ರಾಹುಲ್ ಹುಟ್ಟುಹಬ್ಬ: ಆಶಾ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಗೌರವ
ಮೈಸೂರು

ರಾಹುಲ್ ಹುಟ್ಟುಹಬ್ಬ: ಆಶಾ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಗೌರವ

June 20, 2020

ಮೈಸೂರು, ಜೂ.19(ಆರ್‍ಕೆಬಿ)- ಎಐ ಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಕೊರೊನಾ ವಿರುದ್ಧ ಹೋರಾಟದಲ್ಲಿ ಶ್ರಮಿಸಿದ ಆಶಾ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಮೈಸೂರು ನಗರ ಸಮಿತಿ ಶುಕ್ರವಾರ ಅಭಿನಂದಿಸಿತು.

ಆಶಾ ಕಾರ್ಯಕರ್ತೆಯರನ್ನು ಗೌರ ವಿಸಿ ಬಳಿಕ ಮಾತನಾಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕೋವಿಡ್-19 ಹಾವಳಿ ನಿಯಂತ್ರಿಸಲು ಕೊರೊನಾ ವಾರಿ ಯರ್‍ಗಳಾಗಿ ತಮ್ಮ ಜೀವವನ್ನೂ ಲೆಕ್ಕಿ ಸದೆ ಶ್ರಮಿಸಿದ ಆಶಾ ಕಾರ್ಯಕರ್ತೆಯರ ಕಾರ್ಯ ಪ್ರಶಂಸನೀಯ ಎಂದರು.

ಈ ಸಂದರ್ಭ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಲ್.ಗೌಡ, ಶಿವಣ್ಣ, ಕೆಪಿಸಿಸಿ ವಕ್ತಾರ ಹೆಚ್.ಎ.ವೆಂಕಟೇಶ್, ಕೆಪಿಸಿಸಿ ಸದಸ್ಯ ಶ್ರೀನಾಥ್ ಬಾಬು, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ಬ್ಲಾಕ್ ಅಧ್ಯಕ್ಷರಾದ ಜಿ. ಸೋಮಶೇಖರ್, ಸುಂದರ್ ಕುಮಾರ್, ಡೈರಿ ವೆಂಕಟೇಶ್, ನಿರಾಲ್ ಶಾ, ಸೇವಾ ದಳ ಗಿರೀಶ್, ವಿಶ್ವ, ಗುಣಶೇಖರ್, ತ್ಯಾಗ ರಾಜ್, ಮಾಧ್ಯಮ ವಕ್ತಾರ ಮಹೇಶ್ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು

Translate »