ಒಂದು ದಿನದ ಮುಷ್ಕರ: ಮೈಸೂರಲ್ಲಿ ಯಶಸ್ವಿ
ಮೈಸೂರು

ಒಂದು ದಿನದ ಮುಷ್ಕರ: ಮೈಸೂರಲ್ಲಿ ಯಶಸ್ವಿ

March 20, 2021

ಮೈಸೂರು,ಮಾ.18(ಪಿಎಂ)-ಭಾರತೀಯ ಜೀವ ವಿಮಾ ನಿಗಮವನ್ನು (ಎಲ್‍ಐಸಿ) ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವುದು, ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿ ಹೆಚ್ಚಿಸುವುದು ಹಾಗೂ ಖಾಸಗೀಕರಣದ ಪ್ರಸ್ತಾಪಗಳನ್ನು ಕೇಂದ್ರ ಸರ್ಕಾರ ಕೈಬಿಡ ಬೇಕೆಂದು ಒತ್ತಾಯಿಸಿ ದೇಶಾದ್ಯಂತ ಎಲ್‍ಐಸಿ ಅಧಿಕಾರಿ ಹಾಗೂ ನೌಕರ ವರ್ಗ ಗುರುವಾರ 1 ದಿನದ ಮುಷ್ಕರ ನಡೆಸಿತು.

ಅಂತೆಯೇ ಮೈಸೂರು ವಿಭಾಗದ ವ್ಯಾಪ್ತಿ ಯಲ್ಲೂ ಅಧಿಕಾರಿ ಮತ್ತು ನೌಕರ ವರ್ಗ ಗುರುವಾರ ಕೆಲಸ ಸ್ಥಗಿತಗೊಳಿಸಿ, ಒಂದು ದಿನದ ಮುಷ್ಕರ ಯಶಸ್ವಿಗೊಳಿಸಿದೆ. ಅಲ್ಲದೆ, ಮುಷ್ಕರದ ಅಂಗವಾಗಿ ಮೈಸೂರಿನ ಬನ್ನಿ ಮಂಟಪದ ಎಲ್‍ಐಸಿ ವಿಭಾಗೀಯ ಕಾರ್ಯಾಲಯದ ಎದುರು ಗಂಟೆಗೂ ಹೆಚ್ಚು ಕಾಲ ಸಾಂಕೇತಿಕ ಪ್ರತಿಭಟನೆ ನಡೆಸಿದ ಅಧಿಕಾರಿಗಳು ಮತ್ತು ನೌಕರರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಲ್‍ಐಸಿ ಕ್ಲಾಸ್-1 ಅಧಿಕಾರಿಗಳ ಫೆಡ ರೇಷನ್, ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ಗಳ ಸಂಘ, ವಿಮಾ ನಿಗಮ ನೌಕರರ ಸಂಘ, ಜೀವ ವಿಮಾ ನಿಗಮ ನೌಕರರ ಸಂಘ, ಭಾರತೀಯ ಜೀವ ವಿಮಾ ಪ್ರತಿನಿಧಿ ಗಳ ಒಕ್ಕೂಟ, ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆ ಸಂಯುಕ್ತಾಶ್ರಯ ದಲ್ಲಿ ಪ್ರತಿಭಟನೆ ನಡೆಸಲಾಯಿತು.

ಆರಂಭಿಕ ಸಾರ್ವಜನಿಕ ಕೊಡುಗೆ (ಐಓಪಿ) ನೀಡುವ ಷೇರು ಮಾರುಕಟ್ಟೆಯಲ್ಲಿ ಎಲ್‍ಐಸಿಯನ್ನು ಪಟ್ಟಿ ಮಾಡುವ ಪ್ರಸ್ತಾಪ ಕೈಬಿಡಬೇಕು. ಷೇರು ಮಾರುಕಟ್ಟೆಯಲ್ಲಿ ಎಲ್‍ಐಸಿ ಪಟ್ಟಿ ಮಾಡಿದರೆ ಕಂಪನಿಯಲ್ಲಿ ಪಾರದರ್ಶಕತೆ ಬರುತ್ತದೆ ಎಂಬ ಸರ್ಕಾ ರದ ವಾದ ಅವೈಜ್ಞಾನಿಕ. ಎಲ್‍ಐಸಿ ಒಂದು ಪಾರದರ್ಶಕ ಸಂಸ್ಥೆಯಾಗಿದ್ದು, ಕೇಂದ್ರ ಮಾಹಿತಿ ಆಯೋಗ ನಡೆಸಿದ ಪಾರ ದರ್ಶಕ ಲೆಕ್ಕಪರಿಶೋಧನೆಯಲ್ಲಿ ಎಲ್‍ಐಸಿಗೆ ಗ್ರೇಡ್-ಎ ಸ್ಥಾನ ದೊರೆತಿದೆ. ಅಲ್ಲದೆ, ನಿಗಮವು ಪ್ರತಿ ತ್ರೈಮಾಸಿಕದಲ್ಲಿ ಸಾರ್ವ ಜನಿಕ ಪ್ರಕಟಣೆಗಳನ್ನು ಹೊರತರುತ್ತಿದೆ. ಜೊತೆಗೆ ಪ್ರತಿ ತಿಂಗಳು ತನ್ನ ಕಾರ್ಯ ವೈಖರಿ ಬಗ್ಗೆ ವರದಿಯನ್ನು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುತ್ತಿದೆ. ಹೀಗಾಗಿ ಷೇರು ಮಾರುಕಟ್ಟೆ ಮೂಲಕ ಪಾರದರ್ಶಕತೆ ಬರುತ್ತದೆ ಎಂಬುದು ಎಲ್‍ಐಸಿಗೆ ಅನ್ವಯಿಸುವುದಿಲ್ಲ ಎಂದು ಪ್ರತಿಪಾದಿಸಿದರು.

