ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಕೌಶಲ್ಯದ ಬಗ್ಗೆ ರತನ್ ಟಾಟಾ ಪ್ರಶಂಸೆ
ಮೈಸೂರು

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಕೌಶಲ್ಯದ ಬಗ್ಗೆ ರತನ್ ಟಾಟಾ ಪ್ರಶಂಸೆ

December 21, 2020

ನವದೆಹಲಿ, ಡಿ.20- ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಕೌಶಲ್ಯವನ್ನು ಉದ್ಯಮ ದಿಗ್ಗಜ ರತನ್ ಟಾಟಾ ಶ್ಲಾಘಿಸಿದ್ದಾರೆ. ಸಂಕಷ್ಟದ ಸಮಯ ದಲ್ಲಿ ಯಾವುದೇ ಅಡೆ ತಡೆಯಿಲ್ಲದೆ ದೇಶವನ್ನು ಮೋದಿ ಅತ್ಯಂತ ಸಮರ್ಥ ವಾಗಿ ಮುನ್ನಡೆಸುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ. ಅತ್ಯಂತ ಸಂಕಷ್ಟದ ಸಾಂಕ್ರಾಮಿಕ ಸಮಯದಲ್ಲಿ, ಆರ್ಥಿಕ ಸ್ಥಿತಿ ಕುಸಿಯುವ ಸಮಯದಲ್ಲಿ ಅವರು ನೀಡಿದ ನಾಯಕತ್ವದ ಬಗ್ಗೆ ನನಗೆ ಗೌರವವಿದೆ. ನೀವು ಯಾವುದೇ ನಿರ್ಧಾರ ಕೈಗೊಳ್ಳಲು ಹಿಂಜರಿಯ ಲಿಲ್ಲ, ಸಮಸ್ಯೆಗಳಿಂದ ಪಲಾಯನವಾಗಲಿಲ್ಲ, ದೇಶವನ್ನು ಸಮರ್ಥವಾಗಿ ಮುನ್ನಡೆಸಿದ್ದೀರಿ ಎಂದು ಟಾಟಾ, ಮೋದಿ ಅವರಿಗೆ ಹೇಳಿದರು.

ಮೋದಿ ನಾಯಕತ್ವಕ್ಕೆ ಎಲ್ಲರೂ ಸಕಾರಾತ್ಮಕವಾಗಿ ಇರಬೇಕು. ಪ್ರತಿಪಕ್ಷ ಗಳಲ್ಲಿ ಅಸಮಾಧಾನ ಎನ್ನುವುದು ಇರುತ್ತದೆ. ಆದರೆ, ಯಾವುದೇ ಹಿಂಜರಿಕೆ ಹಾಗೂ ಸಮಸ್ಯೆಗೆ ಬೆನ್ನು ತಿರುಗಿಸದೆ ಲಾಕ್‍ಡೌನ್ ವಿಧಿಸಿದರು. ದೇಶಾ ದ್ಯಂತ ಕೆಲ ನಿಮಿಷಗಳ ಕಾಲ ದೀಪ ಬೆಳಗಬೇಕು ಎಂದು ಜನತೆಯನ್ನು ಕೋರಿದ್ದರು. ಅದು ನಡೆಯುವಂತೆ ಮಾಡಿದರು. ಇದರಲ್ಲಿ ಯಾವುದೇ ನಾಟಕೀಯತೆ ಇಲ್ಲ. ಇಂತಹ ಕ್ರಿಯೆಗಳು ನಮ್ಮ ದೇಶವನ್ನು ಒಗ್ಗೂಡಿಸು ತ್ತದೆ ಎಂದರು. ಸಮರ್ಥ ನಾಯಕತ್ವದಿಂದ ದೇಶಕ್ಕಾಗುವ ಪ್ರಯೋಜನ ಗಳನ್ನು ಹೇಳುವುದು ಉದ್ಯಮ ವಲಯದ ಜವಾಬ್ದಾರಿಯಾಗಿದೆ. ನಾವು ಆ ಕರ್ತವ್ಯವನ್ನು ನಿರ್ವಹಿಸುತ್ತೇವೆ ಎಂಬ ವಿಶ್ವಾಸವಿದೆ ಎಂದರು.

Translate »