ಜ.15ರ ನಂತರ ಜೆಡಿಎಸ್‍ಗೆ ಸಿ.ಎಂ.ಇಬ್ರಾಹಿಂ?
ಮೈಸೂರು

ಜ.15ರ ನಂತರ ಜೆಡಿಎಸ್‍ಗೆ ಸಿ.ಎಂ.ಇಬ್ರಾಹಿಂ?

December 21, 2020

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಧ್ರುವೀಕರಣ ಪ್ರಾರಂಭವಾಗಿದ್ದು ಮಾಜಿ ಕೇಂದ್ರ ಸಚಿವ, ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಜನವರಿ 15ರ ನಂತರ ಜೆಡಿಎಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುದ್ದಿಸಂಸ್ಥೆ ವರದಿ ಮಾಡಿರುವಂತೆ, ಕಾಂಗ್ರೆಸ್ ಪಕ್ಷ ತಮ್ಮನ್ನು ನಿರ್ಲಕ್ಷಿಸಿದೆ ಎಂಬ ಕಾರಣಕ್ಕಾಗಿ ಅಸಮಾಧಾನಗೊಂಡಿರುವ ಸಿ.ಎಂ.ಇಬ್ರಾಹಿಂ ಈಗಾಗಲೇ ಪಕ್ಷ ಬಿಡುವ ಸುಳಿವು ನೀಡಿದ್ದಾರೆ. ಆದರೆ ಅದಕ್ಕೂ ಮುನ್ನ ರಾಜ್ಯಾದ್ಯಂತ ಇರುವ ತಮ್ಮ ಬೆಂಬಲಿಗರು, ಆಪ್ತರ ಜತೆ ಚರ್ಚಿಸಲು ಇಬ್ರಾಹಿಂ ನಿರ್ಧರಿಸಿದ್ದು ಇದಕ್ಕೆ ಪೂರಕ ವಾಗಿ ಮಾತುಕತೆ ಆರಂಭಿಸಿದ್ದಾರೆ. ಜನವರಿ 15ರ ನಂತರ ವಿಧ್ಯುಕ್ತ ವಾಗಿ ಜೆಡಿಎಸ್ ಸೇರಲಿರುವ ಅವರು ನಂತರ ಪಕ್ಷದ ನಾಯಕರ ಜತೆ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮಾಂತ್ರಿಕ ಮಾತುಗಾರ ಎಂದೇ ಹೆಸರಾಗಿರುವ ಇಬ್ರಾಹಿಂ ಸೇರ್ಪಡೆಯಿಂದ ಜೆಡಿಎಸ್ ಬಲ ಹೆಚ್ಚಲಿದೆ. ಈ ಹಿಂದೆ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾದ ನಂತರ ರಾಜ್ಯ ಜನತಾದಳದ ಅಧ್ಯಕ್ಷರಾಗಿದ್ದ ಇಬ್ರಾಹಿಂ, ಬಹುಕಾಲ ಬಗೆಹರಿಯದೆ ಉಳಿದಿದ್ದ ಈದ್ಗಾ ಮೈದಾನದ ವಿವಾದ ಬಗೆಹರಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಹೊರಟ್ಟಿ ಸ್ಪಷ್ಟನೆ: ಇನ್ನು ಈ ಹಿಂದೆ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರೂ ಕೂಡ ಸಿಎಂ ಇಬ್ರಾಹಿಂ ಜೆಡಿಎಸ್ ಸೇರುವ ಕುರಿತು ಮಾತನಾಡಿದ್ದರು. ಇತ್ತೀಚೆಗಷ್ಟೇ ಇಬ್ರಾಹಿಂ ಅವರು ಹುಬ್ಬಳ್ಳಿಯ ಹೊರಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ಇಬ್ರಾಹಿಂ ಭೇಟಿ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಹುಬ್ಬಳ್ಳಿಗೆ ಬಂದಾ ಗಲ್ಲೆಲ್ಲ ನಾವು ಭೇಟಿಯಾಗುತ್ತಲೇ ಇರುತ್ತೇವೆ. ಇಬ್ರಾಹಿಂ ಬಿಜೆಪಿ ಸೇರಲ್ಲ, ಅದು ಊಹಾಪೆÇೀಹ. ಅವರು ಜನತಾದಳದಲ್ಲಿ ಮೊದಲಿನಿಂದ ಇದ್ದವರು, ಜನತಾದಳಕ್ಕೆ ಬರಬಹುದು. ಆದರೆ ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

Translate »