ಮೈಸೂರಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ
ಮೈಸೂರು

ಮೈಸೂರಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ

March 20, 2021

ಮೈಸೂರು, ಮಾ.18(ಆರ್‍ಕೆಬಿ)- ಮೈಸೂರಿನ ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು ಇಂಡಿ ಯನ್ ರಬ್ಬರ್ ಇನ್ಸ್‍ಟಿಟ್ಯೂಟ್ (ಐಆರ್‍ಐ) ಸಹಯೋಗದಲ್ಲಿ ಮೈಸೂರಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ (ರಬ್ಬರ್ ತಂತ್ರಜ್ಞಾನ ಉತ್ಕøಷ್ಠತೆಯ ಕೇಂದ್ರ) ಸ್ಥಾಪನೆಗೆ ಮುಂದಾಗಿದೆ.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪ ಲಿನ ಸುತ್ತೂರು ಮಠದಲ್ಲಿ ಗುರುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖ ದಲ್ಲಿ ಐಆರ್‍ಐ ಆಡಳಿತ ಸಮಿತಿ ಅಧ್ಯಕ್ಷ ಡಾ.ಆರ್.ಮುಖ್ಯೋಪಾಧ್ಯಾಯ ಮತ್ತು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್‍ಮಠ ಒಡಂ ಬಡಿಕೆಗೆ ಸಹಿ ಹಾಕಿ, ದಾಖಲೆಗಳ ವಿನಿಮಯ ಮಾಡಿಕೊಂಡರು.

ಇಂಜಿನಿಯರುಗಳು, ವಿಜ್ಞಾನಿಗಳು, ಶಿಕ್ಷಣ ತಜ್ಞರುಗಳನ್ನು ಒಳಗೊಂಡ ವೃತ್ತಿ ಪರ ಸಂಸ್ಥೆಯಾಗಿರುವ ಇಂಡಿಯನ್ ರಬ್ಬರ್ ಇನ್ಸ್‍ಟಿಟ್ಯೂಟ್, ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾ ಲಯದ ಆವರಣದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಪ್ರಾರಂಭವಾಗಲಿದೆ. ಕೇಂದ್ರ ಸ್ಥಾಪನೆಗೆ ಜೆಎಸ್‍ಎಸ್ ವಿದ್ಯಾಪೀಠವು 10,000 ಚದರಡಿ ಪ್ರದೇಶವನ್ನು ದೀರ್ಘ ಅವಧಿಗೆ ಗುತ್ತಿಗೆ ನೀಡಿದೆ ಎಂದು ಐಆರ್‍ಐ ಮೈಸೂರು ಆಡಳಿತ ಸಮಿತಿ ಅಧ್ಯಕ್ಷ ಡಾ.ಆರ್.ಮುಖ್ಯೋಪಾಧ್ಯಾಯ ಈ ಸಂದರ್ಭದಲ್ಲಿ ತಿಳಿಸಿದರು.

ನೂರಾರು ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ನೀಡುವ ಮೂಲಕ ಉದ್ಯೋಗ ಕಲ್ಪಿಸುವುದು ಕೇಂದ್ರದ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮೈಪಾಲ್ ಸಿಇಒ ಡಾ.ಬಿ.ರಾಜಗೋಪಾಲಯ್ಯ, ಜೆಕೆ ಟೈರ್ಸ್‍ನ ವಕ್ರ್ಸ್ ವಿಭಾಗದ ಉಪಾ ಧ್ಯಕ್ಷ ಈಶ್ವರ್ ರಾವ್, ಜೆಎಸ್‍ಎಸ್ ಪಾಲಿಟೆಕ್ನಿಕ್‍ನ ತಾಂತ್ರಿಕ ಸಲಹೆಗಾರ ಪೆÇ್ರ. ಎಂ.ಎಚ್.ಧನಂಜಯ ಇನ್ನಿ ತರರು ಉಪಸ್ಥಿತರಿದ್ದರು.

Translate »