ಮಾನವನೂ ಕೂಡಾ ಭಗವಂತನಾಗಬಹುದು
ಮೈಸೂರು

ಮಾನವನೂ ಕೂಡಾ ಭಗವಂತನಾಗಬಹುದು

September 4, 2020

ಮೈಸೂರು, ಸೆ.3-ಮಾನವನೂ ಕೂಡಾ ಭಗವಂತ ನಾಗಬಹುದು ಎಂಬುದನ್ನು ವಚನಗಳ ಮೂಲಕ ಅರಿವು ಉಂಟುಮಾಡಿ ದವರು ಶರಣರು ಎಂದು ಚಾಮ ರಾಜನಗರ ಜಿಲ್ಲೆ ಮರಿಯಾಲ ಮುರುಘ ರಾಜೇಂದ್ರ ಮಹಾಸಂಸ್ಥಾನ ಮಠದ ಶ್ರೀ ಮುಮ್ಮಡಿ ಮುರುಘ ರಾಜೇಂದ್ರಸ್ವಾಮಿಗಳು ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ ಹದಿ ನಾಲ್ಕನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ಶರಣ ದರ್ಶನ ಎಂಬ ವಿಷಯ ಕುರಿತು ಪ್ರವಚನ ನೀಡಿದ ಅವರು ಬಸವಾದಿ ಶರಣರು ದೇವರು, ಜಗತ್ತು ಮತ್ತು ಕಾಯಕದ ಬಗ್ಗೆ ಚಿಂತನೆ ಮಾಡಿ ಎಲ್ಲರೂ ಸರಳವಾಗಿ ಆಚರಿಸಬಹುದಾದ ಮೇಲು, ಕೀಳು, ಹೆಣ್ಣು, ಗಂಡು ಎಂಬ ಭೇದವಿಲ್ಲದ ಶರಣ ಧರ್ಮ ವನ್ನು ನೀಡಿದರು. ಮರದೊಳಗೆ ಮಂದಾಗ್ನಿ ಇದ್ದರೂ ಹೇಗೆ ಗೋಚರವಾಗುವುದಿಲ್ಲವೋ ಹಾಗೆಯೇ ನಿರಾ ಕಾರನಾದಂತಹ ಪರಶಿವನು ಎಲ್ಲರಲ್ಲಿಯೂ ಅಡಗಿರು ವನು. ತನ್ನ ವಿನೋದಕ್ಕೆ ತಾನೇ ಸೃಷ್ಟಿಸಿದ ಸಕಲ ಪ್ರಪಂಚ ದಲ್ಲಿ ಪರಶಿವನು ಸುಖ ಮತ್ತು ದುಃಖ ಎರಡನ್ನೂ ನೀಡುವನು. ಅವುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಗುಣ ಬೆಳೆಸಿಕೊಳ್ಳಬೇಕು. ಕಾಯದಲ್ಲಿ ಗುರು, ಲಿಂಗ ಮತ್ತು ಜಂಗಮವನ್ನು ಕಾಣುತ್ತಿದ್ದೇವೆ. ಅಂತಹ ಕಾಯದಲ್ಲಿ ಜೀವ ಒಳಗೊಂದು ಬೆಳಗುವ ಜ್ಯೋತಿ ಯಂತೆ ಇರುತ್ತದೆ ಎಂದು ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪಕುಮಾರಸ್ವಾಮಿ ಮಾತನಾಡಿ, ಶರಣ ತತ್ವ ಅರಿತು ಆಚರಣೆ ಮಾಡಲು ಪ್ರವಚನ ಕಾರ್ಯಕ್ರಮಗಳನ್ನು ರೂಪಿ ಸುತ್ತಿದ್ದು ವ್ಯಕ್ತಿಯೇ ಗುರುವಾಗಬೇಕೆಂಬುದೇ ಶರಣರ ಆಶಯ. ನಮ್ಮನ್ನು ನಾವು ಅರಿತಾಗ ಶರಣ ಪಥವನ್ನು ವಿಶ್ವ ಪಥವನ್ನಾಗಿ ಮಾಡಬಹುದು ಎಂದರು.

ಕಾರ್ಯಕ್ರಮದಲ್ಲಿ ಮಾತೆ ಜಯದೇವಿತಾಯಿ, ಬಸವ ಪ್ರಕಾಶಸ್ವಾಮೀಜಿ, ಬಸವಗೀತಾ ಮಾತಾಜಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿ ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾವೇರಿ ವಾಜಂತ್ರಿ, ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಬಹ್ರೈನ್ ಶಿವಾನಂದ ಪಾಟೀಲ್, ಮಸ್ಕತ್ ನಂದೀಶ್ವರ್ ನಂದು, ಕಣ್ಣೂರು ಕುಮಾರಸ್ವಾಮಿ, ಎಚ್.ಕೆ.ಚನ್ನಪ್ಪ, ಸುಮಂಗಳ ಆರ್., ಮೃಣಾಲಿನಿ ಆರಾಧ್ಯ, ಅನಿತಾ ನಾಗರಾಜ್, ಚನ್ನಬಸಪ್ಪ ಝಾಲ್ಕಿ, ಕವಿತ ಜೆ., ಎಸ್.ಎಸ್.ಪಾಟೀಲ್, ವೀರೇಶಮೂರ್ತಿ, ಸುನಿತಾ ಅಂಗಡಿ ಕೊಡೇಕಲ್, ಮಹಂತೇಶ್, ಸರಸ್ವತಿ ರಾಮಣ್ಣ, ನೀಲಾಂಬಿಕಾ ದೇವಿ ನಾಗರಾಜು, ಮಾರು ತೇಶ್, ಮಲ್ಲಿಕಾರ್ಜುನಸ್ವಾಮಿ, ಜಯಾನಂದ ಟೋಪು ಗೋಳ, ದೀಪ ತೊಲಗಿ, ಭಾಗ್ಯ ತೆಗ್ಗಳ್ಳಿ, ಶಿವಪುತ್ರಪ್ಪ, ನಾಗನಗೌಡ ಪಾಟೀಲ್ ಉಪಸ್ಥಿತರಿದ್ದರು.

Translate »