ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿಢೀರ್ ಹೆಚ್ಚಳ ರಾಜಧಾನಿಯಲ್ಲಿ ಗುರುವಾರ 925  ಮಂದಿಗೆ ಕೋವಿಡ್-19 ಸೋಂಕು ದೃಢ
ಮೈಸೂರು

ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿಢೀರ್ ಹೆಚ್ಚಳ ರಾಜಧಾನಿಯಲ್ಲಿ ಗುರುವಾರ 925 ಮಂದಿಗೆ ಕೋವಿಡ್-19 ಸೋಂಕು ದೃಢ

March 19, 2021

ಮೈಸೂರು, ಮಾ.18(ವೈಡಿಎಸ್)- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗುರುವಾರ ಬೆಂಗಳೂರಿನ 925 ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟು 1,488 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿಗೆ ಒಳಗಾಗಿದ್ದವರಲ್ಲಿ 341 ಮಂದಿ ಗುಣಮುಖರಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಗುರುವಾರ 49 ಮಂದಿಗೆ ಸೋಂಕು ತಗುಲಿದ್ದರೆ, 30 ಮಂದಿ ಗುಣ ಕಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 54,663 ಮಂದಿಗೆ ಸೋಂಕು ತಗುಲಿದಂತಾಗಿದೆ. 53,325 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಬಗ್ಗೆ ವರದಿಯಾಗಿಲ್ಲ. ಈವರೆಗೆ ಒಟ್ಟು 1,039 ಸೋಂಕಿತರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿನ್ನೂ 269 ಮಂದಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 79 ಮಂದಿ ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ-ನಿಗಾ ಕೇಂದ್ರಗಳಲ್ಲಿ 58, ಖಾಸಗಿ ಆಸ್ಪತ್ರೆಗಳು-ನಿಗಾ ಕೇಂದ್ರಗಳಲ್ಲಿ 132 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 9,21,839 ಮಂದಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ.
ರಾಜ್ಯದ ವಿವರ: ಹಾವೇರಿ ಜಿಲ್ಲೆಯಲ್ಲಿ ಗುರುವಾರ ಒಂದೂ ಪ್ರಕರಣ ವರದಿ ಯಾಗಿಲ್ಲ. ಉಳಿದಂತೆ ಬಾಗಲಕೋಟೆ 1, ಬಳ್ಳಾರಿ 8, ಬೆಳಗಾವಿ 24, ಬೆಂಗಳೂರು ಗ್ರಾಮಾಂತರ 26, ಬೆಂಗಳೂರು ನಗರ 925, ಬೀದರ್ 53, ಚಾಮರಾಜನಗರ 5, ಚಿಕ್ಕಬಳ್ಳಾಪುರ 11, ಚಿಕ್ಕಮಗಳೂರು 13, ಚಿತ್ರದುರ್ಗ 4, ದಕ್ಷಿಣಕನ್ನಡ 64, ದಾವಣಗೆರೆ 6, ಧಾರವಾಡ 18, ಗದಗ್ 4, ಹಾಸನ 30, ಕಲಬುರಗಿ 59, ಕೊಡಗು 2, ಕೋಲಾರ 14, ಕೊಪ್ಪಳ 1, ಮಂಡ್ಯ 13, ಮೈಸೂರು 49, ರಾಯಚೂರು 6, ರಾಮನಗರ 1, ಶಿವಮೊಗ್ಗ 12, ತುಮಕೂರು 41, ಉಡುಪಿ 38, ಉತ್ತರ ಕನ್ನಡ 9, ವಿಜಯಪುರ 46, ಯಾದಗಿರಿ 5 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 9,65,102ಕ್ಕೆ ಏರಿಕೆಯಾಗಿದೆ. 9,41,309 ಸೋಂಕಿತರು ಗುಣಮುಖರಾದಂತಾಗಿದೆ. ಇಂದು ವರದಿಯಾದ 8 ಸಾವಿನ ಪ್ರಕರಣ ಸೇರಿ ಈವರೆಗೆ 12,415 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿನ್ನೂ 11,359 ಸಕ್ರಿಯ ಪ್ರಕರಣಗಳಿವೆ.

Translate »