ಸಂಸದರಿಂದ ಕೆಸರೆ ನರ್ಮ್ ಯೋಜನೆ ಮನೆಗಳ ಪರಿಶೀಲನೆ
ಮೈಸೂರು

ಸಂಸದರಿಂದ ಕೆಸರೆ ನರ್ಮ್ ಯೋಜನೆ ಮನೆಗಳ ಪರಿಶೀಲನೆ

September 4, 2020

ಮೈಸೂರು, ಸೆ.3(ಆರ್‍ಕೆಬಿ)- ಮೈಸೂ ರಿನ ಹೊರವಲಯದ ಕೆಸರೆಯಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಿರುವ ಮನೆಗಳಿಗೆ ಕೆಲವು ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಇವೆ. ಅವು ಮುಗಿಯುತ್ತಿದ್ದಂತೆ ಯಾದವ ಗಿರಿ ಹಾಗೂ ಮೇದರ ಬ್ಲಾಕ್‍ನಲ್ಲಿ ವಾಸಿ ಸುತ್ತಿರುವವರಿಗೆ ಅಕ್ಟೋಬರ್‍ನಲ್ಲಿ ಮನೆ ಹಸ್ತಾಂತರಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಇಂದಿಲ್ಲಿ ತಿಳಿಸಿದರು.

ನರ್ಮ್ ಯೋಜನೆಯಡಿ ಕೆಸರೆಯಲ್ಲಿ ನಿರ್ಮಿಸಿರುವ 250 ಮನೆಗಳನ್ನು ಪರಿ ಶೀಲಿಸಿದ ಅವರು ಬಳಿಕ ಸುದ್ದಿಗಾರರೊಂ ದಿಗೆ ಮಾತನಾಡಿ, ಇಲ್ಲಿನ ಮನೆಗಳನ್ನು 4 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕಿಟಕಿ ಗಾಜು ಒಡೆದಿವೆ. ನೀರಿನ ಸಂಪು ಗಳಿಗೆ ಮುಚ್ಚಳವಿಲ್ಲ. ಮನೆಗಳಿಗೆ ಬಾಗಿಲು ಇಲ್ಲ. ಇದೆಲ್ಲವನ್ನೂ ಬೇಗ ಸರಿಪಡಿಸಿ, ದಸರಾ ಆರಂಭಕ್ಕೂ ಮುನ್ನ ಸ್ಲಂ ನಿವಾಸಿ ಗಳಿಗೆ ವಿತರಿಸಲಾಗುವುದು ಎಂದರು.

ಇದರಲ್ಲಿ ಜಿ-ಪ್ಲಸ್ 3, ಜಿ ಪ್ಲಸ್ 2 ಮನೆಗಳಿವೆ. ಕೆಲವು ಮನೆಗಳಲ್ಲಿ ಜನರು ಅಕ್ರಮವಾಗಿ ವಾಸಿಸುತ್ತಿದ್ದಾರೆ. ಅವರನ್ನು ಅಲ್ಲಿಂದ ಕಳುಹಿಸಲಾಗುವುದು. ಇಲ್ಲಿರುವ 250 ಮನೆಗಳ ಪೈಕಿ 151 ಮನೆಗಳನ್ನು ಲಾಟರಿ ಮೂಲಕ ನೀಡಲಾಗಿದೆ. ಉಳಿದವರಿಗೆ ಮುಂದಿನ ವಾರದೊಳಗೆ ಲಾಟರಿ ಮೂಲಕ ನಿರ್ಧರಿಸಲಾಗುವುದು ಎಂದರು.

ಯಾದವಗಿರಿ, ಮೇದರ ಬ್ಲಾಕ್ ರೈಲ್ವೆ ಟ್ರಾಕ್ ಸನಿಹದಲ್ಲೇ ಇವೆ. ಮೈಸೂರಿಗೆ ಹೈಸ್ಪೀಡ್ ರೈಲು ತರುವ ಯೋಜನೆಯಿದೆ. ಹೀಗಾಗಿ ರೈಲು ಹೆಚ್ಚು ಸ್ಪೀಡಾಗಿ ಸಂಚ ರಿಸುವುದರಿಂದ ಕಂಪನ (ವೈಬ್ರೇಷನ್) ಸಾಧ್ಯತೆಯಿಂದ ಸಮಸ್ಯೆಯಾಗುತ್ತದೆ. ಹೀಗಾಗಿ ಅಲ್ಲಿನ ಜನರನ್ನು ಇಲ್ಲಿಗೆ ಸ್ಥಳಾಂ ತರಿಸಲಾಗುವುದು. ಇದಕ್ಕೆ ಆ ಭಾಗದ ಜನರು ಸಹಕರಿಸಬೇಕು. ಜನಪ್ರತಿನಿಧಿಗಳ ಮೂಲಕ ಒತ್ತಡ ತರುವ ಕೆಲಸ ಬೇಡ. ಹಾಗೊಂದು ವೇಳೆ ನಾವು ಮನೆ ಸ್ಥಳಾಂ ತರಿಸಿದ ಬಳಿಕವೂ ಅದೇ ಮನೆಯಲ್ಲಿ ಉಳಿದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಖಾಲಿ ಮಾಡಿಸಬೇಕಾಗುತ್ತದೆ ಎಂದರು.

Translate »