ಮಾಡುತ್ತಿದ್ದು, 28 ದಿನಗಳ ಪ್ಲಾನ್ ಹಾಕಿಕೊಂಡಿz್ದÉೀವೆ ಎಂಬ ಮಾಹಿತಿ ನೀಡಿದರು. ಈ ಚಿತ್ರದಲ್ಲಿರುವ ಒಂದು ಹಾಡಿಗೆ ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

Translate »