ರಾಜ್ಯಸಭೆಗೆ ಆಯ್ಕೆ: ದೇವೇಗೌಡರ ಅಭಿನಂದಿಸಿದ ಜೆಡಿಎಸ್ ಮುಖಂಡರು
ಮೈಸೂರು

ರಾಜ್ಯಸಭೆಗೆ ಆಯ್ಕೆ: ದೇವೇಗೌಡರ ಅಭಿನಂದಿಸಿದ ಜೆಡಿಎಸ್ ಮುಖಂಡರು

June 14, 2020

ಮೈಸೂರು, ಜೂ.13- ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿ ರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಜೆಡಿಎಸ್ ಮುಖಂ ಡರು ಅಭಿನಂದಿಸಿದ್ದಾರೆ. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಜ್ (ಅಬ್ದುಲ್ಲಾ), ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮುಖಂಡರಾದ ಸಯ್ಯದ್ ರಹಮತ್ ಉಲ್ಲಾ, ಹಾಶಿಂ ಅಲಿಖಾನ್(ನೂರಿ) ಹಾಗೂ ಶಬ್ಬೀರ್ ಅಹಮದ್ ಖಾನ್ ಅಭಿನಂದನೆ ಸಲ್ಲಿಸಿ ದ್ದಾರೆ. ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಿದ್ದು ಪ್ರತಿಯೊಬ್ಬರಲ್ಲೂ ಸಂತಸ ತಂದಿದೆ. ರಾಜ್ಯಸಭೆಯಲ್ಲಿ ರಾಜ್ಯದ ವಿಚಾರಗಳ ಬಗ್ಗೆ ಧ್ವನಿ ಎತ್ತುವ ಸಮರ್ಥ ನಾಯರೊಬ್ಬರ ಅಗತ್ಯವಿತ್ತು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ನಾಡು-ನುಡಿ, ನೆಲ-ಜಲದ ವಿಷಯ ಬಂದಾಗ ರಾಜಕಾರಣಿ ಎಂಬುದ ಮರೆತು ಮಣ್ಣಿನ ಮಗನಾಗಿ ನಿಂತು ಹೋರಾಡುತ್ತಾರೆ. ದೇವೇಗೌಡರ ಪ್ರವೇಶದಿಂದ ರಾಜ್ಯಸಭೆಯ ಘನತೆ ಹೆಚ್ಚಿದೆ. ಅವರಿಗೆ ಆರೋಗ್ಯ, ಆಯುಷ್ಯ ಹಾಗೂ ಮತ್ತಷ್ಟು ಶಕ್ತಿ ನೀಡಿ, ಹರಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಅಬ್ದುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »