ಮೈಸೂರು ಸರ್ಕಾರಿ ಅತಿಥಿ ಗೃಹದ ಆರ್ಚ್ ಬಳಿಯ ಎರಡು ಪಾರಂಪರಿಕ ಕಂಬಗಳ ಸುರಕ್ಷಿತ ಸ್ಥಳಾಂತರ
ಮೈಸೂರು

ಮೈಸೂರು ಸರ್ಕಾರಿ ಅತಿಥಿ ಗೃಹದ ಆರ್ಚ್ ಬಳಿಯ ಎರಡು ಪಾರಂಪರಿಕ ಕಂಬಗಳ ಸುರಕ್ಷಿತ ಸ್ಥಳಾಂತರ

June 14, 2020

ಮೈಸೂರು, ಜೂ.13(ಎಸ್‍ಬಿಡಿ)- ಮೈಸೂರಿನ ಸರ್ಕಾರಿ ಅತಿಥಿ ಗೃಹದ ಉತ್ತರ ಭಾಗದ ಸ್ವಾಗತ ಕಮಾನು ಬಳಿಯಿದ್ದ ಎರಡು ಪಾರಂಪರಿಕ ಕಂಬಗಳನ್ನು ಶನಿವಾರ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಮೈಸೂರು-ಬೆಂಗಳೂರು ರಸ್ತೆ ಭಾಗದ ಸರ್ಕಾರಿ ಅತಿಥಿ ಗೃಹದ ಪಾರಂಪರಿಕ ಆರ್ಚ್ ಮುಂಭಾಗ ವಿದ್ದ 2 ಪಾರಂಪರಿಕ ಕಂಬಗಳನ್ನು ಸ್ವಲ್ಪವೂ ಹಾನಿ ಯಾಗದಂತೆ ಅತ್ಯಂತ ಸುರಕ್ಷಿತವಾಗಿ ಸ್ಥಳಾಂತರಿಸ ಲಾಯಿತು. 2 ಕ್ರೇನ್, ಜೆಸಿಬಿ ಮೂಲಕ 20ಕ್ಕೂ ಹೆಚ್ಚು ಮಂದಿ ಈ ಸೂಕ್ಷ್ಮ ಕಾರ್ಯವನ್ನು ಪೂರ್ಣಗೊಳಿಸು ವಲ್ಲಿ ಯಶಸ್ವಿಯಾದರು. ವಲಯ ಕಚೇರಿ 7ರ ಸಹಾ ಯಕ ಇಂಜಿನಿಯರ್ ಸ್ಥಳಾಂತರವಾಗುವವರೆಗೂ ಅಲ್ಲಿಯೇ ಇದ್ದು, ನಿಗಾ ವಹಿಸಿದ್ದರು. ರಸ್ತೆ ಅಭಿವೃದ್ಧಿ ಕಾಮಗಾರಿ ಗುತ್ತಿಗೆ ಪಡೆದಿರುವ ಎನ್.ಎಸ್.ಜಗ ನ್ನಾಥ್, ಪಾರಂಪರಿಕ ಕಂಬಗಳ ಸ್ಥಳಾಂತರ ಕಾರ್ಯ ವನ್ನೂ ವಹಿಸಿಕೊಂಡು, ಸಮರ್ಪಕವಾಗಿ ನಡೆಸಿಕೊಟ್ಟರು. ವಲಯ ಕಚೇರಿ 7ರ ಅಭಿವೃದ್ಧಿ ಅಧಿಕಾರಿ ಮಹೇಶ್ ಸೇರಿದಂತೆ ಪಾಲಿಕೆ ಸಿಬ್ಬಂದಿ ಸ್ಥಳದಲ್ಲಿದ್ದರು.

