ಕೇರಳದಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಕಡ್ಡಾಯ
ಮೈಸೂರು

ಕೇರಳದಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಕಡ್ಡಾಯ

March 19, 2021

ಮೈಸೂರು, ಮಾ.18-ಕೋವಿಡ್-19 2ನೇ ಅಲೆ ಭೀತಿ ಹಿನ್ನೆಲೆ ಯಲ್ಲಿ ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಕೇರಳದಿಂದ ಬರುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಕಡ್ಡಾಯವಾಗಿದೆ ಎಂದು ಮೈಸೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಎಸ್.ಪಿ ರಿಷ್ಯಂತ್, ಗಡಿಭಾಗದ ಚೆಕ್ ಪೆÇೀಸ್ಟ್‍ಗಳಲ್ಲಿ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗು ತ್ತಿದೆ. ಕೇರಳದಿಂದ ಬರುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಕಡ್ಡಾಯವಾಗಿದ್ದು, ಒಂದು ವೇಳೆ ಟೆಸ್ಟ್ ಮಾಡಿಸದೆ ಬಂದ ಪ್ರಯಾಣಿಕರಿಗೆ, ಸ್ಥಳದಲ್ಲೇ ರ್ಯಾಪಿಡ್ ಟೆಸ್ಟ್ ಮಾಡಲಾಗುತ್ತದೆ. ಕೊರೊನಾ ತಡೆಗೆ ಕ್ರಮ ಕುರಿತು ವಯನಾಡ್ ಎಸ್.ಪಿ ಅರವಿಂದ್ ಜೊತೆ ಮಾತನಾಡಿ ಆರ್.ಟಿ. ಪಿ.ಸಿ.ಆರ್ ಟೆಸ್ಟ್‍ಗೆ ಹೆಚ್ಚು ಆದ್ಯತೆ ನೀಡು ವಂತೆ ಹೇಳಿದ್ದೇವೆ ಎಂದು ತಿಳಿಸಿದರು.

ಉಳಿದಂತೆ ಚಾಮರಾಜನಗರ, ಹಾಸನ ಕೊಡಗು, ಮಂಡ್ಯ ಮತ್ತು ಬೆಂಗಳೂರಿಂದ ಬರುವವರಿಗೆ ಯಾವುದೇ ನಿರ್ಬಂಧ ಸದ್ಯಕ್ಕಿಲ್ಲ. ಮೈಸೂರಿಗೆ ಮಹಾರಾಷ್ಟ್ರದಿಂದ ಬರುವ ಪ್ರವಾಸಿಗರ ಸಂಖ್ಯೆ ಕಮ್ಮಿ, ಆಯಾ ಭಾಗ ಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಂಡಿದ್ದಾರೆ ಎಂದು ರಿಷ್ಯಂತ್ ಹೇಳಿದರು.

Translate »