ಟಿವಿಎಸ್ ಮೋಟಾರ್ಸ್ ನಿರ್ದೇಶಕ, ಸಿಇಓ ಆಗಿ ರಾಧಾಕೃಷ್ಣನ್ ನೇಮಕ
ಮೈಸೂರು

ಟಿವಿಎಸ್ ಮೋಟಾರ್ಸ್ ನಿರ್ದೇಶಕ, ಸಿಇಓ ಆಗಿ ರಾಧಾಕೃಷ್ಣನ್ ನೇಮಕ

October 26, 2018

ಮೈಸೂರು: ದ್ವಿಚಕ್ರ, ತ್ರಿಚಕ್ರ ವಾಹನ ಕ್ಷೇತ್ರದಲ್ಲಿ ದೇಶದ ಪ್ರಮುಖ ಕಂಪನಿಗಳಲ್ಲೊಂದಾದ ಟಿವಿಎಸ್ ಮೋಟಾರ್ ಕಂಪನಿಯ ಪೂರ್ಣಕಾಲಿಕ ನಿರ್ದೇಶಕರಾಗಿ ಕೆ.ಎನ್.ರಾಧಾ ಕೃಷ್ಣನ್ ನೇಮಕಗೊಂಡಿದ್ದಾರೆ ಎಂದು ಟಿವಿಎಸ್ ಮೋಟಾರ್ ಕಂಪನಿ ಅಧ್ಯಕ್ಷ ವೇಣು ಶ್ರೀನಿವಾಸನ್ ಹೇಳಿದ್ದಾರೆ. ಅವರು ಮುಂದಿನ 5 ವರ್ಷಗಳವರೆಗೆ ಕಂಪನಿಯ ನಿರ್ದೇಶಕ ಮತ್ತು ಸಿಇಓ ಆಗಿ ಕಾರ್ಯ ನಿರ್ವಹಿಸುವರು. ಚೆನ್ನೈನ ಐಐಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಾಧಾಕೃಷ್ಣನ್, ಅಹಮದಾಬಾದ್ ಐಐಎಂನಲ್ಲಿ ಮ್ಯಾನೇಜ್‍ಮೆಂಟ್ ಶಿಕ್ಷಣ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Translate »