ಮೈಸೂರಲ್ಲಿ ಭಾರೀ ಮಳೆ: ಧರೆಗುರುಳಿದ ಮರಗಳು ತಗ್ಗುಪ್ರದೇಶದ ಮನೆಗಳಿಗೆ ನೀರು
ಮೈಸೂರು

ಮೈಸೂರಲ್ಲಿ ಭಾರೀ ಮಳೆ: ಧರೆಗುರುಳಿದ ಮರಗಳು ತಗ್ಗುಪ್ರದೇಶದ ಮನೆಗಳಿಗೆ ನೀರು

October 1, 2021

ಮೈಸೂರು, ಸೆ.30(ಎಂಕೆ)- ಮೈಸೂರಿನಲ್ಲಿ ಗುರುವಾರ ಸುರಿದ ಭಾರೀ ಮಳೆಗೆ ಎರಡು ಬೃಹತ್ ಮರಗಳು ಧರೆಗುರುಳಿದ್ದು, ತಗ್ಗು ಪ್ರದೇಶದಲ್ಲಿನ ಬಡಾವಣೆಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ.

ಕಳೆದ 15 ದಿನಗಳಿಂದ ಬಿಡುವು ನೀಡಿದ್ದ ಮಳೆ ಗುರುವಾರ 2 ಗಂಟೆ ಗಳಿಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿ ಯಿತು. ಸಂಜೆ 5 ಗಂಟೆ ಸುಮಾರಿಗೆ ಶುರುವಾಗಿ 7 ಗಂಟೆಯವರೆಗೂ ಸುರಿಯಿತು. ಪರಿಣಾಮ ಫೈವ್‍ಲೆಟ್ ವೃತ್ತ ಹಾಗೂ ಸುಣ್ಣದಕೇರಿ ಮಹದೇಶ್ವರ ದೇವ ಸ್ಥಾನದ ಬಳಿ ಬೃಹತ್ ಮರಗಳು ಧರೆಗುರುಳಿದರೆ, ದೇವರಾಜ ಅರಸು ರಸ್ತೆ ಸಮೀಪ ದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಎದುರು ಮರವೊಂದರ ಕೊಂಬೆಗಳು ಮುರಿದುಬಿದ್ದಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿ ಸಿದ ಪಾಲಿಕೆ ಅಭಯ ತಂಡದವರು ಮುರಿದು ಬಿದ್ದ ಮರಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಗರದ ಪ್ರಮುಖ ರಸ್ತೆಗಳು ಮಳೆ ನೀರಿನಿಂದ ಕೆರೆಯಂತಾಗಿದ್ದವು. ತಗ್ಗು ಪ್ರದೇಶದಲ್ಲಿನ ವಿದ್ಯಾರಣ್ಯಪುರಂ, ಗೌರಿಶಂಕರನಗರ, ಗುಂಡೂರಾವ್‍ನಗರದ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಗೌರಿಶಂಕರನಗರ ಹಾಗೂ ವಿಶ್ವೇಶ್ವರನಗರದ ಸಮೀಪದ ದೇವರಾಜ ಅರಸು ಕಾಲೋನಿ ಸೇರಿ ಎರಡು ಮನೆಗಳಿಗೆ ಚರಂಡಿ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ.

Translate »