ಮಧುವನದ ನಿವಾಸಿಗಳನ್ನು ಕಾಡಿದ ಮಳೆರಾಯ….
ಮೈಸೂರು

ಮಧುವನದ ನಿವಾಸಿಗಳನ್ನು ಕಾಡಿದ ಮಳೆರಾಯ….

October 17, 2021

ಮೈಸೂರು,ಅ.೧೬(ಎಂಕೆ)- ‘ಮಧು ವನ’ಕ್ಕೆ ಮಳೆಯ ಕಾಟ… ನೀರಿನ ರಭಸಕ್ಕೆ ಕೊಚ್ಚಿಹೋದ ಸಿಲಿಂಡರ್, ಅಕ್ಕಿ, ಬೆಳೆ, ಬಟ್ಟೆ ಇತ್ಯಾದಿ ವಸ್ತುಗಳು…!
ಮೈಸೂರಿನಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ಎಂಜಿ ರಸ್ತೆಯಲ್ಲಿರುವ ‘ಮಧುವನ’ ಕಾಲೋನಿ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಮನೆಯೊಳಗೆಲ್ಲಾ ನುಗ್ಗಿದ್ದ ನೀರು, ‘ಹೂ’ ಮಾರಾಟ ಮಾಡಿಕೊಂಡು ಜೀವನ ಸಾಗಿ ಸುತ್ತಿದ್ದ ನಿವಾಸಿಗಳ ಬದುಕನ್ನು ಅತಂತ್ರ ವನ್ನಾಗಿಸಿದೆ. ಸುಮಾರು ೬೦-೭೦ ಮನೆಗಳಿರುವ ‘ಮಧುವನ’ ಕಾಲೋನಿ ಯಲ್ಲಿನ ಸುಮಾರು ೨೦-೩೦ ಮನೆಗಳಿಗೆ ನೀರು ನುಗ್ಗಿದ್ದು, ೧೦-೧೫ ಮನೆಗಳಲ್ಲಿ ಗೃಹ ಬಳಕೆ ವಸ್ತುಗಳು ಹಾಗೂ ಆಹಾರ ಪದಾರ್ಥಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಹೋಗಿವೆ.
ಮೊದಲೇ ತಗ್ಗು ಪ್ರದೇಶದಲ್ಲಿರುವ ಕಾಲೋನಿಯಲ್ಲಿನ ರಸ್ತೆಗಳು ಮನೆಗಳ ಬಾಗಿಲಿನ ಹೊಸ್ತಿಲಿಗಿಂತ ಎತ್ತರದಲ್ಲಿರುವುದು ಹಾಗೂ ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು ನಿವಾಸಿ ಗಳ ನಿದ್ದೆಗೆಡಿಸಿದೆ. ಮನೆಯೊಳಗಿದ್ದ ವಸ್ತು ಗಳೆಲ್ಲ್ಲವೂ ನೀರಿನಲ್ಲಿ ತೊಯ್ದಿದ್ದು, ಒಂದು ಹೊತ್ತಿನ ಊಟಕ್ಕೂ ಅಕ್ಕಿ-ಬೆಳೆ ಇಲ್ಲದಂತಾ ಗಿದೆ. ೨ ಕಾರು, ಒಂದೆರಡು ಸ್ಕೂಟರ್ ಜಖಂಗೊAಡಿವೆ. ಕೆಲವು ಮನೆಗಳ ಗೋಡೆ ಕುಸಿದಿದ್ದು, ಯಾವಾಗ ಏನಾಗು ತ್ತದೋ ಎಂಬ ಆತಂಕ ಸೃಷ್ಟಿಯಾಗಿದೆ.

ತಡೆಗೋಡೆಯಂತಿದ್ದ ಕಾಂಪೌAಡ್ ಕುಸಿತ: ಕಳೆದ ೨೦ ವರ್ಷಗಳಿಂದ ಈ ರೀತಿ ಮನೆಯೊಳಗೆ ನೀರು ನುಗ್ಗಿರಲಿಲ್ಲ. ಮನೆಗಳ ಕಡೆ ಹರಿದುಬರುವ ನೀರಿಗೆ ತಡೆಗೋಡೆಯಂತಿದ್ದ ಪಕ್ಕದ ಖಾಸಗಿ ಕಟ್ಟಡವೊಂದರ ಕಾಂಪೌAಡ್ ಕುಸಿದು ಬಿದ್ದಿದ್ದರಿಂದಾಗಿ ಕಾಲೋನಿಯ ಒಳಗೆ ನೇರವಾಗಿ ಮಳೆ ನೀರು ನುಗ್ಗಲು ಸಾಧ್ಯ ವಾಯಿತು. ಅಲ್ಲದೆ ರಸ್ತೆ ಬದಿಯಲ್ಲಿರುವ ಮಳೆ ನೀರಿನ ಚರಂಡಿ ಮುಚ್ಚಿಹೋಗಿ ದ್ದರಿಂದ ಬೇರೆ ಜಾಗವಿಲ್ಲದೆ ಮನೆಗಳ ಒಳಗೆ ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳೆ ಲ್ಲವೂ ನೀರಿನ ಪಾಲಾಗಿವೆ ಎಂದು ಇಲ್ಲಿನ ನಿವಾಸಿ ಸುಬ್ಬಮ್ಮ ‘ಮೈಸೂರು ಮಿತ್ರ’ ನಲ್ಲಿ ತಮ್ಮ ಅಳಲು ತೋಡಿಕೊಂಡರು.

ಜೋರಾಗಿ ಮಳೆ ಬರಬಹುದು ಎಂದರೆ ನಮಗೆ ಭಯವಾಗುತ್ತದೆ. ಇದಕ್ಕೆ ಚರಂಡಿ ವ್ಯವಸ್ಥೆ ಸರಿಯಿಲ್ಲದಿರುವುದು, ಮನೆಗಳ ಬಾಗಿಲಿನ ಹೊಸ್ತಿಲಿಗಿಂತ ಎತ್ತರಕ್ಕೆ ರಸ್ತೆಗಳನ್ನು ಮಾಡಿರುವುದು ಹಾಗೂ ಮನೆ ಮುಂದಿನ ಚರಂಡಿ ಸರಿ ಯಿಲ್ಲದಿರುವುದು ಮುಖ್ಯ ಕಾರಣವಾಗಿದೆ. ಈ ಹಿಂದೆಯೂ ಹಲವು ಬಾರೀ ಮಳೆ ಅನಾಹುತಗಳು ಉಂಟಾಗಿದ್ದರೂ ಇಷ್ಟರ ಮಟ್ಟಕ್ಕೆ ಹಾನಿಯಾಗಿರಲಿಲ್ಲ ಎಂದರು.

ಗೋಡೆ ಕುಸಿತ: ೩-೪ ಅಡಿಯಷ್ಟು ನೀರು ನುಗ್ಗಿದ ಪರಿಣಾಮ ಒಂದೆರಡು ಮನೆಗಳ ಗೋಡೆ ಕುಸಿದ್ದು, ಆತಂಕ ಹೆಚ್ಚಿಸಿದೆ. ಮನೆಯೊಂದರ ಗೋಡೆಯ ತಳಭಾಗವೇ ಕುಸಿದಿದ್ದು, ಯಾವಾಗ ಸಂಪೂರ್ಣವಾಗಿ ಬೀಳುತ್ತದೋ ಎಂಬ ಭಯ ಕಾಡುತ್ತಿದೆ. ಸದ್ಯ ಗೋಡೆ ಕುಸಿದ ಜಾಗಕ್ಕೆ ಕಲ್ಲುಗಳನ್ನು ಜೋಡಿಸ ಲಾಗಿದ್ದು, ಆತಂಕದಲ್ಲೇ ಇದ್ದೇವೆ ಎಂದು ನಿವಾಸಿ ಸುವರ್ಣ ತಿಳಿಸಿದರು.

ಮನೆಗಳ ಒಳ-ಹೊರಗೆ ತುಂಬಿದ ನೀರಿನಲ್ಲಿ ಸ್ಕೂಟರ್, ಮಂಚ, ಫ್ರಿಜ್, ಸಿಲಿಂ ಡರ್, ಕುರ್ಚಿ, ಅಕ್ಕಿ ಮೂಟೆ, ತರಕಾರಿ, ವ್ಯಾಪಾರಕ್ಕೆಂದು ತಂದಿದ್ದ ‘ಹೂ’ವೆಲ್ಲಾ ತೇಲಿ ಹೋಗಿವೆ. ಬಟ್ಟೆಗಳೆಲ್ಲಾ ಹಾಳಾ ಗಿದ್ದು, ದಿನವೆಲ್ಲಾ ತೊಳೆಯುವ ಕೆಲಸವೇ ನಡೆದಿದೆ. ಮನೆಯೊಳಗೆ ತುಂಬಿದ್ದ ನೀರನ್ನು ಹೊರಕ್ಕೆ ಹಾಕಿ ನಿದ್ದೆ ಮಾಡುವಷ್ಟರಲ್ಲಿ ಬೆಳಗಿನ ಜಾವ ೪ ಗಂಟೆಯಾಗಿತ್ತು ಎಂದು ನಿವಾಸಿಯೊಬ್ಬರು ಮಾಹಿತಿ ನೀಡಿದರು.

ಪಾಲಿಕೆ ಅಧಿಕಾರಿಗಳು ಭೇಟಿ: ‘ಮಧು ವನ’ ಕಾಲೋನಿಯ ಹಲವು ಮನೆಗಳಿಗೆ ನೀರು ನುಗ್ಗಿದೆ ಎಂಬ ಮಾಹಿತಿ ತಿಳಿ ಯುತ್ತಿದ್ದಂತೆ ಸ್ಥಳಕ್ಕೆ ನಗರಪಾಲಿಕೆ ಆಯುಕ್ತ ಲಕ್ಷಿö್ಮಕಾಂತ್ ರೆಡ್ಡಿ, ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್ ಭೇಟಿ ನೀಡಿ, ನೀರನ್ನು ಹೊರಹಾಕಲು ಸಹಕರಿಸಿದ್ದಾರೆ.
ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಲಕ್ಷಿö್ಮ ಕಾಂತ್ ರೆಡ್ಡಿ, ಎಂಜಿ ರಸ್ತೆಯಲ್ಲಿನ ‘ಮಧು ವನ’ ಕಾಲೋನಿ ತಗ್ಗು ಪ್ರದೇಶದಲ್ಲಿದ್ದು, ಜೋರು ಮಳೆ ಬಂದಿದ್ದರಿAದ ಹಲ ವಾರು ಮನೆಗಳಿಗೆ ನೀರು ನುಗ್ಗಿದೆ. ತಡ ರಾತ್ರಿಯವರೆಗೂ ನಿವಾಸಿಗಳಿಗೆ ಸಹಕರಿ ಸಿದ್ದು, ಸರಾಗವಾಗಿ ಮಳೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡ ಲಾಗುವುದು ಎಂದು ತಿಳಿಸಿದರು.

 

Translate »