ಎಲ್‍ಐಸಿ, ಭಾರತೀಯ ಆರ್ಥಿಕತೆ ಯಲ್ಲಿ ಅತೀ ದೊಡ್ಡ ಹೂಡಿಕೆ ಮಾಡು ತ್ತಿದ್ದು, ಪ್ರತಿ ವರ್ಷ 3.5ರಿಂದ 4 ಲಕ್ಷ ಕೋಟಿ ರೂ. ಹೂಡಿಕೆಗೆ ಹಣವನ್ನು ಉತ್ಪಾದಿ ಸುತ್ತಿದೆ. ಆದ್ದರಿಂದ ನಿಧಿಗಾಗಿ ಎಲ್‍ಐಸಿ ಷೇರು ಮಾರುಕಟ್ಟೆಗೆ ಪಟ್ಟಿಯಾಗುವ ಅಗತ್ಯ ವಿಲ್ಲ. 2020ರ ಮಾರ್ಚ್ 31ರ ವೇಳೆಗೆ ಎಲ್‍ಐಸಿಯ ಒಟ್ಟು ಹೂಡಿಕೆ 30,69,942 ಕೋಟಿ ರೂ. ಆಗಿದೆ. ಅಲ್ಲದೆ, ಇದೇ ಅವಧಿಗೆ ಎಲ್‍ಐಸಿ ವತಿಯಿಂದ ಸರ್ಕಾರಿ ಮತ್ತು ಸಾಮಾಜಿಕ ವಲಯದಲ್ಲಿ 24,01, 457 ಕೋಟಿ ರೂ. ಹೂಡಿಕೆ ಮಾಡಲಾ ಗಿದೆ. ಸರ್ಕಾರದ ಸಾಲ ಸಂಬಂಧ ಶೇ. 25ರಷ್ಟಕ್ಕೂ ಹೆಚ್ಚು ಹಣವನ್ನು ಎಲ್‍ಐಸಿ ನೀಡುತ್ತಿರುವುದು ಗಮನಾರ್ಹ. ಹೀಗಾಗಿ ಎಲ್‍ಐಸಿಯಲ್ಲಿ ಹಣದ ಕೊರತೆ ಇಲ್ಲ ಹಾಗೂ ಸಂಪನ್ಮೂಲಗಳಿಗಾಗಿ ನಿಗಮವು ಷೇರು ಮಾರುಕಟ್ಟೆಗೆ ಹೋಗುವ ಅನಿ ವಾರ್ಯವೂ ಇಲ್ಲ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

2015ರಲ್ಲಿ ಖಾಸಗಿಯವರ ಒತ್ತಡಕ್ಕೆ ಮಣಿದು ಎಲ್‍ಐಸಿಯಲ್ಲಿ ಶೇ.26ರಿಂದ ಶೇ.49ಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿ ಹೆಚ್ಚಳ ಮಾಡಲಾಯಿತು. ಇದೀಗ ಬಜೆಟ್‍ನಲ್ಲಿ ಈ ಮಿತಿಯನ್ನು ಶೇ.74ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿದೆ. ಇದು ಜಾರಿಯಾದರೆ ವಿದೇಶಿ ಕಂಪನಿಗಳು ಸಂಪೂರ್ಣ ಅಧಿಕಾರ ನಡೆಸಲಿವೆ. ಹೀಗಾಗಿ ಈ ಪ್ರಸ್ತಾಪ ಕೈಬಿಡಬೇಕು. ವಿದೇಶಿ ನೇರ ಬಂಡವಾಳ ಹೆಚ್ಚಳ ಹಾಗೂ ವಿಮೆಯಲ್ಲಿ ವಿದೇಶಿ ಮಾಲೀಕತ್ವಕ್ಕೆ ಅವಕಾಶ ನೀಡು ವುದು ದೇಶದ ಜನತೆಯ ಅಮೂಲ್ಯವಾದ ಉಳಿತಾಯವನ್ನು ವಿದೇಶಿ ಬಂಡವಾಳದ ಕೈಗೆ ನೀಡಿದಂತೆ ಎಂದು ಖಂಡಿಸಿದರು.

ಯಾವುದೇ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿ ಖಾಸಗೀಕರಣ ಗೊಳಿಸುವುದು ರಾಷ್ಟ್ರದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಎಲ್‍ಐಸಿಯಲ್ಲಿನ ಬಂಡವಾಳ ಹಿಂತೆಗೆಯುವುದು ಖಾಸಗೀಕರಣದ ಮೊದಲ ಹೆಜ್ಜೆಯಾಗಲಿದೆ. ಮುಂದಿನ ಐದು ವರ್ಷ ಗಳಲ್ಲಿ ಶೇ.30ರಿಂದ 50ರಷ್ಟು ಷೇರು ಮಾರಾಟ ಮಾಡಲು ಉದ್ದೇಶಿಸಲಾಗಿದ್ದು, ಇದು ಎಲ್‍ಐಸಿಯ ಸಾರ್ವಜನಿಕ ವಲ ಯದ ಸ್ವರೂಪ ಬದಲಿಸಲಿದೆ ಎಂದು ಕಿಡಿ ಕಾರಿದರು. ಎಲ್‍ಐಸಿಯ ವಿವಿಧ ಸಂಘ ಟನೆಗಳ ಮುಖಂಡರಾದ ಎಸ್.ಕೆ.ರಾಮು, ಎಸ್‍ಎಸ್.ನಾಗೇಶ್, ಜೆ.ಸುರೇಶ್, ಬಾಲಾಜಿ ರಾವ್, ಸುಬ್ರಹ್ಮಣ್ಯ, ವಿದ್ಯಾವತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »