ಸಮರ್ಪಣಾ ಮನೋಭಾವದಿಂದ ನಿತ್ಯ ಜನಪರ ಸೇವೆಯಲ್ಲಿ ತೊಡಗಿರುವ ಶಾಸಕ ರಾಮದಾಸ್
ಮೈಸೂರು

ಸಮರ್ಪಣಾ ಮನೋಭಾವದಿಂದ ನಿತ್ಯ ಜನಪರ ಸೇವೆಯಲ್ಲಿ ತೊಡಗಿರುವ ಶಾಸಕ ರಾಮದಾಸ್

October 1, 2021

ಮೈಸೂರು, ಸೆ.30(ಆರ್‍ಕೆಬಿ)- ಕೃಷ್ಣರಾಜ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸಿ ನೊಂದಿಗೆ ಕಾರ್ಯೋನ್ಮುಖರಾಗಿರುವ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಕಳೆದ ಸೆ.17ರಿಂದ 20 ದಿನಗಳ ಮೋದಿ ಯುಗ್ ಉತ್ಸವ ಕಾರ್ಯಕ್ರಮ ನಡೆಸುತ್ತಿದ್ದು, ಇದು ಅ.6ರವರೆಗೆ ನಡೆಯಲಿದೆ. ಅದರ ಭಾಗವಾಗಿ ಮೈಸೂರು ವಿದ್ಯಾರಣ್ಯಪುರಂ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಉದ್ಯಾನವನದಲ್ಲಿ ಸಚಿವ ಕೆ.ಸುಧಾಕರ್ ಸಮ್ಮುಖದಲ್ಲಿ ಅನೇಕ ಜನಪರ ಕಾರ್ಯಕ್ರಮಗಳು ನಡೆದವು.

ಆರೋಗ್ಯ ಸಚಿವ ಕೆ.ಸುಧಾಕರ್ ಕೃಷ್ಣಮೂರ್ತಿ ಪುರಂನಲ್ಲಿರುವ ಭಗಿನಿ ಸೇವಾ ಸಮಾಜದಲ್ಲಿ ಕೋವಿಡ್ ಲಸಿಕಾಕರಣಕ್ಕೆ ಚಾಲನೆ ನೀಡಿದರು.
ಬಳಿಕ ಜಯನಗರ ಆಸ್ಪತ್ರೆಯಲ್ಲಿ `ಸಂಗೀತ ಥೆರಪಿ’ ಅನುಷ್ಠಾನ, ವಿದ್ಯಾರಣ್ಯಪುರಂ ಒಕ್ಕಲಿಗರ ಸಮು ದಾಯ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮೇಳದ ಉದ್ಘಾಟನೆ ನೆರವೇರಿಸಿದರು.

ನಂತರ ವಿದ್ಯಾರಣ್ಯಪುರಂ ಉದ್ಯಾನವನದಲ್ಲಿ ಸಮಗ್ರ ಆರೋಗ್ಯ ಯೋಜನೆಯ ಅನುಷ್ಠಾನಕ್ಕೆ ಚಾಲನೆ, ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಣೆ, ಆಜಾದಿ ಕಿ ಅಮೃತ್ ಮಹೋತ್ಸವ್ ಆಚರಣೆ ಅಂಗವಾಗಿ ಸರ್ಕಾರದಿಂದ ನೀಡಿರುವ ಜನೌಷಧಿ ಕೇಂದ್ರದ ಪ್ರಥಮ ಚಿಕಿತ್ಸಾ ಪೆಟ್ಟಿಗೆ ವಿತರಣೆ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಲಕರಣೆ ವಿತರಣೆ, ತಾನ್‍ಸೇನ್ ಸಂಗೀತ ಥೆರಪಿ ಕೇಂದ್ರದ ಉದ್ಘಾಟನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಸಚಿವ ಕೆ.ಸುಧಾಕರ್, ಶಾಸಕ ರಾಮದಾಸ್ ಅವರು ನಿತ್ಯವೂ ಸೇವೆ ಹಾಗೂ ಸಮರ್ಪಣಾ ಭಾವದೊಂದಿಗೆ ಜನಪರ ಕಾರ್ಯಕ್ರಮ ಗಳನ್ನು ರೂಪಿಸುವ ಮೂಲಕ ಮೋದಿ ಜನ್ಮದಿನಕ್ಕೆ ಉತ್ತಮ ಉಡುಗೊರೆ ನೀಡಿದ್ದಾರೆ. ಇದು ಖಂಡಿತ ವಾಗಿ ಮೋದಿಯವರಿಗೆ ತಲುಪಲಿದೆ ಎಂದರು.

ಶಾಸಕರಾದವರು ರಸ್ತೆ, ಕಟ್ಟಡ ಸೇರಿದಂತೆ ಅನೇಕ ಕೆಲಸ ಕಾರ್ಯಗಳನ್ನು ಮಾಡುವುದು ಸಾಮಾನ್ಯ. ಆದರೆ ಶಾಸಕ ರಾಮದಾಸ್ ಕ್ಷೇತ್ರದ ಪ್ರತಿ ಕುಟುಂಬದ ಸದಸ್ಯರಿಗೂ ಆರೋಗ್ಯ ವಿಚಾರಿಸಿ, ಅವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವುದು ವಿನೂತನ ವಾಗಿದೆ ಎಂದು ಸುಧಾಕರ್ ಶ್ಲಾಘಿಸಿದರು.

ಇಂದು ಕೋವಿಡ್ ಕಾರಣದಿಂದಾಗಿ ರಕ್ತದಾನಿಗಳ ಸಂಖ್ಯೆ ಕಡಿಮೆಯಾಗಿದೆ. ರಕ್ತದ ಅವಶ್ಯಕತೆ ಮಾತ್ರ ಹಾಗೇ ಇದೆ. ಎಲ್ಲವನ್ನು ಕೃತಕ ಮಾಡಬಹುದು. ಆದರೆ ಕೃತಕ ರಕ್ತ ಮಾತ್ರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ರಕ್ತಕ್ಕೆ ರಕ್ತವೇ ಪರ್ಯಾಯ. ಬೇರೆಯವರಿಗೆ ರಕ್ತದಾನ ಮಾಡಿ ಜೀವ ಉಳಿಸುವುದು ಮಹಾ ಪುಣ್ಯದ ಕೆಲಸ. ಹಾಗಾಗಿ ಅಂಥ ಶಿಬಿರವನ್ನು ರಾಮದಾಸ್ ಆಯೋ ಜಿಸಿರುವುದು ಪರಿಣಾಮಕಾರಿ ಕೆಲಸವಾಗಲಿದೆ ಎಂದು ಪ್ರಶಂಸಿಸಿದರು.
50 ಕೋಟಿ ಜನರಿಗೆ ಆರೋಗ್ಯ ವಿಮಾ ಯೋಜನೆ ಯನ್ನು ಮೋದಿ ನಾಯಕತ್ವದಲ್ಲಿ ಜಾರಿ ಮಾಡಲಾಗಿದೆ. ಪ್ರತೀ ಕುಟುಂಬಕ್ಕೆ ಒಂದು ವರ್ಷದಲ್ಲಿ 5 ಲಕ್ಷ ಅವರ ಚಿಕಿತ್ಸೆಗೆ ಉಪಯೋಗಿಸಿಕೊಳ್ಳಬಹುದು. ಇಂಥ ಪ್ರಯೋಗ ಈ ಹಿಂದೆ ನಾವು ದೇಶದಲ್ಲಿ ನೋಡಿಲ್ಲ. ಬಡತನ ರೇಖೆಗಿಂತ ಕೆಳಗೆ ಇರುವವರು ಕಾಯಿಲೆ ಬಂದರೆ ಲಕ್ಷಾಂತರ ರೂ. ಖರ್ಚು ಮಾಡಲು ಹಣ ಇರುವುದಿಲ್ಲ. ಮನೆ ಮಾರಿದರೂ ಅವರಿಗೆ ಲಕ್ಷಾಂತರ ರೂ. ಸಿಗಲ್ಲ. ಸಾಲವೂ ಸಿಗುವುದಿಲ್ಲ. ಹಾಗಾಗಿ ದೇಶದ ಜನರ ಆರೋಗ್ಯ ದೃಷ್ಟಿಯಿಂದ ಮೋದಿಯವರು ಇಂತಹ ಮಹತ್ವಾಕಾಂಕ್ಷೆಯ ಯೋಜನೆಯನ್ನು ದೇಶದ ಜನರಿಗೆ ಕೊಡುಗೆ ಕೊಟ್ಟಿದ್ದಾರೆ ಎಂದರು.

ಜನಪರ ಆರೋಗ್ಯ ಕರ್ನಾಟಕ ಕಟ್ಟುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ನಿರ್ಧಾ ರಕ್ಕೆ ಪೂರಕವಾಗಿ ಶಾಸಕ ರಾಮದಾಸ್ ತಮ್ಮ ಕ್ಷೇತ್ರದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ಹೇಳಿದರು.

ಲಸಿಕೆ ಮಹತ್ವ ತಿಳಿದ ಮೇಲೆ ಜನರೇ ಮುಂದೆ ಬರುತ್ತಿದ್ದಾರೆ: ಕೋವಿಡ್ ಮಾರ್ಗಸೂಚಿಯಂತೆ ಕೋವಿಡ್ ನಿಯಂತ್ರಣದಲ್ಲಿಲ್ಲ ಎಂದು ಕೆಲವರು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಲೇ ಇರುತ್ತಾರೆ. ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದೆಲ್ಲಾ ಟೀಕೆ ಮಾಡಿ ದರು. ಲಸಿಕೆ ವಿರುದ್ಧ ತಪ್ಪು ಸಂದೇಶ, ಮಾಹಿತಿಗಳನ್ನು ಹರಡಿ, ವಿದ್ಯಾವಂತರು ಕೂಡ ಲಸಿಕೆ ಪಡೆಯಲು ಹಿಂದೇಟು ಹಾಕಿ, ಮುಂದೆ ನೋಡೋಣ ಎಂದು ಆಲೋಚನೆ ಮಾಡಿದ್ದರು. ಈಗ ಲಸಿಕೆಯ ಮಹತ್ವ ತಿಳಿದ ಮೇಲೆ ಜನರೇ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ ಎಂದರು. ಈಗ ದೇಶದ 79-80 ದೇಶ ಗಳ ಮುಖ್ಯಸ್ಥರು ಪ್ರಧಾನಮಂತ್ರಿಯನ್ನು ಪ್ರಶಂಸೆ ಮಾಡಿದ್ದಾರೆ. 2ನೇ ಅಲೆ ನಮಗೆ ಬಂದಾಗ ಮೊದಲ ಅಲೆಯಲ್ಲಿ ಭಾರತ ಸಹಕಾರ ಕೊಟ್ಟಿತ್ತು ಎಂದು ವಿದೇಶಗಳೇ ನಮಗೆ ಕೋವಿಡ್ ಕಿಟ್, ಆಮ್ಲಜನಕ ವನ್ನು ತಮ್ಮದೇ ವಿಮಾನದಲ್ಲಿ ಭಾರತಕ್ಕೆ ರವಾನಿಸಿದರು. ಇದು ಮೋದಿ ವಿದೇಶಗಳಿಗೆ ಸಹಾಯ ಮಾಡಿದ್ದರಿಂ ದಲೇ 2ನೇ ಅಲೆಯಲ್ಲಿ ನಮಗೆ ಇವೆಲ್ಲವೂ ಸಿಗುವಂತಾ ಯಿತು. ರಾಜ್ಯದಲ್ಲಿ 5.60 ಕೋಟಿಗೂ ಹೆಚ್ಚು ಲಸಿಕೆ ಹಾಕಲಾಗಿದೆ. ನಿನ್ನೆ ಒಂದೇ ದಿನ 10,60,000 ಲಸಿಕೆ ನೀಡಲಾಗಿದೆ. ಕೋವಿಡ್ ಸಂಪೂರ್ಣ ನಿರ್ನಾಮಕ್ಕೆ 2 ಡೋಸ್ ಲಸಿಕೆ ಮುಖ್ಯ ಎಂದರು. ಕೋವಿಡ್ ಬಂದ ಮೇಲೆ ಆರೋಗ್ಯ ಕ್ಷೇತ್ರದ ಮಹತ್ವ ಏನೆಂಬುದು ಗೊತ್ತಾ ಗಿದೆ ಎಂದರು. ನಮ್ಮ ಸರ್ಕಾರ ಬರುವವರೆಗೆ ಇದ್ದದ್ದು ಕೇವಲ 4800 ಆಕ್ಸಿಜನ್ ಬೆಡ್‍ಗಳು. ಈಗ ಒಂದೇ ವರ್ಷದಲ್ಲಿ 30,000ಕ್ಕೂ ಹೆಚ್ಚಿನ ಆಕ್ಸಿಜನ್ ಬೆಡ್‍ಗಳಿವೆ. ಅಲ್ಲದೆ ಅನೇಕ ಸೌಕರ್ಯಗಳನ್ನು ಹೆಚ್ಚಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಗಣಪತಿ ಸಚ್ಚಿದಾನಂದ ಆಶ್ರ ಮದ ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ, ಶಾಸಕ ಎಸ್.ಎ.ರಾಮದಾಸ್, ಬೆಂಗಳೂರು ನಿಮ್ಹಾನ್ಸ್ ನ್ಯೂರೋ ಸೈಕಾಲಜಿ ಯೂನಿಟ್ ವಿಭಾಗದ ಡಾ. ಶಾಂತಲಾ ಹೆಗಡೆ, ಡಿಎಚ್‍ಓ ಡಾ.ಕೆ.ಹೆಚ್.ಪ್ರಸಾದ್, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಜಿಲ್ಲಾ ಆರ್‍ಸಿ ಹೆಚ್ ಅಧಿಕಾರಿ ಜಯಂತ್, ತಾಲೂಕು ಆರೋಗ್ಯಾಧಿ ಕಾರಿ ಮಹದೇವಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಕ್ಷೇತ್ರ ಅಧ್ಯಕ್ಷ ಎಂ.ವಡಿವೇಲು, ಮುಖಂಡರಾದ ನಾಗೇಂದ್ರಕುಮಾರ್, ರಾಜೇಶ್, ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದರು.

Translate »