ಗಾರೆಯಿಂದ ನಿರ್ಮಿಸಿರುವ ಈ ಪಾರಂಪರಿಕ ಕಂಬಗಳು 12 ಅಡಿ ಎತ್ತರವಿದ್ದು, ತಳಭಾಗದಲ್ಲಿ 3, ಮೇಲಾರ್ಧ ಎರಡೂವರೆ ಅಡಿ ಅಗಲವಿದೆ. ಆರ್ಚ್‍ನ ಆಜುಬಾಜು ಸುಮಾರು 10 ಅಡಿ ಮುಂದಕ್ಕಿದ್ದ ಈ ಕಂಬಗಳನ್ನು ಆರ್ಚ್‍ನ ನೇರಕ್ಕೆ ಸ್ಥಳಾಂತರಿಸಲಾಗಿದೆ. ತಳ ಭಾಗಕ್ಕೆ ಕಾಂಕ್ರೀಟ್ ಬೆಡ್ ಹಾಕಿ, ಅದರ ಮೇಲೆ ಕಂಬಗಳ ನಿಲ್ಲಿಸಿ, ಸುತ್ತಲೂ ಕಬ್ಬಿಣ ಹಾಗೂ ಕಾಂಕ್ರೀಟ್ ನಿಂದ ಭದ್ರಗೊಳಿಸಲಾಗಿದೆ. ಶನಿವಾರ ಸಂಜೆ 4 ಗಂಟೆಗೆ ಆರಂಭವಾದ ಸ್ಥಳಾಂತರ ಕಾರ್ಯಾಚರಣೆ ರಾತ್ರಿ 8ಕ್ಕೆ ಅಂತ್ಯಗೊಂಡಿತು. ಈ ಕಂಬಗಳ ಎದುರಿಗೆ ರಸ್ತೆಯ ಮತ್ತೊಂದು ಬದಿಯಲ್ಲಿರುವ ಮತ್ತೆರಡು ಪಾರಂಪರಿಕ ಕಂಬಗಳು ಹಾಗೆಯೇ ಇವೆ.

ಫೈವ್‍ಲೈಟ್ ವೃತ್ತದಿಂದ ಕರ್ನಾಟಕ ಪೊಲೀಸ್ ಅಕಾಡೆಮಿ ಕಾಂಪೌಂಡ್‍ವರೆಗೆ ಸುಮಾರು 400 ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದೆ. ಆದರೆ ಈ 2 ಪಾರಂಪರಿಕ ಕಂಬಗಳು ರಸ್ತೆ ಮಧ್ಯದಲ್ಲಿ ಉಳಿದಿದ್ದವು. ಪರಿಣಾಮ ರಸ್ತೆ ಅಗಲೀ ಕರಣವಾದರೂ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಹಾಗಾಗಿ ಕಂಬಗಳ ಸ್ಥಳಾಂತರಕ್ಕೆ ಪಾಲಿಕೆ ಚಿಂತನೆ ನಡೆಸಿ, ಪಾರಂಪರಿಕ ತಜ್ಞ ಸಮಿತಿ ಹಾಗೂ ಜಿಲ್ಲಾಧಿಕಾರಿ ಗಳ ಅನುಮತಿ ಪಡೆದು ಕಾರ್ಯ ಪೂರ್ಣಗೊಳಿಸಿದೆ.

ಅಲ್ಲದೆ ಪಾರಂಪರಿಕ ಸ್ವಾಗತ ಕಮಾನು ಸಂರಕ್ಷ ಣೆಗೆ ವಲಯ ಕಚೇರಿ-7ರ ವತಿಯಿಂದ ಸುತ್ತಲೂ ಕಬ್ಬಿಣದ ಗ್ರಿಲ್ಸ್ ತಡೆಗೋಡೆ ಅಳವಡಿಸುವ ಕಾಮ ಗಾರಿಯನ್ನು ಆರಂಭಿಸಲಾಗಿದೆ. ಒಂದೂವರೆ ಅಡಿ ಸಿಮೆಂಟ್ ಕಾಂಕ್ರಿಟ್ ಬೇಸ್ ಮೇಲೆ 2 ಮೀಟರ್ ಎತ್ತರಕ್ಕೆ ಪಾರಂಪರಿಕ ಶೈಲಿಗೆ ಹೊಂದುವ ಕಬ್ಬಿಣದ ಸಲಾಕೆ ಗಳಿಂದ ರಕ್ಷಣಾ ಬೇಲಿ ನಿರ್ಮಿಸಲಾಗುತ್ತಿದೆ. ಆರ್ಚ್‍ನ ನೇರಕ್ಕೆ ಸ್ಥಳಾಂತರಿಸಿರುವ ಕಂಬಗಳು ಹಾಗೂ ಆರ್ಚ್ ನಡುವೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ ದಂತೆ ಅಲ್ಲಿ ಪಾರಂಪರಿಕ ಶೈಲಿಯಲ್ಲೇ ಗೋಡೆ ನಿರ್ಮಿಸ ಲಾಗುತ್ತದೆ ಎಂದು ವಲಯ ಕಚೇರಿ 7ರ ಸಹಾಯಕ ಇಂಜಿನಿಯರ್ ಶ್ವೇತಾ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »